ಚಿನ್ನಾಭರಣ ಕಳವು: ದೂರು
ಮಂಗಳೂರು, ಜ. 6: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ 1.5 ಲಕ್ಷ ರೂ. ವೌಲ್ಯದ ಚಿನ್ನಾಭರಣ ಕಳವಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮರೋಳಿಯ ನಿವಾಸಿ ಕೀರ್ತನ್ ಸುವರ್ಣ ಎಂಬವರ ಪತ್ನಿ ಬಬಿತಾ ಎಂಬವರು ಅಡಮಾನ ಇಡಲೆಂದು ಸುಮಾರು 30 ಗ್ರಾಂ ಚಿನ್ನಾಭರಣವನ್ನು ಮನೆಯಿಂದ ತಂದಿದ್ದರೆನ್ನಲಾಗಿದೆ. ಬೆಳಗ್ಗೆ ಸುಮಾರು 9:15ಕ್ಕೆ ಚಿನ್ನಾಭರಣ ಹೊಂದಿದ್ದ ಪರ್ಸ್‌ನ್ನು ಬ್ಯಾಗಿನಲ್ಲಿಟ್ಟು ನಾಗುರಿಯಿಂದ ಮಂಗಳೂರಿನ ಕಡೆಗೆ ಪ್ರಯಾಣಿಸಿದ್ದರು. ಮಲ್ಲಿಕಟ್ಟೆಯಲ್ಲಿ ಬಸ್ಸಿನಿಂದಿಳಿದು ಪರ್ಸ್‌ನ್ನು ತೆಗೆಯಲು ಬ್ಯಾಗನ್ನು ನೋಡಿದಾಗ ಪರ್ಸ್ ಕಾಣೆಯಾಗಿತ್ತು. ಪರ್ಸ್‌ನಲ್ಲಿ ಸುಮಾರು 30 ಗ್ರಾಂ ತೂಕದ ಹವಳದ ಸರ-1, 16 ಗ್ರಾಂ ತೂಕದ ಚಿನ್ನ ಬಳೆ-2, 10 ಗ್ರಾಂ ತೂಕದ ಕಿವಿಯ ಬೆಂಡೋಲೆ ಜುಮುಕಿ ಸಹಿತ-1 ಜೊತೆ, 8 ಗ್ರಾಂ ತೂಕದ ಚಿನ್ನದ ಉಂಗುರ-2, ಹೀಗೆ ಒಟ್ಟು 64 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದ್ದು, ಸುಮಾರು 1.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬಬಿತಾ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
Next Story





