ವ್ಯಕ್ತಿ ನಾಪತ್ತೆ
ವಿಟ್ಲ, ಜ.6: ವ್ಯಕ್ತಿಯೋರ್ವರು ನಾಪತ್ತೆಯಾಗಿ ಮೂರು ತಿಂಗಳು ಕಳೆದರೂ ವಾಪಸ್ ಬಾರದ ಹಿನ್ನೆಲೆಯಲ್ಲಿ ಜ.3ರಂದು ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ. ನಾಪತ್ತೆಯಾದ ವ್ಯಕ್ತಿಯನ್ನು ತಾಲೂಕಿನ ಬಿ ಮೂಡ ಗ್ರಾಮದ ಪರ್ಲಿಯಾ ನಿವಾಸಿ ಅಬ್ದುಲ್ ಕರೀಂ (40) ಎಂದು ಹೆಸರಿಸಲಾಗಿದೆ. ನ.4 ರಂದು ಎಂದಿನಂತೆ ಬೀಡಿ ಬ್ರಾಂಚ್ ಕೆಲಸಕ್ಕೆ ಹೋದ ಕರೀಂ ಮನೆಗೆ ವಾಪಸಾ ಗಲಿಲ್ಲ ಎಂದು ಅವರ ಪತ್ನಿ ನಹೀಮಾ ಪೊಲೀಸರಿಗೆ ದೂರು ನೀಡಿದ್ದಾರೆ.
Next Story





