Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಉ.ಕೊರಿಯದಿಂದ ಯಶಸ್ವಿ ಹೈಡ್ರೋಜನ್ ಬಾಂಬ್...

ಉ.ಕೊರಿಯದಿಂದ ಯಶಸ್ವಿ ಹೈಡ್ರೋಜನ್ ಬಾಂಬ್ ಪರೀಕ್ಷೆ

ವಾರ್ತಾಭಾರತಿವಾರ್ತಾಭಾರತಿ6 Jan 2016 11:48 PM IST
share

ಸಿಯೋಲ್, ಜ. 6: ತನ್ನ ಮೊದಲ ಹೈಡ್ರೋಜನ್ ಬಾಂಬನ್ನು ಸ್ಫೋಟಿಸಿರುವುದಾಗಿ ಉತ್ತರ ಕೊರಿಯ ಬುಧವಾರ ಘೋಷಿಸಿದೆ.ಇದು ಸತ್ಯವೇ ಆಗಿದ್ದಲ್ಲಿ, ಜಗತ್ತಿನ ಅತ್ಯಂತ ಅಪಾಯಕಾರಿ ದೇಶಗಳ ಪೈಕಿ ಒಂದಾಗಿರುವ ಉತ್ತರ ಕೊರಿಯವು ತನ್ನ ವಿರೋಧಿಗಳಿಗೆ ಒಡ್ಡುವ ಪರಮಾಣು ಬೆದರಿಕೆಯಲ್ಲಿ ನಾಟಕೀಯ ಏರಿಕೆ ಉಂಟಾಗಲಿದೆ ಎಂದು ಭಾವಿಸಲಾಗಿದೆ. ಹೈಡ್ರೋಜನ್ ಬಾಂಬ್‌ನ ಪರೀಕ್ಷೆಯು ‘‘ಸಂಪೂರ್ಣ ಯಶಸ್ವಿ’’ಯಾಗಿದೆ ಎಂದು ಪ್ರಕಟನೆಯೊಂದರಲ್ಲಿ ಉತ್ತರ ಕೊರಿಯ ಹೇಳಿದೆ.
ಆದರೆ, ಈ ಹೇಳಿಕೆ ಸತ್ಯವೇ ಎಂಬುದನ್ನು ನಿರ್ಧರಿಸುವುದು ಕಷ್ಟ. ತನ್ನ ಪರಮಾಣು ಸಾಮರ್ಥ್ಯದ ಬಗ್ಗೆ ಉತ್ತರ ಕೊರಿಯ ಪದೇ ಪದೇ ಹೇಳಿಕೆಗಳನ್ನು ನೀಡುತ್ತಲೇ ಇದೆ. ಆದರೆ, ಬಾಹ್ಯ ವಿಶ್ಲೇಷಕರು ಆ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.
‘‘ಅಮೆರಿಕದ ಪರಮಾಣು ಬೆದರಿಕೆಗಳು ಮತ್ತು ಬ್ಲಾಕ್‌ಮೇಲ್‌ಗಳ ಹಿನ್ನೆಲೆಯಲ್ಲಿ ನಮ್ಮ ಬದುಕುವ ಹಕ್ಕನ್ನು ರಕ್ಷಿಸಲು ಹಾಗೂ ಕೊರಿಯ ಪರ್ಯಾಯ ದ್ವೀಪದ ಭದ್ರತೆಯನ್ನು ಖಾತರಿಪಡಿಸಲು ನಾವು ತೆಗೆದುಕೊಂಡ ಆತ್ಮರಕ್ಷಣಾ ಕ್ರಮವಿದು’’ ಎಂದು ಸರಕಾರಿ ಟೆಲಿವಿಶನ್ ಸೆಂಟ್ರಲ್ ಟೆಲಿವಿಶನ್‌ನಲ್ಲಿ ಸರಕಾರದ ಹೇಳಿಕೆಯನ್ನು ಓದಿದ ವಕ್ತಾರರು ಹೇಳಿದರು.
 ಉತ್ತರ ಕೊರಿಯದ ಈಶಾನ್ಯ ಕರಾವಳಿಯಲ್ಲಿ 5.1ರ ತೀವ್ರತೆಯಲ್ಲಿ ಭೂಮಿ ಕಂಪಿಸಿರುವುದು ಜಗತ್ತಿನಾದ್ಯಂತದ ಭೂಕಂಪ ಮಾಪಕಗಳಲ್ಲಿ ದಾಖಲಾದ ಒಂದು ಗಂಟೆಯ ಬಳಿಕ ಉತ್ತರ ಕೊರಿಯದ ಪ್ರಕಟನೆ ಹೊರಬಿದ್ದಿದೆ. ಉತ್ತರ ಕೊರಿಯದಲ್ಲಿ ಯಾವ ರೀತಿಯ ಪರೀಕ್ಷೆ ನಡೆಸಲಾಗಿದೆ ಎಂಬುದನ್ನು ಅಮೆರಿಕ ಮತ್ತು ಇತರ ಶಕ್ತ ರಾಷ್ಟ್ರಗಳ ಉಪಗ್ರಹಗಳು ಪತ್ತೆಹಚ್ಚಲು ವಾರಗಳ ಅವಧಿ ಬೇಕಾಗಬಹುದು.
ಈ ಮೊದಲು, 2006, 2009 ಮತ್ತು 2013ರಲ್ಲಿ ಉತ್ತರ ಕೊರಿಯ ಪರಮಾಣು ಪರೀಕ್ಷೆಗಳನ್ನು ನಡೆಸಿದೆ.
ತನ್ನ ಹುಟ್ಟುಹಬ್ಬದ ಎರಡು ದಿನಗಳ ಮೊದಲು ಹೈಡ್ರೋಜನ್ ಬಾಂಬ್‌ನ ಪರೀಕ್ಷೆ ನಡೆಸುವಂತೆ ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಆದೇಶ ನೀಡಿದ್ದರು ಎನ್ನಲಾಗಿದೆ.

ಹೈಡ್ರೋಜನ್ ಬಾಂಬ್ ಪರೀಕ್ಷೆ ಖಚಿತಗೊಂಡರೆ, ಅಮೆರಿಕವನ್ನು ತಲುಪುವ ಸಾಮರ್ಥ್ಯವುಳ್ಳ ಕ್ಷಿಪಣಿಯಲ್ಲಿ ಅಳವಡಿಸಬಹುದಾದ ಸಿಡಿತಲೆಯೊಂದನ್ನು ನಿರ್ಮಿಸುವ ತನ್ನ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಉತ್ತರ ಕೊರಿಯ ಇನ್ನೊಂದು ಬೃಹತ್ ಹೆಜ್ಜೆಯನ್ನು ಇಟ್ಟಂತಾಗಿದೆ.

ಭದ್ರತಾ ಮಂಡಳಿಯ ತುರ್ತು ಸಭೆ
ವಿ  ಶ್ವಸಂಸ್ಥೆ, ಜ. 6: ಉತ್ತರ ಕೊರಿಯ ನಡೆಸಿದ ಹೈಡ್ರೋಜನ್ ಬಾಂಬ್ ಪರೀಕ್ಷೆಯ ಹಿನ್ನೆಲೆಯಲ್ಲಿ ಉದ್ಭವಿಸಿದ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆಯೊಂದನ್ನು ಕರೆದಿದೆ.
ಭದ್ರತಾ ಮಂಡಳಿಯ 15 ಸದಸ್ಯರ ರಹಸ್ಯ ಸಭೆಯನ್ನು ವಿಶ್ವಸಂಸ್ಥೆ ಮತ್ತು ಜಪಾನ್‌ಗಳು ಕರೆದಿವೆ.

‘‘ಪ್ರಮಾದಕಾರಿ ಪ್ರಚೋದನೆ’’ಗೆ ಜಾಗತಿಕ ಖಂಡನೆ ವಾಶಿಂಗ್ಟನ್, ಜ. 6: ಹೈಡ್ರೋಜನ್ ಬಾಂಬ್‌ನ ಯಶಸ್ವಿ ಪರೀಕ್ಷೆ ನಡೆಸಿರುವುದಾಗಿ ಉತ್ತರ ಕೊರಿಯ ಮಾಡಿರುವ ಘೋಷಣೆಗೆ ಜಾಗತಿಕ ಟೀಕೆ ವ್ಯಕ್ತವಾಗಿದೆ. ಉತ್ತರ ಕೊರಿಯದ ‘‘ಪ್ರಮಾದಕಾರಿ ಪ್ರಚೋದನೆ’’ಗೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಉತ್ತರ ಕೊರಿಯದ ನೆರೆಯ ದೇಶಗಳು ಮತ್ತು ಪಶ್ಚಿಮದ ದೇಶಗಳು ಎಚ್ಚರಿಸಿವೆ.
ಉತ್ತರ ಕೊರಿಯದ ಘೋಷಣೆಗೆ ಪ್ರತಿಕ್ರಿಯೆ ನೀಡಲು ಕಾಲ ಪಕ್ವವಾಗಿಲ್ಲ ಎಂದು ಹೇಳಿರುವ ಅಮೆರಿಕ, ಆದಾಗ್ಯೂ, ಯಾವುದೇ ಅಥವಾ ಎಲ್ಲ ಪ್ರಚೋದನೆಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸುವುದಾಗಿ ಹೇಳಿದೆ.
ಪರೀಕ್ಷೆಯು ರಾಷ್ಟ್ರೀಯ ಭದ್ರತೆ ಮತ್ತು ಭವಿಷ್ಯಕ್ಕೆ ಎದುರಾದ ಗಂಭೀರ ಬೆದರಿಕೆಯಾಗಿದೆ ಎಂದು ದಕ್ಷಿಣ ಕೊರಿಯದ ಅಧ್ಯಕ್ಷೆ ಪಾರ್ಕ್ ಗುವನ್ ಹೈ ಬಣ್ಣಿಸಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ದಿಗ್ಬಂಧನೆಗಳು ಸೇರಿದಂತೆ ಉತ್ತರ ಕೊರಿಯದ ವಿರುದ್ಧ ಕಠಿಣ ದಿಗ್ಬಂಧನೆಗಳನ್ನು ವಿಧಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ಉತ್ತರ ಕೊರಿಯದ ಪ್ರಮುಖ ಮಿತ್ರ ದೇಶ ಚೀನಾ ಕೂಡ, ‘‘ಅಂತಾರಾಷ್ಟ್ರೀಯ ಸಮುದಾಯದ ವಿರೋಧದ ಹೊರತಾಗಿಯೂ ನಡೆಸಲಾದ’’ ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ‘‘ಕಟುವಾಗಿ ವಿರೋಧಿಸಿದೆ’’.

ಪರಮಾಣು ಬಾಂಬ್‌ಗಿಂತ ಹೈಡ್ರೋಜನ್ ಬಾಂಬ್ ಯಾಕೆ ಹೆಚ್ಚು ಅಪಾಯಕಾರಿ? ಹೈಡ್ರೋಜನ್ ಬಾಂಬ್ ಪರಮಾಣು ಬಾಂಬ್‌ಗಿಂತ ಯಾಕೆ ಹೆಚ್ಚು ಅಪಾಯಕಾರಿ ಎಂಬುದನ್ನು ಸೂಚಿಸುವ ಹಲವು ಅಂಶಗಳನ್ನು ಇಲ್ಲಿ ನೀಡಲಾಗಿದೆ.
1. ಹೈಡ್ರೋಜನ್ ಬಾಂಬ್ ತುಂಬಾ ಹೆಚ್ಚು ಶಕ್ತಿಶಾಲಿ ಪರಮಾಣು ಅಸ್ತ್ರವಾಗಿದೆ.
2. ಹೈಡ್ರೋಜನ್ ಬಾಂಬ್‌ನಿಂದ ಹೊರಸೂಸುವ ಶಕ್ತಿ ಪರಮಾಣು ಬಾಂಬ್‌ನಿಂದ ಹೊರಸೂಸುವ ಶಕ್ತಿಗಿಂತ ಹಲವು ಪಟ್ಟು ಹೆಚ್ಚು. ಹೈಡ್ರೋಜನ್ ಬಾಂಬ್‌ಗಳು ಒಂದೇ ಪೆಟ್ಟಿನಲ್ಲಿ ಇಡೀ ನಗರಗಳನ್ನೇ ನಾಶಪಡಿಸಬಲ್ಲವು.
 3. ಪರಮಾಣುಗಳ ಬೆಸೆಯುವಿಕೆಯಿಂದ ಹೈಡ್ರೋಜನ್ ಬಾಂಬ್ ತನ್ನ ಶಕ್ತಿ ಪಡೆದರೆ, ಪರಮಾಣುಗಳ ವಿದಳನ (ಬೇರ್ಪಡುವಿಕೆ)ದಿಂದ ಪರಮಾಣು ಬಾಂಬ್ ತನ್ನ ಶಕ್ತಿ ಪಡೆಯುತ್ತದೆ.
l4. ಹೈಡ್ರೋಜನ್ ಪರಮಾಣುಗಳ ಬೆಸೆಯುವಿಕೆಯಿಂದ ಹೈಡ್ರೋಜನ್ ಬಾಂಬ್ ರೂಪುಗೊಳ್ಳುತ್ತದೆ. ಹಾಗಾಗಿ, ಈ ಬಾಂಬ್‌ಗೆ ಈ ಹೆಸರು ಬಂದಿದೆ.
l-'205. ಪರಮಾಣುಗಳನ್ನು ಬೆಸೆಯುವುದು ಅತ್ಯಂತ ನಾಜೂಕಾದ ಹಾಗೂ ಕಷ್ಟದ ಕೆಲಸ. ಯಾಕೆಂದರೆ, ಅದಕ್ಕೆ ಅಗಾಧ ಪ್ರಮಾಣದಲ್ಲಿ, ಅಂದರೆ ಕೋಟಿಗಟ್ಟಳೆ ಡಿಗ್ರಿ ಸೆಂಟಿಗ್ರೇಡ್ ಮಟ್ಟದಲ್ಲಿ ಉಷ್ಣತೆ ಬೇಕಾಗುತ್ತದೆ. ಹಾಗಾಗಿ, ಹೆಚ್ಚಿನ ಶಕ್ತಿಯನ್ನು ಪಡೆಯಲು ಮೊದಲು ಪರಮಾಣುಗಳ ವಿದಳನ ನಡೆಸಲಾಗುತ್ತದೆ ಹಾಗೂ ಆ ಶಕ್ತಿಯನ್ನು ಬಳಸಿಕೊಂಡು ಪರಮಾಣುಗಳನ್ನು ಬೆಸೆಯುವ ಕಾರ್ಯ ನಡೆಸಲಾಗುತ್ತದೆ.
l-'206. ಸಣ್ಣ ಗಾತ್ರದ ಹೈಡ್ರೋಜನ್ ಬಾಂಬ್‌ಗಳನ್ನು ತಯಾರಿಸುವುದು ಸುಲಭ. ಹಾಗಾಗಿ, ಅವುಗಳನ್ನು ಕ್ಷಿಪಣಿಗಳಲ್ಲಿ ಇಡುವುದೂ ಸುಲಭ.
l-'207. ಹಿರೋಶಿಮ ಮತ್ತು ನಾಗಸಾಕಿಗಳಲ್ಲಿ ಬಳಸಿದ್ದು ಪರಮಾಣು ಬಾಂಬ್. ಹೈಡ್ರೋಜನ್ ಬಾಂಬ್‌ಗಳನ್ನು ಈವರೆಗೆ ಎಲ್ಲೂ ಯುದ್ಧದಲ್ಲಿ ಬಳಸಲಾಗಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X