ಕರೆ ಮಾಡಿದ್ದು ಕಲ್ಲಡ್ಕ ಪ್ರಭಾಕರ್ ಭಟ್: ಸಿಐಡಿ

ಮಂಗಳೂರು: ಶ್ಯಾಮ್ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆಗೂ ಮುನ್ನ ಸಂಘಪರಿವಾರ ಪ್ರಮುಖನಾದ ಕಲ್ಲಡ್ಕ ಪ್ರಭಾಕರ್ ಭಟ್ ದೂರವಾಣಿ ಮೂಲಕ ಬೆದರಿಕೆ ಹಾಕಿದ್ದರು ಎಂಬುದಕ್ಕೆ ಸಿಐಡಿಗೆ ಖಚಿತ ಸುಳಿವು ಲಭಿಸಿದೆ ಎಂದು ಕನ್ನಡಪ್ರಭ ವರದಿಮಾಡಿದೆ
ಹೊಸನಗರದ ರಾಮಚಂದ್ರಪುರ ಮಠದ ರಾಘವೇಶ್ವರ ಶ್ರೀ ವಿರುದ್ಧದ ಪ್ರಕರಣದಲ್ಲಿ ದೂರುದಾರೆ ಪ್ರೇಮಲತಾ ಪತಿ ದಿವಾಕರ್ ಶಾಸ್ತ್ರೀ ಸಹೋದರ ಶ್ಯಾಮ್ ಪ್ರಸಾದ್ ಶಾಸ್ತ್ರೀ 2014ರ ಸೆಪ್ಟೆಂಬರ್ ನಲ್ಲಿ ಪುತ್ತೂರಿನ ಬಡೆಕ್ಕಿಲ ಗ್ರಾಮದ ಮನೆಯ ಆವರಣದಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆಗೂ ಮುನ್ನ ಶ್ಯಾಮ್ ಪ್ರಸಾದ್ ಗೆ ಕಲ್ಲಡ್ಕ ಪ್ರಭಾಕರ್ ಭಟ್ ಕರೆ ಮಾಡಿದ್ದರು. ಈ ಸಂಬಂಧ ಸಿಐಡಿ ದಾಖಲೆ ಸಂಗ್ರಹಿಸಿ ತನಿಖೆ ನಡೆಸಿತ್ತು. ಇದೀಗ ಕರೆ ಮಾಡಿದ್ದು ಕಲ್ಲಡ್ಕ ಪ್ರಭಾಕರ್ ಭಟ್ ಧ್ವನಿ ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
Next Story





