ರಾಜ್ಯಮಟ್ಟದ ಶಾರ್ಟ್‌ಕೋರ್ಸ್ ಈಜು: ಬಸವನಗುಡಿ ಅಕ್ವೆಟಿಕ್ ಸೆಂಟರ್ ಚಾಂಪಿಯನ್

ಉಡುಪಿ, ಜ.6: ಕರ್ನಾಟಕ ಈಜು ಸಂಸ್ಥೆ ಹಾಗೂ ಉಡುಪಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಜಂಟಿ ಆಶ್ರಯದಲ್ಲಿ ಉಡುಪಿ ಅಜ್ಜರಕಾಡು ಈಜುಕೊಳದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ 16ನೆ ರಾಜ್ಯ ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ತಂಡಗಳು ಮೇಲುಗೈ ಪಡೆದಿದ್ದು, ಬಸವನಗುಡಿ ಅಕ್ವೆಟಿಕ್ ಸೆಂಟರ್ ಒಟ್ಟು 1,189 ಅಂಕಗಳನ್ನು ಸಂಗ್ರಹಿಸಿ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಡಾಲ್ಫಿನ್ ಅಕ್ವೆಟಿಕ್ಸ್ 561 ಅಂಕಗಳೊಂದಿಗೆ ರನ್ನರ್ ಅಪ್ ಸ್ಥಾನ ಪಡೆದರೆ, ಗ್ಲೋಬಲ್ ಸ್ವಿಮ್ ಸೆಂಟರ್ 208 ಅಂಕಗಳೊಂದಿಗೆ ಮೂರನೆ ಸ್ಥಾನಿಯಾಯಿತು. ಪುತ್ತೂರು ಅಕ್ವೆಟಿಕ್ ಸೆಂಟರ್ 58 ಅಂಕಗಳೊಂದಿಗೆ ಏಳನೆ ಸ್ಥಾನ ಪಡೆದರೆ, ಮಂಗಳೂರಿನ ಮಂಗಳೂರು ಅಕ್ವೆಟಿಕ್ 57 ಅಂಕಗಳೊಂದಿಗೆ ಎಂಟನೆ ಸ್ಥಾನ ಗಳಿಸಿತು.
ಆತಿಥೇಯ ಉಡುಪಿ ತಂಡದ ಈಜುಪಟುಗಳು ಯಾವುದೇ ಪದಕವನ್ನು ಗೆಲ್ಲಲು ವಿಫಲರಾದರಲ್ಲದೇ, ಅಂಕ ಪಟ್ಟಿಯಲ್ಲೂ ತಂಡ ಖಾತೆ ತೆರೆಯಲಿಲ್ಲ.
ದಾಖಲೆ: ಪುರುಷರ 50 ಮೀ. ಬ್ಯಾಕ್‌ಸ್ಟ್ರೋಕ್ ಹಾಗೂ 50 ಮೀ. ಪ್ಲೈನಲ್ಲಿ ಬೆಂಗಳೂರು ಡಾಲ್ಫಿನ್ ಕ್ಲಬ್‌ನ ಶೋವಾನ್ ಗಂಗುಲಿ ಹೊಸ ದಾಖಲೆಗಳನ್ನು ಬರೆದರು. ಅದೇ ರೀತಿ ಮಹಿಳೆಯರ 50 ಮೀ. ಫ್ರಿಸೈಲ್ ಮತ್ತು ಮೆಡ್ಲೇ ರಿಲೇಗಳಲ್ಲಿ ಬಸವನಗುಡಿ ಅಕ್ವೆಟಿಕ್ ಸೆಂಟರ್ ತಂಡ ಹೊಸ ದಾಖಲೆಗಳನ್ನು ಬರೆಯಿತು.







