ಪ್ರಧಾನಿ ಮೋದಿಗೆ ಪಾಕ್ ಪ್ರಧಾನಿ ನವಾಜ್ ದೂರವಾಣಿ ಕರೆ : ಪಠಾನ್ ಕೊಟ್ ಭಯೋತ್ಪಾದಕ ದಾಳಿ ತನಿಖೆಗೆ ಪೂರ್ಣ ಸಹಕಾರದ ಭರವಸೆ

ಹೊಸದಿಲ್ಲಿ , ಜ . ೫: ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್ ಶರೀಫ್ , ಪಠಾನ್ ಕೋಟ್ ಭಯೋತ್ಪಾದಕ ದಾಳಿಯ ಕುರಿತ ತನಿಖೆಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಭಾರತೀಯ ಬೇಹು ಸಂಸ್ಥೆಗಳು ನೀಡಿರುವ ಮಾಹಿತಿಯನ್ನಾಧರಿಸಿ ಅಪರಾಧಿಗಳಿಗೆ ಶಿಕ್ಷೆ ನೀಡಲು ಕ್ರಮ ಕೈ ಗೊಳ್ಳುವುದಾಗಿ ಅವರು ಪ್ರಧಾನಿ ಮೋಡಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಭಯೋತ್ಪಾದಕರು ಪಾಕಿಸ್ತಾನದೊಂದಿಗೆ ಸಂಪರ್ಕ ಮಾಡಿರುವ ಕುರಿತ ದೂರವಾಣಿ ಕರೆಗಳು ಹಾಗು ದಾಳಿಯಲ್ಲಿ ಬಳಸಿದ ಶಸ್ತ್ರಾಸ್ತ್ರಗಳ ಕುರಿತ ಮಾಹಿತಿಯನ್ನು ಭಾರತೀಯ ತನಿಖಾ ಸಂಸ್ಥೆಗಳು ಪಾಕ್ ಸರಕಾರಕ್ಕೆ ನೀಡಿದ್ದವು.
Next Story





