ವಂಚನೆ: ಪ್ರಕರಣ ದಾಖಲಿಸಲು ಆಯೋಗ ಸೂಚನೆ
ಕಾಸರಗೋಡು, ಜ.6: ಉದ್ಯಮದ ಹೆಸರಲ್ಲಿ ಹಣ ಪಡೆದು ವಂಚನೆ ನಡೆದ ಬಗ್ಗೆ ಮೊಕದ್ದಮೆ ದಾಖಲಿಸಿ ಹದಿನೈದು ದಿನಗಳೊಳಗೆ ವರದಿ ನೀಡುವಂತೆ ವಿದ್ಯಾನಗರ ಠಾಣಾ ಪೊಲೀಸರಿಗೆ ಯುವಜನ ಆಯೋಗ ಆದೇಶ ನೀಡಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಅದಾಲತ್‌ನಲ್ಲಿ ನ್ಯಾಷನಲ್ ಕೌನ್ಸಿಲ್ ಫೋರ್ ಎಂಪವರ್ ಇಂಡಿಯಾ ಎಂಬ ಸಂಸ್ಥೆಯ ಮಾಲಕ ರಾಜೇಶ್ ನಂಬಿಯಾರ್ ವಿರುದ್ಧ ಎ. ಅಝರುದ್ದೀನ್ ಎಂಬವರು ನೀಡಿದ್ದ ದೂರನ್ನು ಪರಿಶೀಲಿಸಿ ಈ ಆದೇಶ ನೀಡಲಾಗಿದೆ.
20 ಕ್ಕೂ ಅಧಿಕ ಮಂದಿಯಿಂದ ಹಣ ಪಡೆದು ವಂಚನೆ ನಡೆಸಿರುವುದಾಗಿ ರಾಜೇಶ್ ನಂಬಿಯಾರ್ ವಿರುದ್ಧ ದೂರು ನೀಡಲಾಗಿದೆ. ಈತನ ವಿರುದ್ಧ ಪತ್ತನತ್ತಿಟ್ಟ, ಕರುನಾಗಪಳ್ಳಿ, ಪಾಲರಿವಟ್ಟಂ ಠಾಣೆಗಳಲ್ಲೂ ಇಂತಹ ವಂಚನೆ ಪ್ರಕರಣಗಳಿರುವುದಾಗಿ ಆಯೋಗ ನಡೆಸಿದ ತನಿಖೆಯಿಂದ ಸ್ಪಷ್ಟಗೊಂಡಿದೆ ಎಂದು ಆಯೋಗದ ಅಧ್ಯಕ್ಷ ಆರ್.ವಿ. ರಾಜೇಶ್ ಹೇಳಿದರು.
ಸದಸ್ಯರಾದ ಖಾದರ್ ಮಾಂಗಾಡ್, ಡಿ. ಶಾಜಿ ಉಪಸ್ಥಿತರಿದ್ದರು.
Next Story





