ಅನಂತನಾಗ್‌ನಲ್ಲಿ ಗ್ರೇನೆಡ್ ಸ್ಫೋಟ; 3 ಯೋಧರಿಗೆ ಗಾಯ

ಶ್ರೀನಗರ, ಜ. 6: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನ ಸಿಆರ್‌ಪಿಎಫ್ ಕ್ಯಾಂಪ್ ಬಳಿ ಇಂದು ಗ್ರೇನೆಡ್ ಸ್ಫೋಟಗೊಂಡು ಮೂವರು ಸಿಆರ್‌ಪಿಎಫ್ ಯೋಧರು ಗಂಭೀರ ಗಾಯಗೊಂಡಿದ್ದಾರೆ.
ಮೊಮಿನಾಬಾದ್‌ನಲ್ಲಿರುವ ಸಿಆರ್‌ಪಿಎಫ್‌ನ 40ನೆ ಬೆಟಾಲಿಯನ್ ಕ್ಯಾಂಪ್‌ನ ಗೇಟ್ ಬಳಿ ಗ್ರೇನೆಡ್ ಸ್ಫೋಟ ಸಂಭವಿಸಿದೆ. ಅಫ್ಘಾನಿಸ್ತಾನದಿಂದ ಐವರು ಉಗ್ರರು ಶ್ರೀನಗರಕ್ಕೆ ನುಗ್ಗಿರುವ ಶಂಕೆ ವ್ಯಕ್ತವಾಗಿದೆ., ಉಗ್ರರು ಗ್ರೇನೆಡ್ ಎಸೆದು ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಸೇನಾ ವಕ್ತಾರರೊಬ್ಬರು ತಿಳಿಸಿದ್ದಾರೆ.ಈ ಘಟನೆ ಬಳಿಕ ಶ್ರೀನಗರದ ಏರ್‌ಪೋರ್ಟ್‌ಗೆ ಬಿಗು ಭದ್ರತೆ ಒದಗಿಸಲಾಗಿದ್ದು, . ಏರ್‌ಪೋರ್ಟ್‌ನ್ನು ಸೇನೆ ಸುತ್ತುವರಿದಿದೆ......
Next Story





