ಫೋಕ್ಸ್‌ವ್ಯಾಗನ್ ವಿರುದ್ಧ ಅಮೆರಿಕ ಮೊಕದ್ದಮೆ
ವಾಷಿಂಗ್ಟನ್, ಜ.5: ಜರ್ಮನಿಯ ಕಾರು ಉತ್ಪಾದನಾ ಸಂಸ್ಥೆ ಫೋಕ್ಸ್ ವ್ಯಾಗನ್ ತನ್ನ ಮಿಲಿಯಾಂತರ ಡೀಸೆಲ್ ಕಾರುಗಳಿಗೆ ತಪಾಸಣೆಯ ವೇಳೆ ವಾಯುಮಾಲಿನ್ಯ ಹೊರಸೂಸುವಿಕೆಯನ್ನು ವಾಸ್ತವಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸೂಚಿಸುವ ತಂತ್ರಜ್ಞಾನವನ್ನು ಅಳವಡಿಸಿರುವ ಹಗರಣಕ್ಕೆ ಸಂಬಂಧಿಸಿ ಮೊಕದ್ದಮೆಯೊಂದನ್ನು ಅಮೆರಿಕ ದಾಖಲಿಸಿದೆ.
ಮಿಚಿಗನ್‌ನ ಡೆಟ್ರಾಯಿಟ್‌ನಲ್ಲಿರುವ ಫೆಡರಲ್ ನ್ಯಾಯಾಲಯದಲ್ಲಿ ಅಮೆರಿಕದ ಪರಿಸರ ರಕ್ಷಣಾ ಸಂಸ್ಥೆಯ ಹೆಸರಿನಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
Next Story