ಇಂದಿನ ಕಾರ್ಯಕ್ರಮ
ಪೇಜಾವರ ಪರ್ಯಾಯ: ಉಡುಪಿ ನಗರಸಭೆಯ 13 ವಾರ್ಡ್‌ಗಳು ಹಾಗೂ 4 ಗ್ರಾಪಂಗಳಿಂದ ಜೋಡುಕಟ್ಟೆಯಿಂದ ಹೊರೆಕಾಣಿಕೆ ಮೆರವಣಿಗೆ. ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ ಸಂಗೀತ ಬಾಲಚಂದ್ರರಿಂದ ಸಂಗೀತ ರಸಮಂಜರಿ ಸಂಜೆ 5:30ಕ್ಕೆ. ಶ್ರೀಅಧೋಕ್ಷಜ ಮಂಟಪದಲ್ಲಿ ವಾಸುದೇವ ಭಟ್ ಮತ್ತು ಬಳಗದಿಂದ ಯಕ್ಷಗಾನ ತಾಳಮದ್ದಲೆ ‘ಶ್ರೀಹರಿ ದರ್ಶನ’ ಸಮಯ: ರಾತ್ರಿ 7 ಗಂಟೆ.
ಜಿಲ್ಲಾ ನಾಟಕೋತ್ಸವ:
ಕರ್ನಾಟಕ ನಾಟಕ ಅಕಾಡಮಿ, ಸುವರ್ಣ ಸಂಭ್ರಮದಲ್ಲಿರುವ ರಂಗಭೂಮಿ ಉಡುಪಿ ಸಹಯೋಗದೊಂದಿಗೆ ಉಡುಪಿ ಪರ್ಯಾಯೋತ್ಸವದ ಸಂದರ್ಭದಲ್ಲಿ ಆಯೋಜಿಸಿದ ಉಡುಪಿ ಜಿಲ್ಲಾ ನಾಟಕೋತ್ಸವದಲ್ಲಿ ಕುಂದಾಪುರದ ಸಮುದಾಯ ಸಾಂಸ್ಕೃತಿಕ ಸಂಘಟನೆಯಿಂದ ನಿರಂಜನರ ಕಾದಂಬರಿ ಆಧಾರಿತ ‘ಮೃತ್ಯುಂಜಯ’ ನಾಟಕ. ಸಮಯ: ಸಂಜೆ 6:30ರಿಂದ. ಸ್ಥಳ: ಎಂಜಿಎಂ ಕಾಲೇಜಿನ ಮುದ್ದಣ ಮಂಟಪ, ಉಡುಪಿ. ಕೃಷ್ಣ ಮಠದಲ್ಲಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ 9ರಿಂದ ರಾಜಾಂಗಣದಲ್ಲಿ ಪ್ರಸಾದ ನೇತ್ರಾಲಯದಿಂದ ಉಚಿತ ನೇತ್ರ ತಪಾಸಣಾ ಶಿಬಿರ, ಸಂಜೆ 5:30ರಿಂದ ಮಧ್ವಮಂಟಪದಲ್ಲಿ ನ್ಯಾಯವಾದಿ ಕೃಷ್ಣರಾಜ ಆಚಾರ್ಯರಿಂದ ಕೊಳಲು ವಾದನ, 5:30ಕ್ಕೆ ರಾಜಾಂಗಣದಲ್ಲಿ ಧಾರ್ಮಿಕ ಸಭೆ. 7:30ರಿಂದ ರಾಜಾಂಗಣದಲ್ಲಿ ಪರ್ಯಾಯ ಅವಧಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮಂಗಳ ಮಹೋತ್ಸವದ ಅಂಗವಾಗಿ ದೇವದಾಸ ಕಾಪಿಕಾಡು ಮತ್ತು ಬಳಗದಿಂದ ತುಳು ಹಾಸ್ಯಮಯ ನಾಟಕ ‘ಬಂಗಾರ್’. 7:15ಕ್ಕೆ ಸುವರ್ಣ ರಥೋತ್ಸವ.
ಪ್ರಕೃತಿ ಸಂಭ್ರಮ: ಸಾಣೂರಿನ ಪ್ರಕೃತಿ ಸಮೂಹ ಸಂಸ್ಥೆಗಳಿಂದ ನಾಲ್ಕನೆ ವಾರ್ಷಿಕೋತ್ಸವದ ಅಂಗವಾಗಿ ‘ಪ್ರಕೃತಿ ಸಂಭ್ರಮ’. ಸಮಯ: ಬೆಳಗ್ಗೆ 9ರಿಂದ ಸಂಜೆ 5ರವರೆಗೆ. ಸ್ಥಳ: ಪ್ರಕೃತಿ ಸಮೂಹ ಸಂಸ್ಥೆಗಳ ಆವರಣ, ಕಾಂತಾವರ ಗ್ರಾಮ, ಸಾಣೂರು ಕಾರ್ಕಳ.





