"ದಿಸ್ ಇಸ್ ಫಾರ‍್ ಅಫ್ಜಲ್ ಗುರು " ದೂತವಾಸ ಕಚೇರಿ ಗೋಡೆಯಲ್ಲಿ ರಕ್ತದಲ್ಲಿ ಬರೆದ ಉಗ್ರರು

ಕಾಬೂಲ್, ಜ.6: ಉಗ್ರರು ದಾಳಿ ನಡೆಸಿರುವ ಕಾಬೂಲ್‌ನಲ್ಲಿರುವ ಭಾರತೀಯ ದೂತವಾಸ ಕಚೇರಿಯ ಗೋಡೆ ಮೇಲೆ ಎರಡು ಬರಹಗಳು ಪತ್ತೆಯಾಗಿದ್ದು, "ದಿಸ್ ಈಸ್ ಫಾರ್ ಅಫ್ಜಲ್ ಗುರು " ., "ಓರ್ವ ಹತನಾದರೆ ಸಾವಿರ ಬಾಂಬರ್ಸ್ ಹುಟ್ಟುತ್ತಾರೆ "ಎಂದು ಉಗ್ರರು ರಕ್ತದಲ್ಲಿ ಬರೆದಿದ್ದಾರೆ.
ಅಫ್ಜಲ್ ಗುರುವನ್ನು ಕೊಂದಿರುವುದಕ್ಕೆ ಪ್ರತಿಕಾರವಾಗಿ ದಾಳಿ ನಡೆಸಿರುವುದಾಗಿ ಉಗ್ರರು ಹೇಳಿಕೊಂಡಿದ್ದಾರೆ. ಇದರಿಂದಾಗಿ ಪಠಾಣ್ ಕೋಟ್ ಮತ್ತು ದೂತವಾಸ ಕಚೇರಿ ಮೇಲೆ ದಾಳಿ ನಡೆಸಿರುವುದು ಪಾಕ್ ಉಗ್ರರ ಕೃತ್ಯವೆಂದು ಸ್ಪಷ್ಟಗೊಂಡಿದೆ. ಭಾರತದ ಸಂಸತ್ ಭವನದ ಮೇಲಿನ ದಾಳಿಯ ಆರೋಪಿ ಅಫ್ಜಲ್ ಗುರುವನ್ನು 2013ರಲ್ಲಿ ಗಲ್ಲಿಗೇರಿಸಲಾಗಿತ್ತು. ಇದಕ್ಕೆ ಪ್ರತಿಕಾರವಾಗಿ ಪಾಕ್‌ನ ಉಗ್ರರು ದಾಳಿಯ ಮೂಲಕ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ಧಾರೆ.
Next Story





