ಅಯ್ಯಪ್ಪ ವೃತ್ತದಾರಿಗಳಿಂದ ಕೋಡಿಜಾಲ್ ಮಸೀದಿಗೆ ಭೇಟಿ

ಕೊಣಾಜೆ: ಶ್ರೀ ಧರ್ಮ ಶಾಸ್ತ ಭಕ್ತ ವೃಂಧ ಶಾರದಾ ನಗರ ಕೊಣಾಜೆ ಇದರ 9ನೆ ಇರುಮುಡಿ ಕಟ್ಟುವ ಸಲುವಾಗಿ ಇಲ್ಲಿನ ಕೋಡಿಜಾಲ್ ಜುಮಾ ಮಸೀದಿಗೆ ಬುಧವಾರ ಬೆಳ್ಳಗೆ ಭೇಟಿ ನೀಡಿ ಹಯಾತುಲ್ ಇಸ್ಲಾಮ್ ಮದರಸದ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಿದರು.
ಈ ಸಂದರ್ಭ ಮಸೀದಿಯ ಖತೀಬ್ ಹಾಜಿ ಅಬೂಬಕರ್ ಸಖಾಫಿ, ಜೊತೆ ಕಾರ್ಯದರ್ಶಿ ರಹ್ಮಾನ್ ಕೆ,ಎಸ್. ಮುಅಲ್ಲಿಮ್ ಮುಹಮ್ಮದ್ ಸ್ವಾಲಿಹ್, ಮುಹಝಿನ್ ಇಬ್ರಾಹಿಂ ಎಚ್.ಎಂ., ಇಸ್ಮಾಯಿಲ್ ಕೆ.ಎಂ. ಮುಹಮ್ಮದ್ ಕೆ.ಎಂ., ಪಂಚಾಯತ್ ಸದಸ್ಯ ರಾಮಚಂದ್ರ, ವೆಂಕಟೇಶ್ ಕೊಣಾಜೆ, ಹರೀಶ್ ಗಟ್ಟಿ, ಖಿದ್ಮತುಲ್ ಇಸ್ಲಾಮ್ ಅಸೋಸಿಯೇಶನ್ ಕೋಡಿಜಾಲ್ ಇದರ ಅಧ್ಯಕ್ಷ ಅಮೀರ್ ಕೋಡಿಜಾಲ್, ಗೌರವಾಧ್ಯಕ್ಷ ಅಬ್ದುಲ್ ರಹ್ಮಾನ್ ಕೆ.ಎಂ. ಕಾರ್ಯದರ್ಶಿ ಶರೀಫ್ ಮತ್ತು ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Next Story





