ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು
ಗಂಗೊಳ್ಳಿ, ಜ.6: ಇಲ್ಲಿನ ಬಂದರಿನಿಂದ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ಆಯತಪ್ಪಿ ಬೋಟಿನಿಂದ ನೀರಿಗೆ ಬಿದ್ದು ಮೃತ ಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಅಂಕೋಲದ ಧಾರೇಶ್ವರದ ನಿವಾಸಿ ರಮೇಶ್ ಸುಕ್ರು (45) ಎಂದು ಗುರುತಿಸಲಾಗಿದೆ. ಇತರ ಮೀನುಗಾರರೊಂದಿಗೆ ಸುರಕ್ಷಾ ಪರ್ಸಿನ್ ಬೋಟಿನಲ್ಲಿ ಮೀನುಗಾರಿಕೆ ನಡೆಸಿ ಮಂಗಳವಾರ ರಾತ್ರಿ ವಾಪಸ್ ಬಂದರಿಗೆ ಬರುತ್ತಿದ್ದ ವೇಳೆ ರಮೇಶ್ ಆಯತಪ್ಪಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ಇಂದು ಬೆಳಗ್ಗೆ ಅವರ ಮೃತದೇಹ ಸೌಪರ್ಣಿಕ ನದಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





