ನಿಧನ
ನರಸಿಂಹ ಆಚಾರ್
ಸುಬ್ರಹ್ಮಣ್ಯ, ಜ.6: ಕುಕ್ಕೆ ಸುಬ್ರಹ್ಮಣ್ಯದ ಆದಿಸುಬ್ರಹ್ಮಣ್ಯ ನಿವಾಸಿ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದಲ್ಲಿ ಕಚೇರಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ನರಸಿಂಹ ಆಚಾರ್ (90) ಬುಧವಾರ ನಿಧನರಾದರು.
ಸಂಸ್ಕೃತ ಪಂಡಿತರಾದ ಇವರು ಆರಂಭದಲ್ಲಿ ರಾಮಕುಂಜದ ಶ್ರೀ ರಾಮಕುಂಜೇಶ್ವರ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಸುಬ್ರಹ್ಮಣ್ಯ ಮಠದಲ್ಲಿ ಸೇವೆ ಆರಂಭಿಸಿ ಸುಮಾರು 60 ವರ್ಷಗಳ ಕಾಲ ಶಾನುಭಾಗರಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರು ಐವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಆಗಲಿದ್ದಾರೆ.
ಭಗವಾನ್‌ದಾಸ್ ಪೂಂಜಾ
ಬಂಟ್ವಾಳ, ಜ.6: ತಾಲೂಕಿನ ಅನಂತಾಡಿ ಬಾಳಿಕೆ ನಿವಾಸಿ ಬನ್ನೂರುಗುತ್ತು ಭಗವಾನ್‌ದಾಸ್ ಪೂಂಜಾ (65) ಜ.4ರಂದು ಅಲ್ಪಕಾಲದ ಅಸೌಖ್ಯದಿಂದ ಖಾಸಗಿ ಆಸ್ವತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Next Story





