ಅಕ್ರಮ ತಂಬಾಕು ಉತ್ಪನ್ನ ವಶ
ಕಾಸರಗೋಡು, ಜ.6: ಮಂಗಳೂರು ಚೆನ್ನೈ-ಎಕ್ಸೃ್ಪ್ರೆಸ್ ರೈಲಿನಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 1,630 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರೈಲು ಕಾಸರಗೋಡು ನಿಲ್ದಾಣದಲ್ಲಿ ನಿಲುಗಡೆಗೊಳಿಸಿದ್ದ ಸಂದರ್ಭದಲ್ಲಿ ಪೊಲೀಸರು ತಪಾಸಣೆ ನಡೆಸಿದ್ದು, ಜನರಲ್ ಕಂಪಾರ್ಟ್‌ನ ಶೌಚಾಲಯದ ಬಳಿ ಗೋಣಿ ಚೀಲದಲ್ಲಿ ಉತ್ಪನ್ನ ಪತ್ತೆಯಾಗಿದೆ. ಆದರೆ ಸಾಗಾಟಗಾರನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story





