ಚುಟುಕು ಸುದ್ದಿಗಳು
ಜ.8: ನೃತ್ಯ ಕಾರ್ಯಕ್ರಮ
ಮಂಗಳೂರು, ಜ.5: ಗಾನ ನೃತ್ಯ ಅಕಾಡಮಿ ಮತ್ತು ನೃತ್ಯಾಂಗನ್ ಸಂಸ್ಥೆ ವತಿಯಿಂದ ‘ದ್ವಿತ’ಯುಗಳ ನೃತ್ಯ ಕಾರ್ಯಕ್ರಮ ಜ.8ರಂದು ಸಂಜೆ 6ಕ್ಕೆ ಡಾನ್‌ಬಾಸ್ಕೋ ಹಾಲ್‌ನಲ್ಲಿ ನಡೆಯಲಿದೆ ಎಂದು ಅಕಾಡಮಿಯ ನಿರ್ದೇಶಕಿ ವಿದ್ಯಾಶ್ರೀ ರಾಧಾಕೃಷ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಿಲ್ಲಿಯ ಹಿರಿಯ ಕಲಾವಿದೆ ರಮಾ ವೈದ್ಯನಾಥನ್ ಹಾಗೂ ದಕ್ಷಿಣಾ ವೈದ್ಯನಾಥನ್ ಭರತನಾಟ್ಯ ಪ್ರಸ್ತುತಪಡಿಸಲಿದ್ದಾರೆ. ‘ದ್ವಿತ’ ಎಂಬುದು ದೇವರು- ಮಾನ, ತಾಯಿ- ಮಗಳು, ವರ್ತಮಾನ- ಭವಿಷ್ಯ ಇತ್ಯಾದಿ ಆಯಾಮಗಳನ್ನು ಬಿಂಬಿಸುವ ವಿಶಿಷ್ಟ ಪ್ರಯೋಗವಾಗಿದೆ ಎಂದರು.
ನೃತ್ಯಾಂಗನ್ ನಿರ್ದೇಶಕಿ ರಾಧಿಕಾ ಶೆಟ್ಟಿ, ಗಾನ ನೃತ್ಯಅಕಾಡಮಿಯ ಕಾರ್ಯದರ್ಶಿ ರಾಧಾಕೃಷ್ಣ ಭಟ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಜ.8-12: ಚಿತ್ರಕಲಾ ಪ್ರದರ್ಶನ
ಮಂಗಳೂರು, ಜ.5: ಚಿತ್ರ ಕಲಾವಿದೆ ವೀಣಾ ಶ್ರೀನಿವಾಸ್ ರಚಿಸಿರುವ ಕಾವಿ ಕಲೆಯ ಚಿತ್ರಕಲಾ ಪ್ರದರ್ಶನ ಜ.8ರಿಂದ 12ರವರೆಗೆ ಬಳ್ಳಾಲ್‌ಬಾಗ್‌ನಲ್ಲಿರುವ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ ಎಂದು ಕಲಾವಿದೆ ವೀಣಾ ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ.8ರಂದು ಸಂಜೆ 4:30ಕ್ಕೆ ಎಂಆರ್‌ಪಿಎಲ್‌ನ ಡಿಜಿಎಂ ಲಕ್ಷ್ಮೀ ಕುಮಾರನ್ ಉದ್ಘಾಟಿಸುವರು. ಅಳಿವಿನಂಚಿನಲ್ಲಿರುವ ಕಾವಿ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಲಾ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬೈಕಾಡಿ ಜನಾರ್ದನ ಆಚಾರ್, ಕೋಟಿ ಪ್ರಸಾದ್ ಆಳ್ವ, ವಿಷ್ಣು ಶೇವಗೂರು ಉಪಸ್ಥಿತರಿದ್ದರು.
ಇಂದು ಜನಸಂಪರ್ಕ ಸಭೆ
ಉಡುಪಿ, ಜ.5: ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಜ.6ರಂದು ಬೆಳಗ್ಗೆ 10ಕ್ಕೆ ಕಾರ್ಕಳದ ಶ್ರೀಮಂಜುನಾಥ ಪೈ ಸ್ಮಾರಕ ಪ್ರತಿಷ್ಠಾನ ಸಭಾಭವನದಲ್ಲಿ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ವಿವಿಧ ಇಲಾಖಾ ಸವಲತ್ತುಗಳನ್ನು ವಿತರಿಸಲಿದ್ದಾರೆ. ಅಂದು ಅಪರಾಹ್ನ 2:30ಕ್ಕೆ ಕಾರ್ಕಳ ತಾಪಂನ ಸಾಮರ್ಥ್ಯ ಸೌಧದಲ್ಲಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಇಂದು ಆವರ್ಸೆ ಗ್ರಾಮ ಸಭೆ
ಉಡುಪಿ, ಜ.5: ಆವರ್ಸೆ ಗ್ರಾಪಂನ 2015-16ನೆ ಸಾಲಿನ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಜ.6ರಂದು ಪೂರ್ವಾಹ್ನ 11ಕ್ಕೆ ಆವರ್ಸೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜ.9: ಎಂಡೋಸಲ್ಫಾನ್ ಸಂತ್ರಸ್ತರಿಗೆ ಸಲಕರಣೆಗಳ ವಿತರಣೆ
ಮೂಡುಬಿದಿರೆ, ಜ.5: ಲಯನ್ಸ್ ಕ್ಲಬ್ ನೂರನೆ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಸಂದರ್ಭ ಜಿಲ್ಲಾಡಳಿತದಿಂದ ಗುರುತಿನ ಚೀಟಿ ವಿತರಣೆ ಹಾಗೂ ಲಯನ್ಸ್ ಕ್ಲಬ್ ನಾರಾವಿ, ಲಯನ್ಸ್ ಕ್ಲಬ್‌ಗಳಾದ ಅಳದಂಗಡಿ, ವೇಣೂರು, ಫ್ರೆಂಡ್ಸ್ ಕ್ಲಬ್ ಹೊಸಂಗಡಿ, ದ.ಕ. ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ ಹಾಗೂ ಮಂಗಳೂರು ನಾಗರಿಕ ಸೇವಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಉಚಿತವಾಗಿ 28 ಗಾಲಿ ಕುರ್ಚಿ, 35 ವಾಟರ್ ಬೆಡ್ ಹಾಗೂ ವಾಕರ್ ಎಂಡೋಪಿಡೀತರಿಗೆ ಕಿಟ್ ವಿತರಿಸುವ ಮತ್ತು ಆರೋಗ್ಯ ತಪಾಸಣಾ ಶಿಬಿರವು ಜ.9ರಂದು ನಾರಾವಿ ಹಿ.ಪ್ರಾ.ಶಾಲಾ ವಠಾರದಲ್ಲಿ ನಡೆಯಲಿದೆ ಎಂದು ನಾರಾವಿ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ರಾಮಚಂದ್ರ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ವೇಣೂರು ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎಸ್ ಗಿರೀಶ್, ಶಿರ್ತಾಡಿ ಲಯನ್ಸ್ ಕ್ಲಬ್ ಅಧ್ಯಕ್ಷ ನಾರಾಯಣ ಸಾಲ್ಯಾನ್, ಕಾರ್ಯದರ್ಶಿ ಸ್ಟಾನಿ ಪಿಂಟೋ ಉಪಸ್ಥಿತರಿದ್ದರು.
ವಿಟ್ಲ: ನಿಧಿ ಸಂಚಯನಕ್ಕೆ ಚಾಲನೆ
ವಿಟ್ಲ, ಜ.5: ವಿಟ್ಲ ಕಸಬಾ ಗ್ರಾಮದ ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ನಿಧಿ ಸಂಚಯನ ಕಾರ್ಯಕ್ರಮವು ಶ್ರೀ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆಯಿತು. ಈ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಟ್ಲ ಅರಮನೆಯ ಅರಸ ಜನಾರ್ದನವರ್ಮ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಉದ್ಯಮಿ ಅಶೋಕ್ ಕುಮಾರ್ ರೈ ಕೊಡಿಂಬಾಡಿ, ಮೇಲಾನಗುತ್ತು ಜಲಧರ ಶೆಟ್ಟಿ, ಕೋಲ್ಪೆಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಾರ ಸುರೇಶ್ ಭಟ್, ಉಮಾ ಮಹೇಶ್ವರ ವಿಶ್ವಸ್ಥ ಮಂಡಳಿ ಅಧ್ಯಕ್ಷ ಸಂಕಪ್ಪಗೌಡ ಕೈಂತಿಲ ಭಾಗವಹಿಸಿದ್ದರು.
ಉಡುಪಿ ಹಾಫ್ ಮ್ಯಾರಥಾನ್ ಲಾಂಛನ ಬಿಡುಗಡೆ
ಮಣಿಪಾಲ, ಜ.5: ಉಡುಪಿ ಜಿಲ್ಲಾ ಅಮೆಚೂರ್‌ಅಥ್ಲೆಟಿಕ್ ಸಂಸ್ಥೆಯ ಆಶ್ರಯದಲ್ಲಿ ಸಿಂಡಿಕೇಟ್ ಬ್ಯಾಂಕ್‌ನ ಪ್ರಾಯೋಜ ಕತ್ವದಲ್ಲಿ ಜ.10ರಂದು ಮಣಿಪಾಲದಲ್ಲಿ ನಡೆಯಲಿ ರುವ 10ನೆ ಉಡುಪಿ ಹಾಫ್ ಮ್ಯಾರಥಾನ್‌ನ ಲಾಂಛನವನ್ನು ಇಂದು ಸಂಜೆ ಮಣಿಪಾಲದ ಕಂಟ್ರಿ ಇನ್ ಹೊಟೇಲ್‌ನಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿಂಡಿಕೇಟ್ ಬ್ಯಾಂಕಿನ ಉಪ ಮಹಾ ಪ್ರಬಂಧಕ ಪಳಿನಿಸ್ವಾಮಿ ಲಾಂಛನವನ್ನು ಬಿಡುಗಡೆಗೊಳಿಸಿ ಮ್ಯಾರಥಾನ್ ಕೂಟಕ್ಕೆ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಹಾಗೂ ಮ್ಯಾರಥಾನ್ ಸಮಿತಿಯ ಅಧ್ಯಕ್ಷ ಕೆ.ರಘುಪತಿ ಭಟ್ ಮಾತನಾಡಿ, 2006ರಲ್ಲಿ ಪ್ರಾರಂಭಗೊಂಡ ಈ ಮ್ಯಾರಥಾನ್ ಇದೀಗ ಸತತ 10ನೆ ವರ್ಷದತ್ತ ಮುನ್ನುಗುತ್ತಿದೆ. ಈ ಸಲ ಜಿಲ್ಲೆಯವರೇ ಆದ ಅಂತಾರಾಷ್ಟ್ರೀಯ ಮಟ್ಟದ ಅಥ್ಲೀಟ್ ಬಾಬು ಶೆಟ್ಟಿ ಅವರನ್ನು ಹಾಫ್ ಮ್ಯಾರಥಾನ್‌ನ ಕ್ರೀಡಾ ರಾಯಭಾರಿಯಾಗಿ ನೇಮಿಸಲಾಗಿದೆ ಎಂದವರು ಘೋಷಿಸಿದರು.ಬಾರಿ ಚಾಂಪಿಯನ್‌ಗೆ ನೀಡುವ ಮೊತ್ತವನ್ನು 25,000 ರೂ.ಗಳಿಂದ 50,000 ರೂ.ಗಳಿಗೆ ಏರಿಸಲಾಗಿದೆ. ಪುರುಷರು, ಮಹಿಳೆಯರ ವಿಭಾಗ ಮಾತ್ರವಲ್ಲದೇ, ಬ್ಯಾಂಕ್ ನೌಕರರಿಗೆ, ಹಿರಿಯರಿಗೆ, ಪ್ರಾಥಮಿಕ ಶಾಲೆ (7ನೆ ತರಗತಿಯೊಳಗೆ), ಪ್ರೌಢ ಶಾಲೆ (8ರಿಂದ 10ನೆ ತರಗತಿ) ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಅಲ್ಲದೇ ‘ರನ್ ಫಾರ್ ಫನ್’ ವಿಭಾಗದಲ್ಲಿ ಆಸಕ್ತರೆಲ್ಲರೂ ಓಡಬಹುದು ಎಂದರು.ಬಾರಿ ರಾಷ್ಟ್ರ, ರಾಜ್ಯಗಳಿಂದ ಹಾಗೂ ವಿವಿಧ ಕಾಲೇಜು ಗಳಿಂದ ಭಾರೀ ಸಂಖ್ಯೆಯ ಸ್ಪರ್ಧಿಗಳನ್ನು ನಿರೀಕ್ಷಿಸಲಾಗಿದೆ. ಶ್ರೀಲಂಕಾದಿಂದ ಅಥ್ಲೀಟ್‌ಗಳು ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ. ಮ್ಯಾರಥಾನ್ ಸ್ಪರ್ಧೆಯನ್ನು ಜ.10ರ ಬೆಳಗ್ಗೆ 7 ಗಂಟೆಗೆ ಸಿಂಡಿಕೇಟ್ ಬ್ಯಾಂಕ್‌ನ ಪ್ರಧಾನ ಕಚೇರಿ ಎದುರು ಸಿಎಂಡಿ ಶ್ರೀವಾಸ್ತವ ಉದ್ಘಾಟಿಸಲಿದ್ದಾರೆ ಎಂದರು.ಲ್ಲಾ ಅಮೆಚೂರು ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಬಾಲಕೃಷ್ಣ ಹೆಗ್ಡೆ, ಗೌರವಾಧ್ಯಕ್ಷ ಪ್ರೊ.ಟಿ.ರಂಗ ಪೈ, ಮ್ಯಾರಥಾನ್ ಸಮಿತಿಯ ಸಂಘಟನಾ ಕಾರ್ಯದರ್ಶಿ ಮಹೇಶ್ ಠಾಕೂರ್, ಬಾಬು ಶೆಟ್ಟಿ ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯದರ್ಶಿ ದಿನೇಶ್ ಕುಮಾರ್ ಸ್ವಾಗತಿಸಿದರು. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.ಕಂದಾಯ ನಿಯಮಾವಳಿಗಳಿಗೆ ತಿದ್ದುಪಡಿ ತರಲು ಆಗ್ರಹುಪಿ, ಜ.5: ರಾಜ್ಯಾದ್ಯಂತ ನೂರಾರು ಮದ್ರಸ ,ಮಸೀದಿ, ದರ್ಗಾ, ಖಬರಸ್ಥಾನಗಳಿರುವ ಜಮೀನಿನ ಭೂದಾಖಲೆಗಳಲ್ಲಿ ಈವರೆೆಗೂ ‘ಸರಕಾರ’ ಎಂದೇ ದಾಖಲಾಗಿದ್ದು, ಪ್ರಸ್ತುತ ಕಂದಾಯ ಇಲಾಖೆಯ ಕಾನೂನಿನಂತೆ ಸಂಬಂಧಿತ ಸಂಸ್ಥೆಗಳ ಹೆಸರನ್ನು ಪಹಣಿ ಪತ್ರಿಕೆಯಲ್ಲಿ ದಾಖಲಿಸಲು ಅಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ನಿಯಮಾವಳಿಗಳಿಗೆ ಸೂಕ್ತ ತಿದ್ದುಪಡಿ ತರಬೇಕೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಎಂ.ಪಿ.ಮೊದಿನಬ್ಬ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆಕಳೆದ ನೂರಾರು ವರ್ಷಗಳಿಂದ ರಾಜ್ಯದಲ್ಲಿ ಸರಕಾರಿ ಜಮೀನಿನಲ್ಲಿ ಆಯಾಯ ಸಮಯಕ್ಕೆ ಸಂಬಂಧಿಸಿದ ಕಂದಾಯ ಇಲಾಖೆಯ ನಿಯಮಾ ವಳಿಗಳಂತೆ ಅಧಿಕಾರಿಗಳು ಅಳತೆ ಮಾಡಿ ಮದ್ರಸ, ಮಸೀದಿ ನಿರ್ಮಾಣ ಹಾಗೂ ಖಬರಸ್ಥಾನಗಳ ಬಳಕೆಗೆ ಅವಕಾಶ ನೀಡಿದ್ದು ವಕ್ಫ್ ಮಂಡಳಿಯಲ್ಲಿ ಕೂಡಾ ನೋಂದಾಯಿಸಲ್ಪಟ್ಟಿದೆ. ಆದರೆ ಭೂದಾಖಲೆಗಳಲ್ಲಿ ವಿಶೇಷವಾಗಿ ಪಹಣಿ ಪತ್ರದ ಕಲಂ 9ರಲ್ಲಿ ಸಂಸ್ಥೆಯ ಹೆಸರು ದಾಖಲಿಸಲು 11ನೇ ಕಲಂನಲ್ಲಿ ಅಧಿಕಾರಿಗಳು, ಸಂಸ್ಥೆಯ ಹೆಸರು ದಾಖಲಿಸಿದ್ದಾರೆ. ಇದರಿಂದ ನೂರಾರು ವರ್ಷಗಳಿಂದ ಸ್ವಾಧೀನತೆ ಹೊಂದಿ ಧಾರ್ಮಿಕ ಸಂಸ್ಥೆಗಳನ್ನು ಕಟ್ಟಿ ಅಭಿವೃದ್ಧಿ ಪಡಿಸಿಕೊಂಡಿರುವ ಸಂಸ್ಥೆಗಳಿಗೆ ತೀರಾ ತೊಂದರೆಯಾಗಿರುವುದಲ್ಲದೆ ಈಗಿರುವ ಕಾನೂನಿನಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಪಹಣಿ ಪತ್ರಿಕೆಯ ಕಲಂ 9ರಲ್ಲಿ ಸಂಸ್ಥೆಗಳ ಹೆಸರು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ.ದುದರಿಂದ ಪ್ರಸ್ತುತ ಈ ಬಗ್ಗೆ ಇರುವ ಕಂದಾಯ ಇಲಾಖೆಯ ನಿಯಮಾವಳಿಗೆ ಸೂಕ್ತ ತಿದ್ದುಪಡಿ ತಂದು 1990ರ ಪೂರ್ವದ ಇಂತಹ ಎಲ್ಲಾ ಪ್ರಕರಣ ಗಳಿಗೆ ಹಕ್ಕುಪತ್ರ ಹಾಗೂ ಪಹಣಿ ಪತ್ರದಲ್ಲಿ ಹೆಸರು ದಾಖಲಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ರಾಜ್ಯ ಅಲ್ಪಸಂಖ್ಯಾತರ ಆಯೋಗ, ಕಂದಾಯ ಹಾಗೂ ವಕ್ಫ್ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ರಸ್ತೆ ದುರವಸ್ಥೆ ಖಂಡಿಸಿ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ
ಬೆಳ್ತಂಗಡಿ, ಜ.5: ನಾವೂರು ಗ್ರಾಮದ ಕೈಕಂಬದಿಂದ ಫಾರೆಸ್ಟ್ ಬಂಗಲೆ ಮತ್ತು ಕುಂಡಡ್ಕ ಕಡೆಗೆ ಹೋಗುವ ರಸ್ತೆಯ ಅವ್ಯವಸ್ಥೆಯನ್ನು ಖಂಡಿಸಿ ಮುಂಬರುವ ತಾಪಂ, ಜಿಪಂ ಚುನಾವಣೆಯನ್ನು ಬಹಿಷ್ಕರಿಸಲು ಈ ಭಾಗದ ನಾಗರಿಕರು ತೀರ್ಮಾನಿಸಿ ಬ್ಯಾನರ್‌ನ್ನು ಅಳವಡಿಸಿದ್ದರು. ಈ ವಿಷಯವನ್ನರಿತ ಬೆಳ್ತಂಗಡಿ ತಹಶೀಲ್ದಾರ್ ಪ್ರಸನ್ನ ಮೂರ್ತಿ ಮಂಗಳವಾರ ತೆರಳಿ ಸ್ಥಳೀಯರ ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ನಾವೂರು ಗ್ರಾಮದ ಕೈಕಂಬದಿಂದ ಕಣಾಲು ಫಾರೆಸ್ಟ್ ಬಂಗಲೆ, ಸುಳ್ಯೋಡಿ ಕಿ. ಪ್ರಾ. ಶಾಲೆ, ಕುಪ್ಲೊಟ್ಟು, ಮಲ್ಲಡ್ಕ, ಕಾಸರೋಳಿ, ಕಾರಿಂಜ, ಮೊರ್ತಾಜೆ, ಕುಂಡಡ್ಕ, ಉಳ್ಳಂಜ, ಇಡ್ಯಲ, ಅರುವಾಲು, ಮುತ್ತಾಜೆ, ಉಳಿತಡ್ಕ, ಬಾಳ್ತಾರ, ಮೊದಲಾದ ಪ್ರದೇಶಗಳಿಗೆ ತೆರಳುವ ಸುಮಾರು 10-12 ಕಿ.ಮೀ. ರಸ್ತೆಯು ಸುಮಾರು 35 ವರ್ಷಗಳಿಂದ ನಾದುರಸ್ತಿಯಲ್ಲಿದ್ದು ಇದರ ದುರಸ್ತಿಗಾಗಿ ಹಲವಾರು ವರ್ಷಗಳಿಂದ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ನಾಗರಿಕರು ಮುಂಬರುವ ಸ್ಥಳೀಯಾಡಳಿತ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿ ಕೈಕಂಬ ಜಂಕ್ಷನ್‌ನಲ್ಲಿ ನಾಲ್ಕೈದು ದಿನಗಳ ಹಿಂದೆ ಬ್ಯಾನರೊಂದನ್ನು ಅಳವಡಿಸಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಬೆಳ್ತಂಗಡಿ ತಹಶೀಲ್ದಾರ್ ಪ್ರಸನ್ನಮೂರ್ತಿ ಮಂಗಳವಾರ ಸಂಜೆ ಮಾತುಕತೆಗೆ ತೆರಳಿದ್ದರು. ಈ ಸಂದರ್ಭ ಈ ಭಾಗದ ಜನರು ತಹಶೀಲ್ದಾರ್‌ರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸಂದರ್ಭ ಜಿಪಂ ಎಂಜಿನಿಯರಿಂಗ್ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸಿ.ಆರ್.ನರೇಂದ್ರ ಆಗಮಿಸಿ ಈ ರಸ್ತೆಯ ಭಾಗದಲ್ಲಿ ಈಗಾಗಲೇ ಎರಡು ಸೇತುವೆಗಳ ಕಾಮಗಾರಿ ಆರಂಭಗೊಂಡಿದೆ. ರಸ್ತೆಯ ವಿಚಾರಕ್ಕೆ ಸಂಬಂಧಪಟ್ಟು ನಬಾರ್ಡ್ ಯೋಜನೆಯಡಿ 50 ಲಕ್ಷ ರೂ. ಎಸ್ಟಿಮೇಟ್ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಅಲ್ಲಿಂದ ಅನುಮೋದನೆಯಾದ ಬಳಿಕ ಕಾಮಗಾರಿಯ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ ಸ್ಥಳೀಯರಿಗೆ ತಿಳಿಸಿದರು. ಬೆಳ್ತಂಗಡಿ ಕಂದಾಯ ನಿರೀಕ್ಷಕ ರವಿ ಕುಮಾರ್ ಇದ್ದರು.
ಮೊಂಟೆಪದವು: ಶಾಲೆಯ ವಾರ್ಷಿಕೋತ್ಸ
ವೊಣಾಜೆ, ಜ.5: ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಾಗಿ ಶಿಕ್ಷಕರು ಸತತ ಪ್ರಯತ್ನ ನಡೆಸುತ್ತಿದ್ದಾರೆ. ಅವರ ಪರಿಶ್ರಮದ ಫಲ ಸಿಗಬೇಕಾದರೆ ಹೆತ್ತವರು, ಪೋಷಕರು ಮಕ್ಕಳ ನಡೆ, ನುಡಿ, ಶಿಕ್ಷಣದ ಬಗ್ಗೆ ಗಮನಹರಿಸಬೇಕು ಎಂದು ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಮೊಂಟೆಪದವು ದ.ಕ.ಜಿಪಂ ಹಿ.ಪ್ರಾ. ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಾರ್ಯಕ್ರಮದಲ್ಲಿ ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಉಪಾಧ್ಯಕ್ಷ ಡಾ.ಕೆ.ಎ.ಮುನೀರ್ ಬಾವ, ಸಮಾಜ ಸೇವಕ ಪ್ರಕಾಶ್ ಮಲ್ಲಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಈಶ್ವರ್ ನಾಯ್ಕ, ಶಿಕ್ಷಕಿ ಗೀತಾ, ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಟಿ.ಎನ್., ಹನೀಫ್ ಚಂದಹಿತ್ಲು, ಗುತ್ತಿಗೆದಾರ ಶಾಫಿ, ಎಸ್‌ಡಿಎಂಸಿ ಅಧ್ಯಕ್ಷ ಅಬೂಬಕರ್ ಆಳ್ವರಬೆಟ್ಟು, ವಿದ್ಯುತ್ ಕೆಲಸಗಾರ ಮುಹಮ್ಮದ್ ಉಂಞಿ, ಉದ್ದ ಜಿಗಿತದಲ್ಲಿ ರಾಜ್ಯಮಟ್ಟದಲ್ಲಿ ಸ್ಥಾನ ಪಡೆದ ವಿದ್ಯಾರ್ಥಿ ಅಬ್ಬಾಸ್ ಅಲಿ ಅವರನ್ನು ಸನ್ಮಾನಿಸಲಾಯಿತು. ದ.ಕ.ಜಿಪಂ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ತಾಪಂ ಸದಸ್ಯೆ ಫಾತಿಮಾ ಹೈದರ್, ನರಿಂಗಾನ ಗ್ರಾಪಂಸದಸ್ಯ ಅಬ್ದುರ್ರಹ್ಮಾನ್, ಸ್ಥಳದಾನಿ ಸರಸ್ವತಿ ಎಸ್.ಎಂ.ಭಟ್, ಕೈರಂಗಳ ವಿಎಸ್‌ಎಸ್ ಬ್ಯಾಂಕ್ ಅಧ್ಯಕ್ಷ ಮಹೇಶ್ ಚೌಟ, ಉದ್ಯಮಿ ಗುದುರು ಕರೀಂ, ಪ್ರಗತಿಪರ ಕೃಷಿಕ ರಾಮಣ್ಣ ಶೆಟ್ಟಿ, ಎಸ್‌ಡಿಎಂಸಿ ಸದಸ್ಯ ಹಮೀದ್ ಹಾಜಿ, ಬಾಳೆಪುಣಿ ಗ್ರಾಪಂ ಸದಸ್ಯ ಜನಾರ್ದನ ಕುಲಾಲ್, ಅಬ್ಬಾಸ್, ಮಂಜನಾಡಿ ಗ್ರಾಪಂ ಸದಸ್ಯೆ ನಳಿನಿ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಈಶ್ವರ್‌ನಾಯ್ಕ ಸ್ವಾಗತಿಸಿದರು. ಸಹಶಿಕ್ಷಕ ಯಲ್ಲಪ್ಪಕಾರ್ಯಕ್ರಮ ನಿರೂಪಿಸಿದರು.







