ದುಬೈ; ‘ಧೂಮ್ ಧಮಾಕ-2016’ ಕಾಮಿಡಿ ಶೋಗೆ ಕ್ಷಣಗಣನೆ
ದುಬೈ, ಜ.6: ದುಬೈಯ ಇಂಡಿಯನ್ ಹೈಸ್ಕೂಲ್‌ನ ಶೇಖ್ ರಶೀದ್ ಆಡಿಟೋರಿಯಂನಲ್ಲಿ ಜನವರಿ 8ರಂದು ನಡೆಯಲಿರುವ ಅದ್ದೂರಿಯ ‘ಧೂಮ್ ಧಮಾಕ-2016’ ಕಾಮಿಡಿ ಶೋ ಪ್ರದರ್ಶನಕ್ಕೆ ವೇದಿಕೆ ಸಿದ್ಧಗೊಂಡಿದ್ದು, ಹಾಸ್ಯ ಚಕ್ರವರ್ತಿ ಎಂದೇ ಖ್ಯಾತರಾಗಿರುವ ಬಾಲಿವುಡ್ ನಟ ಜಾನಿ ಲಿವರ್‌ನ ಹಾಸ್ಯವನ್ನು ಆನಂದಿಸಲು ಜನ ಕಾತುರದಿಂದ ಕಾಯುತ್ತಿದ್ದಾರೆ.
ದುಬೈ ಅಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್‌ನ ಆಡಳಿತ ನಿರ್ದೇಶಕ, ಖ್ಯಾತ ಹಾಡುಗಾರರೂ ಆಗಿರುವ ಹರೀಶ್ ಶೇರಿಗಾರ್ ನೇತೃತ್ವದಲ್ಲಿ ಮೂರನೇ ಬಾರಿಗೆ ಈ ಅದ್ದೂರಿಯ ಪ್ರದರ್ಶನ ನಡೆಯುತ್ತಿದ್ದು, ಇದರಿಂದ ಬರುವ ಹಣವನ್ನೆಲ್ಲಾ ತವರೂರಿನ(ಮಂಗಳೂರು) ಬಡವರಿಗೆ, ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ನೀಡುವ ಮೂಲಕ ಮಾನವೀಯತೆ ಮರೆದಿದ್ದಾರೆ.
ಈ ಬಾರಿಯ ಧೂಮ್ ಧಮಾಕದಲ್ಲಿ ಬಾಲಿವುಡ್‌ನ ಖ್ಯಾತ, ಹೆಸರಾಂತ ಹಾಸ್ಯ ಕಲಾವಿದ, ಹಾಸ್ಯರಾಜ ಎಂದೇ ಖ್ಯಾತರಾಗಿರುವ ಜಾನಿ ಲಿವರ್ ತಮ್ಮ ಪುತ್ರಿ ಜಮಿ ಲಿವರ್ ಅವರೊಂದಿಗೆ ಪ್ರದರ್ಶನ ನೀಡುತ್ತಿರುವುದು ಸಮಾರಂಭಕ್ಕೆ ಇನ್ನಷ್ಟು ಮೆರೆಗುತಂದಿದೆ.
‘ಧೂಮ್ ಧಮಾಕ-2016’ ಕಾಮಿಡಿ ಶೋನಲ್ಲಿ ಅಂತಾರಾಷ್ಟ್ರೀಯ ಖ್ಯಾತ ನೃತ್ಯ ಪಟುಗಳಾದ ಪ್ರಥಮ ಪ್ರಸಾದ್ ರಾವ್ ಮತ್ತು ಸೂರ್ಯ ಎನ್.ರಾವ್ ಅವರ ಸಮ್ಮಿಲನ ನೃತ್ಯರೂಪಕ ಕೂಡಾ ನಡೆಯಲಿದೆ. ಸಮ್ಮಿಲನದಲ್ಲಿ ವಿವಿಧ ಮಾದರಿ, ವಿನ್ಯಾಸಗಳು, ಭಾರತೀಯ ಶಾಸ್ತ್ರೀಯ ನೃತ್ಯ ಮಾದರಿಗಳು, ಕೂಚುಪುಡಿ ಮತ್ತು ಕಥಕ್‌ನಂತಹ ನೃತ್ಯ ರೂಪಗಳು ಪ್ರದರ್ಶನಗೊಳ್ಳಲಿದೆ.
ಜಾನಿಲಿವರ್‌ನ ಹಾಸ್ಯದ ರುಚಿಯನ್ನು ಸವಿಯಲು ಯುಎಇಯ ಜನ ತುದಿಗಾಲಲ್ಲಿ ನಿಂತಿದ್ದಾರೆ. ‘ಧೂಮ್ ಧಮಾಕ-2016’ರ ಪ್ರದರ್ಶನದ ಟಿಕೆಟ್ ಖರೀದಿಗೆ ಜನ ಮುಗಿಬೀಳುತ್ತಿದ್ದು, ಕೆಲವೇ ಕೆಲವು ಟಿಕೆಟ್ ಬಾಕಿ ಉಳಿದಿದೆ.
ನಿರ್ಗತಿಕ ಮತ್ತು ಬಡವರಿಗೆ ದೇಣಿಗೆ ಸಂಗ್ರಹಿಸುವ ಮಹತ್ತರ ಉದ್ದೇಶದಿಂದ ಈ ಪ್ರದರ್ಶನ ಏರ್ಪಡಿಸಿರುವ ಹರೀಶ್ ಶೇರಿಗಾರ್‌ರ ಕಾರ್ಯಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಯುಎಇಯಲ್ಲದೆ ಬೇರೆ ಗಲ್ಫ್ ದೇಶಗಳಲ್ಲಿರುವ ಗಣ್ಯರು, ಉದ್ಯಮಿಗಳು ಕೂಡಾ ಶುಭ ಹಾರೈಸಿದ್ದಾರೆ.
ಪ್ರದರ್ಶನದ ಟಿಕೇಟ್ ಸಿಗುವ ಸ್ಥಳ:
ದುಬೈಯ ಅಲ್‌ರಾಸ್, ಮೀನಾ ಬಝಾರ್, ಕರಾಮ ಹಾಗೂ ದೇರಾದ ಚೋಯ್ತರಾಮ್ಸ್‌ನ ಔಟ್ಲೆಟ್ ನಲ್ಲಿ ಟಿಕೆಟ್ ಲಭ್ಯವಿದೆ.
ಗಿಸ್ಸೇಸ್ ನ ಅಂಬಾ(ವೀನಸ್) ರೆಸ್ಟೋರೆಂಟ್ ನಲ್ಲಿ ಟಿಕೆಟ್ ಲಭ್ಯವಿದೆ.
ಆನ್‌ಲೈನ್ ಬುಕ್ಕಿಂಗ್‌ಗಾಗಿ …….
www.dhoomdhamaka2016.com Mail: hs9466@gmail.com or SMS / whtasapp 97155- 6609466







