ಜ.8ರಿಂದ ಕೌಡೇಲು ದಾರುಲ್ ಇಝ್ಝ ವಿದ್ಯಾ ಸಂಸ್ಥೆಯಲ್ಲಿ ಸ್ವಲಾತ್ ವಾರ್ಷಿಕೋತ್ಸವ
ವಿಟ್ಲ : ಪಾಣೆಮಂಗಳೂರು-ಕೌಡೇಲು ದಾರುಲ್ ಇಝ್ಝ ವಿದ್ಯಾ ಸಂಸ್ಥೆಯಲ್ಲಿ ಸ್ವಲಾತ್ ವಾರ್ಷಿಕೋತ್ಸವ, ಪೊಸೋಟು ತಂಙಳ್ ಅನುಸ್ಮರಣೆ ಹಾಗೂ ಮಿಲಾದ್ ಕಾನ್ಫರೆನ್ಸ್ ಕಾರ್ಯಕ್ರಮವು ಜ 8 ಹಾಗೂ 9 ರಂದು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ.
ಸಯ್ಯಿದ್ ಉಜಿರೆ ತಂಙಳ್ ದುವಾಶಿರ್ವಚನಗೈಯಲಿದ್ದು, ಸ್ವಾದಿಕ್ ಸಖಾಫಿ ಕರಿಂಬಿಲ ಮುಖ್ಯ ಭಾಷಣಗೈಯುವರು. ಮುಖ್ಯ ಅಥಿತಿಗಳಾಗಿ ರಾಜ್ಯ ಅರಣ್ಯ ಸಚಿವ ಬಿ. ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ. ಖಾದರ್, ಹಾಜಿ ಬಿ.ಎಚ್. ಅಬೂಸ್ವಾಲಿಹ್ ಮುಸ್ಲಿಯಾರ್ ಆಲಡ್ಕ, ಹಂಝ ಮದನಿ ಮಿತ್ತೂರು, ಹಂಝ ಸಖಾಫಿ ಬಂಟ್ವಾಳ ಮೊದಲಾದವರು ಭಾಗವಹಿಸುವರು.
ಜ 9 ರಂದು ಬೆಳಿಗ್ಗೆ ಮಕ್ಕಳ ಪ್ರತಿಭಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸಂಸ್ಥೆಯ ಮ್ಯಾನೇಜರ್ ಅರ್ಶದ್ ಸಖಾಫಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





