5,000ಟನ್ ತೊಗರಿಬೇಳೆ ಆಮದು
ಹೊಸದಿಲ್ಲಿ,ಜ.5: ಸತತ ಎರಡನೆ ವರ್ಷವೂ ತೊಗರಿ ಬೇಳೆಯ ಇಳುವರಿ ಕುಸಿಯುವ ಆತಂಕದ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿನಿಂದ ಆಂತರಿಕ ಪೂರೈಕೆಯನ್ನು ಹೆಚ್ಚಿಸಲು ಸರಕಾರವು 5,000 ಟನ್ ತೊಗರಿ ಬೇಳೆ ಆಮದಿಗೆ ಜಾಗತಿಕ ಟೆಂಡರ್‌ಗಳನ್ನು ಆಹ್ವಾನಿಸಿದೆ.
ಸರಕಾರಿ ಸ್ವಾಮ್ಯದ ಎಂಎಂಟಿಸಿ ಈ ಟೆಂಡರ್‌ಗಳನ್ನು ಆಹ್ವಾನಿಸಿದ್ದು,ಬೆಲೆಗಳನ್ನು ಆಧರಿಸಿ ಆಮದು ಪ್ರಮಾಣವನ್ನು ಹೆಚ್ಚಿಸಲು ಉದ್ದೇಶಿಸಿದೆ.
ಕನಿಷ್ಠ 2,000 ಟ.ತೊಗರಿ ಬೇಳೆ ಪೂರೈಕೆಗಾಗಿ ಜ.18ರೊಳಗೆ ಟೆಂಡರ್‌ಗಳನ್ನು ಸಲ್ಲಿಸಬೇಕಾಗಿದೆ. ಯಶಸ್ವಿ ಟೆಂಡರ್‌ದಾರರು ಸರಕನ್ನು ಫೆ.7-ಮಾ.15ರ ನಡುವೆ ಮುಂಬೈ ಮತ್ತು ಚೆನ್ನೈ ಬಂದರುಗಳಿಗೆ ತಲುಪಿಸಬೇಕಾಗುತ್ತದೆ.
ಬೆಲೆಗಳನ್ನು ನಿಯಂತ್ರಿಸಲು ಎಂಎಂಟಿಸಿ ಕಳೆದ ವರ್ಷ 5,000 ಟ.ತೊಗರಿ ಬೇಳೆಯನ್ನು ಆಮದು ಮಾಡಿಕೊಂಡಿತ್ತು. ಉದ್ದಿನ ಬೇಳೆಯ ಆಮದಿಗೂ ಅದು ಟೆಂಡರ್‌ಗಳನ್ನು ಆಹ್ವಾನಿಸಿದ್ದರೂ ಬಿಡ್‌ಗಳು ಸಲ್ಲಿಕೆಯಾಗಿರಲಿಲ್ಲ.
Next Story





