ಜಿ.ಪಂ-ತಾ.ಪಂ ಚುನಾವಣೆ; ಬಿಜೆಪಿ ಚುನಾವಣಾ ಪ್ರಭಾರಿಗಳ ನೇಮಕ
ಬೆಂಗಳೂರು, ಜ.6: ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾ ಪ್ರಭಾರಿ ಹಾಗೂ ಸಹ ಪ್ರಭಾರಿಗಳನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಆದೇಶ ಹೊರಡಿಸಿದ್ದಾರೆ.
ಮೈಸೂರು ಜಿಲ್ಲೆ: ಪ್ರತಾಪ್ ಸಿಂಹ (ಪ್ರಭಾರಿ) ಹಾಗೂ ಸಿದ್ದರಾಜು(ಸಹ ಪ್ರಭಾರಿ), ಚಾಮರಾಜನಗರ: ವಿ.ಸೋಮಣ್ಣ ಹಾಗೂ ಸಿ.ಎಚ್.ವಿಜಯಶಂಕರ್, ಮಂಡ್ಯ: ಇ.ಅಶ್ವಥ್‌ನಾರಾಯಣ ಹಾಗೂ ತೇಜಸ್ವಿನಿ ಗೌಡ, ಹಾಸನ: ಎಂ.ಕೆ.ಪ್ರಾಣೇಶ್ ಹಾಗೂ ಎಸ್.ಜಿ.ಮೇದಪ್ಪ.
ಕೊಡಗು:
ಅಪ್ಪಚ್ಚು ರಂಜನ್, ದಕ್ಷಿಣ ಕನ್ನಡ: ವಿ.ಸುನೀಲ್‌ಕುಮಾರ್ ಹಾಗೂ ಲಾಲಾಜಿ ಮೆಂಡನ್, ಉಡುಪಿ: ಮೋನಪ್ಪ ಭಂಡಾರಿ ಹಾಗೂ ಕ್ಯಾ.ಗಣೇಶ್ ಕಾರ್ಣಿಕ್. ಚಿಕ್ಕಮಗಳೂರು: ಬಿ.ಸಿ.ನಾಗೇಶ್, ಶಿವಮೊಗ್ಗ: ವಿಶ್ವೇಶ್ವರ ಹೆಗಡೆ ಕಾಗೇರಿ, ಉತ್ತರ ಕನ್ನಡ: ಎಂ.ಬಿ.ಭಾನುಪ್ರಕಾಶ್ ಹಾಗೂ ಕೋಟಾ ಶ್ರೀನಿವಾಸ್ ಪೂಜಾರಿ.
ಹಾವೇರಿ: ಡಾ.ಮಾ.ನಾಗರಾಜ್.
ಧಾರವಾಡ: ಸುರೇಶ್ ಅಂಗಡಿ ಹಾಗೂ ಅರವಿಂದ್ ಬೆಲ್ಲದ್. ಗದಗ: ಶಿವಕುಮಾರ್ ಉದಾಸಿ ಹಾಗೂ ಎಸ್.ವಿ.ಸಂಕನೂರು.
ಬೆಳಗಾವಿ: ಮಹಾಂತೇಶ ಕವಟಗಿಮಠ ಹಾಗೂ ಶಶಿಕಾಂತ್ ನಾಯಕ್
ಚಿಕ್ಕೋಡಿ: ಸಂಜಯ್‌ಪಾಟೀಲ್ ಹಾಗೂ ಅರುಣ್ ಶಹಾಪುರ್.
ವಿಜಯಪುರ: ಲಕ್ಷ್ಮಣ ಸವದಿ ಹಾಗೂ ಸಿದ್ದು ಸವದಿ.
ಬಾಗಲಕೋಟೆ: ಬಸವರಾಜ ಬೊಮ್ಮಾಯಿ ಹಾಗೂ ಅಭಯ್ ಪಾಟೀಲ್.
ಬೀದರ್: ನಾರಾಯಣ ಸಾ.ಭಾಂಡಗೆ ಹಾಗೂ ಶ್ರೀಕಾಂತ್ ಕುಲಕರ್ಣಿ.
ಕಲಬುರಗಿ: ಭಗವಂತ ಖೂಬಾ ಹಾಗೂ ಜಿ.ಟಿ.ಪಾಟೀಲ್. ಯಾದಗಿರಿ: ಅಶೋಕ್ ಗಸ್ತಿ ಹಾಗೂ ದಯಾಘನ ಧಾರವಾಡಕರ್.
ರಾಯಚೂರು: ಹಾಲಪ್ಪ ಆಚಾರ್. ಕೊಪ್ಪಳ: ಶಂಕರಪ್ಪ ಹಾಗೂ ಮೃತ್ಯುಂಜಯ ಜಿನಗಾ. ಬಳ್ಳಾರಿ: ಶಿವರಾಮಗೌಡ ಕೊಪ್ಪಳ ಹಾಗೂ ಸಿದ್ದೇಶ್ ಯಾದವ್. ದಾವಣಗೆರೆ: ಆಯನೂರು ಮಂಜುನಾಥ್. ಚಿತ್ರದುರ್ಗ: ಶೋಭಾ ಕರಂದ್ಲಾಜೆ ಹಾಗೂ ಡಾ.ಎ.ಎಚ್.ಶಿವಯೋಗಿ ಸ್ವಾಮಿ. ತುಮಕೂರು: ಎಸ್.ಸುರೇಶ್‌ಕುಮಾರ್ ಹಾಗೂ ಅಶ್ವಥ್‌ನಾರಾಯಣ.
ರಾಮನಗರ: ಎಚ್.ಎಸ್.ಗೋಪಿನಾಥ್ ರೆಡ್ಡಿ. ಬೆಂಗಳೂರು ಗ್ರಾಮಾಂತರ:
ಎಸ್.ಆರ್.ವಿಶ್ವನಾಥ್ ಹಾಗೂ ಸಚ್ಚಿದಾನಂದಮೂರ್ತಿ, ಚಿಕ್ಕಬಳ್ಳಾಪುರ: ಪಿ.ಸಿ.ಮೋಹನ್ ಹಾಗೂ ವೈ.ಎ.ನಾರಾಯಣಸ್ವಾಮಿ ಕೋಲಾರ: ನಂದೀಶ್‌ರೆಡ್ಡಿ. ಬೆಂಗಳೂರು ನಗರ ಜಿಲ್ಲೆ: ಬಿ.ಎನ್.ವಿಜಯಕುಮಾರ್ ಹಾಗೂ ಎಸ್.ಮುನಿರಾಜು ಅವರನ್ನು ಚುನಾವಣಾ ಪ್ರಭಾರಿ ಹಾಗೂ ಸಹ ಪ್ರಭಾರಿಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.





