ಸಮಸ್ತ-90: ನಾಳೆ ಸಮಾಲೋಚನಾ ಸಭೆ
ಮಂಗಳೂರು, ಜ.5: ಕೇರಳದ ಆಲಪ್ಪುಝದಲ್ಲಿ ಫೆ.11ರಿಂದ 14ರವರೆಗೆ ನಡೆಯಲಿರುವ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ 90ನೆ ವಾರ್ಷಿಕದ ಸಮಾರೋಪ ಮಹಾಸಮ್ಮೇಳನ ಪ್ರಚಾರಾರ್ಥ ಮಂಗಳೂರಿನಿಂದ ಆಲಪ್ಪುಝ ತನಕ ಶೈಖುನಾ ಕೋಟುಮಲ ಬಾಪು ಮುಸ್ಲಿಯಾರ್ ನೇತೃತ್ವದಲ್ಲಿ ಸಂದೇಶ ಯಾತ್ರೆ ನಡೆಯಲಿದೆ. ಇದರ ಯಶಸ್ವಿಗಾಗಿ ಜ.7ರಂದು ಅಪರಾಹ್ನ 2 ಗಂಟೆಗೆ ಮಂಗಳೂರು ಬಂದರ್‌ನಲ್ಲಿರುವ ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಚೇರಿಯ ಸಭಾಂಗಣದಲ್ಲಿ ಸಮಾಲೋಚನಾ ಸಭೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶೈಖುನಾ ಕೋಟುಮಲ ಬಾಪು ಮುಸ್ಲಿಯಾರ್, ಶೈಖುನಾ ಎಂ.ಟಿ.ಅಬ್ದುಲ್ಲಾ ಮುಸ್ಲಿಯಾರ್, ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್, ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್, ಶೈಖುನಾ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮುಂತಾದ ಉಲಮಾ ಉಮರಾಗಳು, ಸಮಸ್ತ 90 ದಕ್ಷಿಣ ಕರ್ನಾಟಕ ಸ್ವಾಗತ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಸ್ತದ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜನರಲ್ ಕನ್ವೀನರ್ ಹಾಜಿ ಕೆ.ಎಂ.ಇಸ್ಮಾಯೀಲ್ ಕಲ್ಲಡ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನಯಪಟ್ನ ಮದ್ರಸದ ವಾರ್ಷಿಕೋತ್ಸವಮಂಗಳೂರು, ಜ.5: ಸೊಮೇಶ್ವರ-ಉಚ್ಚಿಲದ ನಯಪಟ್ನದಲ್ಲಿರುವ ದಾಯತುಸ್ಸಿಬಿಯಾನ್ ಮದ್ರಸದ 6ನೆ ವಾರ್ಷಿಕ, ಮದಹ್ ರಸೂಲ್ ಹಾಗೂ ಮತ ಪ್ರವಚನ ಕಾರ್ಯಕ್ರಮ ಜ.7ರಂದು ನಡೆಯಲಿದೆ. ಇದರಂಗವಾಗಿ ಜ.6ರಂದು ನಡೆಯುವ ಮದ್ರಸ ಮಕ್ಕಳ ಕಾರ್ಯಕ್ರಮವನ್ನು ಉಚ್ಚಿಲ 407 ಜುಮಾ ಮಸೀದಿಯ ಖತೀಬ್ ಮೌಲಾನಾ ಪಿ.ಕೆ.ಮುಹಮ್ಮದ್ ಮದನಿ ಉದ್ಘಾಟಿಸುವರು. ಮೌಲಾನಾ ಹಕೀಂ ಮದನಿ ಅಧ್ಯಕ್ಷತೆ ವಹಿಸುವರು.ಜ.7ರಂದು ಮೌಲೀದ್ ಪಾರಾಯಣ ನಡೆಯಲಿದೆ. ಬಳಿಕ ತಲಪಾಡಿ ಜುಮಾ ಮಸೀದಿ ಖತೀಬ್ ಮೌಲಾನಾ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಸಖಾಫಿ ಅಲ್ ಕಾಮಿಲ್ ಮದಹ್ ರಸೂಲ್ ಪ್ರವಚನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.







