ಪಾಂಡೇಶ್ವರ ಪೊಲೀಸರ ವಶದಲ್ಲಿ ಬನ್ನಂಜೆ ರಾಜಾ
ಮಂಗಳೂರು, ಜ. 6: ಕುಖ್ಯಾತ ಪಾತಕಿ ಬನ್ನಂಜೆ ರಾಜನನ್ನು ಎರಡು ದಿನಗಳ ಕಾಲ ಪಾಂಡೇಶ್ವರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಐದು ದಿನಗಳ ಹಿಂದೆ ಕದ್ರಿ ಪೊಲೀಸರ ವಶದಲ್ಲಿದ್ದ ಬನ್ನಂಜೆ ರಾಜಾನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಪಾಂಡೇಶ್ವರ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇದನ್ನು ಪುರಸ್ಕಕರಿಸಿದ ನ್ಯಾಯಾಲಯ ಆರೋಪಿ ರಾಜಾನನ್ನು ಪಾಂಡೇಶ್ವರ ಪೊಲೀಸರಿಗೆ ಒಪ್ಪಿಸಿದೆ.
Next Story





