ಸಮ-ಬೆಸ ಸಂಖ್ಯೆ ಸಂಚಾರ ನಿಯಮ; ಕೇಜ್ರಿವಾಲ್ ಸರಕಾರಕ್ಕೆ ಡಿಲ್ಲಿ ಹೈಕೋರ್ಟ್ ತರಾಟೆ

ಹೊಸದಿಲ್ಲಿ, ಡಿ.6: ರಾಜಧಾನಿ ದಿಲ್ಲಿಯಲ್ಲಿ ಪ್ರಾಯೋಜಿಕವಾಗಿ ಜಾರಿಗೆ ತಂದಿರುವ ಸಮ-ಬೆಸ ಸಂಖ್ಯೆ ವಾಹನ ಸಂಚಾರ ವ್ಯವಸ್ಥೆಯಿಂದಾಗಿ ಜನಸಾಮಾನ್ಯರಿಗೆ ಆಗಿರುವ ತೊಂದರೆಯ ಬಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲಾ ನೇತೃತ್ವದ ಸರಕಾರವನ್ನು ಇಂದು ಡಿಲ್ಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಜನವರಿ 1ರಂದು ಜಾರಿಗೆ ಬಂದಿರುವ 15 ದಿನಗಳ ಸಮ -ಬೆಸ ಸಂಖ್ಯೆಯ ವಾಹನ ಸಂಚಾರದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಹೈಕೋರ್ಟ್ ಸರಕಾರದ ನಿರ್ಧಾರದ ಬಗ್ಗೆ ಗರಂ ಆಗಿದೆ.
ಸಂಚಾರ ವ್ಯವಸ್ಥೆಯ ಪ್ರಾಯೋಗಿಕ ಜಾರಿಗೆ ಹದಿನೈದು ದಿನ ಯಾಕೆ ? ಒಂದು ದಿನ ಸಾಕಲ್ಲವೇ ? ಎಂದು ಪ್ರಶ್ನಿರುವ ಹೈಕೋರ್ಟ್ ಹೊಸ ಸಂಚಾರ ನಿಯಮ ಜಾರಿಗೊಂಡ ಬಳಿಕ ಒಂದು ವಾರದೊಳಗೆ ಕಡಿಮೆಯಾಗಿರುವ ವಾಯು ಮಾಲಿನ್ಯದ ಬಗ್ಗೆ ಶುಕ್ರವಾರ ವರದಿ ನೀಡುವಂತೆ ಡಿಲ್ಲಿ ಹೈಕೋರ್ಟ್ ಸರಕಾರಕ್ಕೆ ಆದೇಶ ನೀಡಿದೆ.
Next Story





