Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಭೀಕರ ಭೂಕಂಪದ ನೆರಳಲ್ಲಿ ಭಾರತ !

ಭೀಕರ ಭೂಕಂಪದ ನೆರಳಲ್ಲಿ ಭಾರತ !

ವಾರ್ತಾಭಾರತಿವಾರ್ತಾಭಾರತಿ6 Jan 2016 11:41 PM IST
share
ಭೀಕರ ಭೂಕಂಪದ ನೆರಳಲ್ಲಿ ಭಾರತ !

ಹೊಸದಿಲ್ಲಿ, ಜ.6: ಭಾರತ ಭೀಕರ ಭೂಕಂಪದ ಅಪಾಯವನ್ನು ಎದುರಿಸುತ್ತಿದೆಯೇ? ಹೌದು ಎನ್ನುತ್ತಿದ್ದಾರೆ ಕೇಂದ್ರ ಗೃಹ ಸಚಿವಾಲಯದ ವಿಪತ್ತು ನಿರ್ವಹಣಾ ತಜ್ಞರು. 8.2 ಅಥವಾ ಅದಕ್ಕಿಂತಲೂ ಅಧಿಕ ರಿಕ್ಟರ್‌ಸ್ಕೇಲ್ ತೀವ್ರತೆಯ ಭಾರೀ ಭೂಕಂಪವು ಹಿಮಾಲಯ ಪ್ರಾಂತ್ಯದಲ್ಲಿ ಸಂಭವಿಸುವ ಸಾಧ್ಯತೆಯಿದೆಯೆಂದು ಅವರು ಎಚ್ಚರಿಕೆ ನೀಡಿದ್ದಾರೆ.


  ಸೋಮವಾರ ಮಣಿಪುರದಲ್ಲಿ ಸಂಭವಿಸಿದ್ದಕ್ಕಿಂತಲೂ ಅಧಿಕ ತೀವ್ರತೆಯ ಭೂಕಂಪವು ಭವಿಷ್ಯದಲ್ಲಿ ಹಿಮಾಲಯ ಪ್ರಾಂತ್ಯವನ್ನು ನಡುಗಿಸಲಿದೆಯೆಂದು ತಜ್ಞರು ಮುನ್ಸೂಚನೆ ನೀಡಿದ್ದಾರೆ. ಈ ಪ್ರಾಂತ್ಯದಲ್ಲಿ ಭೂ ಪದರದಲ್ಲಿರುವ ಟೆಕ್ಟೋನಿಕ್ ಪ್ಲೇಟ್‌ಗಳ ಚಲನೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಪ್ರಬಲವಾದ ಮೂರು ಸರಣಿ ಭೂಕಂಪಗಳು ಸಂಭವಿಸಿದ್ದವು.


  ಮಣಿಪುರ  -ರಿಕ್ಟರ್ ತೀವ್ರತೆ 6.7 (ಜನವರಿ 2016), ನೇಪಾಳ 7.3 ( ಮೇ 2015) ಹಾಗೂ ಸಿಕ್ಕಿಂ 6.9 (2011) ಹೀಗೆ ಈ ಮೂರು ಭೂಕಂಪಗಳು, ಆಗಲೇ ಹಿಂದಿನ ಲಘು ಕಂಪನಗಳಿಂದಾಗಿ ಬಿರುಕು ಬಿಟ್ಟಿರುವ ಟೆಕ್ಟೋನಿಕ್ ಪ್ಲೇಟ್‌ಗಳನ್ನು ಇನ್ನಷ್ಟು ಛಿದ್ರಗೊಳಿಸಿದ್ದವು. ಇದರಿಂದಾಗಿ, 8.0 ರಿಕ್ಟರ್ ತೀವ್ರತೆಯವರೆಗಿನ ಸರಣಿ ಭೂಕಂಪಗಳು ಮರುಕಳಿಸುವ ಸನ್ನಿವೇಶ ಎದುರಾಗಿದೆಯೆಂದು ಅವರು ಭೀತಿ ವ್ಯಕ್ತಪಡಿಸಿದ್ದಾರೆ.   


ನೇಪಾಳ ಭೂಕಂಪ ಘಟನೆ ಅನಂತರದ ತನ್ನ ಅಧ್ಯಯನ ವರದಿಯಲ್ಲಿ, ಭೀಕರ ಭೂಕಂಪದ ಸಾಧ್ಯತೆಯ ಎಚ್ಚರಿಕೆ ನೀಡಿರುವ ಗೃಹ ಸಚಿವಾಲಯದ ವಿಪತ್ತು ನಿರ್ವಹಣಾ ಸಂಸ್ಥೆ (ಎನ್‌ಐಡಿಎಂ), ‘‘ವಿಶೇಷವಾಗಿ ಪರ್ವತ ಪ್ರದೇಶಗಳು ಸೇರಿದಂತೆ ಇಡೀ ಉತ್ತರ ಭಾರತಕ್ಕೆ ಬೆಂಕಿಯ ಉಂಗುರವು ತೊಡಿಸಲ್ಪಟ್ಟಿದೆ’’ ಎಂದು ಹೇಳಿದೆ. ಇತ್ತೀಚೆಗೆ ಅರುಣಾಚಲ ಪ್ರದೇಶದ ಇಟಾ ನಗರದಲ್ಲಿ ನಡೆದ 11 ಪರ್ವತ ರಾಜ್ಯಗಳ ಸಚಿವರ ಸಭೆಯು, ಪರ್ವತ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಕುರಿತ ಸಮಾನ ನೀತಿ ಸಂಹಿತೆಯೊಂದನ್ನು ರೂಪಿಸುವ ಬಗ್ಗೆ ಕೈಗೊಂಡ ನಿರ್ಣಯದಲ್ಲಿಯೂ ಈ ವರದಿಯ ಬಗ್ಗೆ ಗಮನ ಸೆಳೆಯಲಾಗಿದೆ.


  ನೇಪಾಳ, ಭೂತಾನ್, ಮ್ಯಾನ್ಮಾರ್ ಹಾಗೂ ಭಾರತ ದೇಶಗಳ ಭೂ ಪದರದಲ್ಲಿರುವ ಟೆಕ್ನೋನಿಕ್ ಪ್ಲೇಟ್‌ಗಳು, ಪರಸ್ಪರ ಬೆಸೆದುಕೊಂಡಿರುವುದರಿಂದ ಅಪಾಯ ಇನ್ನಷ್ಟು ಹೆಚ್ಚಾಗಿದೆಯೆಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಇಲಾಖೆಯ ನಿರ್ದೇಶಕ ಸಂತೋಷ್ ಕುಮಾರ್ ಅಭಿಪ್ರಾಯಿಸಿದ್ದಾರೆ. ಉತ್ತರ ಭಾರತದ ಪರ್ವತ ರಾಜ್ಯಗಳು ಹಾಗೂ ಬಿಹಾರ, ಉತ್ತರಪ್ರದೇಶ ಹಾಗೂ ದಿಲ್ಲಿ ಭೂಕಂಪನ ವಲಯ-4ನೆ ವರ್ಗದ ವ್ಯಾಪ್ತಿಯಲ್ಲಿದ್ದು, ಇಲ್ಲಿ ಭವಿಷ್ಯದಲ್ಲಿ ಭಾರೀ ಭೂಕಂಪದ ಸಾಧ್ಯತೆ ಅತ್ಯಧಿಕವಾಗಿದೆಯೆಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
 
  ಎನ್‌ಐಡಿಎಂನ ಅಭಿಪ್ರಾಯಕ್ಕೆ ಕೆಲವು ವಿಜ್ಞಾನಿಗಳು ಸಹಮತ ವ್ಯಕ್ತಪಡಿಸಿಲ್ಲ. ಆದರೆ, ಕೆಲವು ಅಂತಾರಾಷ್ಟ್ರೀಯ ತಜ್ಞರು, ಅವರಲ್ಲೂ ಮುಖ್ಯವಾಗಿ ಅಮೆರಿಕದ ಕೊಲರಾಡೊ ವಿವಿಯ ಭೂಕಂಪನ ಶಾಸ್ತ್ರಜ್ಞ ರೋಜರ್ ಬಿಲ್‌ಯಾಮ್, ಹಿಮಾಲಯ ಪ್ರಾಂತ್ಯದ ಪ್ರಸಕ್ತ ಪರಿಸ್ಥಿತಿಯನ್ನು ಗಮನಿಸಿದರೆ, 8.0 ರಿಕ್ಟರ್ ತೀವ್ರತೆಯ ಕನಿಷ್ಠ ಭೂಕಂಪಗಳಾಗುವ ಸಾಧ್ಯತೆಯಿದೆಂದು ಹೇಳಿದ್ದಾರೆ. ಭಾರತದ ಉಳಿದ ಭಾಗಗಳಿಗಿಂತ ವಿಭಿನ್ನವಾದ ಸಮಾನ ಕಟ್ಟಡ ನಿರ್ಮಾಣ ಸಂಹಿತೆಯನ್ನು ಅಳವಡಿಸಿಕೊಳ್ಳುವಂತೆ ಪರ್ವತ ರಾಜ್ಯಗಳಲ್ಲಿ ಜಾಗೃತಿಯುಂಟು ಮಾಡಲು ಕೇಂದ್ರ ಸರಕಾರವು ಕ್ರಮಗಳನ್ನು ಕೈಗೊಳ್ಳಲಿದೆಯೆಂದು ಸಂತೋಷ್ ಕುಮಾರ್ ತಿಳಿಸಿದ್ದಾರೆ.

 
   ನೇಪಾಳ ಭೂಕಂಪದ ಬಳಿಕ ಈಶಾನ್ಯ ಭಾರತದ ಪರ್ವತ ಪ್ರದೇಶಗಳಲ್ಲಿ ಭೂ ಒತ್ತಡ ಹೆಚ್ಚಿದೆ. ಮಣಿಪುರದಲ್ಲಿ ಸೋಮವಾರ ಸಂಭವಿಸಿದ 6.7 ರಿಕ್ಟರ್ ತೀವ್ರತೆಯ ಭೂಕಂಪದ ಘಟನೆಯು, ಒತ್ತಡವು ಸಂಪೂರ್ಣವಾಗಿ ಬಿಡುಗಡೆಗೊಳ್ಳದಿರುವುದನ್ನು ತೋರಿಸಿಕೊಟ್ಟಿದೆ. ‘‘ಉತ್ತರದ ಹಿಮಾಲಯ ಭೂತಟ್ಟೆ (ಪ್ಲೇಟ್) ಹಾಗೂ ಪೂರ್ವದ ಇಂಡೋ-ಬರ್ಮಾ ಭೂತಟ್ಟೆ ಗಳ ನಡುವೆ ಢಿಕ್ಕಿಯುಂಟಾಗಿದೆ. ಇದರ ಪರಿಣಾಮವಾಗಿ ಭವಿಷ್ಯದಲ್ಲಿ ಅತ್ಯಂತ ಭೀಕರವಾದ ಭೂಕಂಪ ಸಂಭವಿಸುವ ಅಪಾಯ ಎದುರಾಗಿದೆ’’ ಎಂದು ಎನ್‌ಐಡಿಎಂ ತಜ್ಞರು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X