ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿ: ಅಝರೆಂಕಾ ಕ್ವಾರ್ಟರ್‌ಫೈನಲ್‌ಗೆ
ಬ್ರಿಸ್ಬೇನ್, ಜ.6: ಎರಡು ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ವಿಕ್ಟೋರಿಯ ಅಝರೆಂಕಾ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಅಝರೆಂಕಾ ಅವರು ಸಲಿನ್ ಬೊನವೆಂಚರ್ ವಿರುದ್ಧ 6-3, 6-2 ಸೆಟ್‌ಗಳಿಂದ ಗೆಲುವು ಸಾಧಿಸಿದರು.
2014 ಹಾಗೂ 15ರಲ್ಲಿ ಕೇವಲ 23 ಟೂರ್ನಿಗಳಲ್ಲಿ ಆಡಿರುವ ಅಝರೆಂಕಾ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ರ್ಯಾಂಕಿಂಗ್‌ನಲ್ಲಿ 22ನೆ ಸ್ಥಾನಕ್ಕೆ ಜಾರಿದ್ದರು.
ಇದೇ ವೇಳೆ, ನಾಲ್ಕನೆ ಶ್ರೇಯಾಂಕದ ಆ್ಯಂಜೆಲಿಕ್ ಕರ್ಬರ್ ಹಾಗೂ ಜರ್ಮನಿಯ ಆ್ಯಂಡ್ರಿಯ ಪೆಟ್ಕೊವಿಕ್ ನೇರ ಸೆಟ್‌ಗಳಿಂದ ಗೆಲುವು ಸಾಧಿಸುವುದರೊಂದಿಗೆ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಕರ್ಬರ್ ಅವರು ಮಡಿಸನ್ ಬ್ರೆಂಗ್ಲೆರನ್ನು 6-3, 6-0 ಸೆಟ್‌ಗಳಿಂದ ಮಣಿಸಿದ್ದು, ಮುಂದಿನ ಸುತ್ತಿನಲ್ಲಿ ಅನಸ್ತೇಸಿಯ ಪಾವ್ಲಚೆಂಕೊವಾರನ್ನು ಎದುರಿಸಲಿದ್ದಾರೆ.
ಮತ್ತೊಂದು ಪಂದ್ಯದಲ್ಲಿ ಎಕಟೆರಿನಾ ಮಕರೊವಾರನ್ನು 7-5, 6-4 ಸೆಟ್‌ಗಳಿಂದ ಸೋಲಿಸಿರುವ ಪೆಟ್ಕೊವಾ ಕ್ವಾರ್ಟರ್‌ಫೈನಲ್ ತಲುಪಿದರು. ಕ್ವಾರ್ಟರ್‌ಫೈನಲ್‌ನಲ್ಲಿ ಅಮೆರಿಕದ ಸಮಂತಾ ಕ್ರೌಫೋರ್ಡ್‌ರನ್ನು ಎದುರಿಸಲಿದ್ದಾರೆ. ಸಮಂತಾ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಏಳನೆ ಶ್ರೇಯಾಂಕದ ಬೆಲಿಂಡ ಬೆನ್ಸಿಕ್‌ರನ್ನು 7-5, 7-5 ಸೆಟ್‌ಗಳಿಂದ ಮಣಿಸಿದ್ದರು.







