Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಜನತಾ ಪರಿವಾರ ಏಕೀಕರಣ ಕನಸಿನ ಕೂಸು...

ಜನತಾ ಪರಿವಾರ ಏಕೀಕರಣ ಕನಸಿನ ಕೂಸು ಎನ್ನೋಣವೇ?

ವಿಶಾಂತ್ ಡಿ’ಸೋಜ, ಮಂಗಳೂರುವಿಶಾಂತ್ ಡಿ’ಸೋಜ, ಮಂಗಳೂರು6 Jan 2016 11:17 PM IST
share
ಜನತಾ ಪರಿವಾರ ಏಕೀಕರಣ ಕನಸಿನ ಕೂಸು ಎನ್ನೋಣವೇ?

ಜನತಾ ಪರಿವಾರದ ಏಕೀಕರಣದ ಬಗ್ಗೆ ಚರ್ಚೆ ಆರಂಭವಾಗಿದೆ. ಚರ್ಚೆ ಮುಕ್ತಾಯವಾಗುವಾಗ ಜನತಾದಳ ಒಡೆದು ಮತ್ತೊಂದು ಪಕ್ಷ ಉದಯವಾಗುತ್ತದೆ. ಇದು ವಾಸ್ತವ. ಹಿಂದೊಮ್ಮೆ ಜೆ.ಡಿ.ಯು ಮತ್ತು ಜೆ.ಡಿ.ಎಸ್. ಏಕೀಕರಣಕ್ಕಾಗಿ ಮಾಜಿ ಪ್ರಧಾನಿ ದೇವೇಗೌಡರು ದಿ. ಎಸ್.ಆರ್. ಬೊಮ್ಮಾಯಿಯವರನ್ನು ನೇಮಿಸಿದ್ದರು. ಆದರೆ ಅವರು ಸಭೆ ನಡೆಸಿ ಬಂದು ಅಖಿಲ ಭಾರತ ಪ್ರಗತಿಪರ ಜನತಾದಳ ಎಂಬ ಮತ್ತೊಂದು ಪಕ್ಷವನ್ನು ಹುಟ್ಟು ಹಾಕಿದರು. ಜಯಪ್ರಕಾಶ್ ನಾರಾಯಣ್ ಮತ್ತು ರಾಂ ಮನೋಹರ್ ಲೋಹಿಯಾ ವಿಚಾರಧಾರೆಯ ಬಗ್ಗೆ ಮಾತನಾಡುವವರು ದೇಶದಲ್ಲಿ ಚೂರು ಚೂರಾಗಿ ವಿಭಜನೆಯಾಗಿರುವುದರಿಂದಲೇ ಕೋಮುವಾದಿ ಬಿ.ಜೆ.ಪಿ. ದೇಶಾದ್ಯಂತ ಇಂದು ತನ್ನ ವಿಸ್ತಾರವನ್ನು ಹೆಚ್ಚಿಸಿಕೊಂಡು ಕೇಂದ್ರದ ಆಡಳಿತ ಚುಕ್ಕಾಣಿಯನ್ನು ಹಿಡಿದಿದೆ. ಭ್ರಷ್ಟಾಚಾರಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ದೇಶದ ಜನತೆ ತಿರಸ್ಕರಿಸಿದಾಗ ಅವರಿಗೆ ಬೆಂಬಲಿಸಲು ಪರ್ಯಾಯ ಶಕ್ತಿ ಇರಲಿಲ್ಲ. ಆದಕಾರಣ ಜನರು ಮನಸ್ಸಿಲ್ಲದ ಮನಸ್ಸಿನಿಂದ ಬಿ.ಜೆ.ಪಿ. ಯನ್ನು ಆಯ್ಕೆ ಮಾಡಿದರು. ಜನತಾ ಪರಿವಾರದ ಏಕೀಕರಣಕ್ಕೆ ವಿಘ್ನ ಸೃಷ್ಟಿಸುವ ಶಕ್ತಿಗಳು ಖಂಡಿತವಾಗಿಯೂ ಬಿ.ಜೆ.ಪಿ. ಯ ಕೈಗೊಂಬೆಗಳು ಎನ್ನಲು ಭಾರೀ ರಾಜಕೀಯ ಪಾಂಡಿತ್ಯದ ಅಗತ್ಯವಿಲ್ಲ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪರಿವಾರ ಪಕ್ಷಗಳು ಹೀನಾಯವಾಗಿ ಸೋತಾಗ ಜನತಾ ಪರಿವಾರದ ನಾಯಕರು ಒಟ್ಟಾಗಿ ಸೇರಿ ಕೋಮು ಶಕ್ತಿಗಳ ವಿರುದ್ಧ ಹೋರಾಟಕ್ಕೆ ಟೊಂಕಕಟ್ಟಿದವು. ಇನ್ನೇನು ಜೆ.ಡಿ.ಯು, ಆರ್.ಜೆ.ಡಿ., ಜೆ.ಡಿ.ಎಸ್. ಮತ್ತು ಸಮಾಜವಾದಿ ಪಕ್ಷಗಳು ವಿಲೀನಗೊಂಡು ಹೊಸ ಪಕ್ಷ ರಚನೆಯಾಯಿತು ಎನ್ನುತ್ತಿರುವಾಗಲೇ ಅದರೊಳಗೆ ಅಪಸ್ವರ ಕೇಳಿಬಂತು. ತಕ್ಷಣ ಬರಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಾರಕವಾಗಬಹುದು ಎಂಬ ಕಾರಣಕ್ಕೆ ವಿಲೀನ ಪ್ರಕ್ರಿಯೆ ಮುಂದೂಡಲಾಯಿತು. ರಾಷ್ಟ್ರದ ಸರ್ವತೋಮುಖ ಹಿತಾಸಕ್ತಿಗೆ ಜನತಾ ಪರಿವಾರದ ವಿಲೀನ ಅನಿವಾರ್ಯ ಕೂಡಾ. ಆದರೆ ಜನತಾ ಪರಿವಾರದೊಳಗಿನ ಬಿಜೆಪಿ ಅಭಿಮಾನಿಗಳಿಗೆ ವಿಲೀನ ಬೇಕಾಗಿಲ್ಲ.
 ಈಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮಾತನಾಡುವ ದಾಟಿಯನ್ನು ನೋಡಿದರೆ ವಿಲೀನ ಸಾಧ್ಯವಿಲ್ಲ ಎಂದೆನಿಸುತ್ತದೆ. ನಾವು ಸಿಪಿಎಂ ಮತ್ತು ಬಿಎಸ್ಪಿ ಜೊತೆ ಹೊಂದಾಣಿಕೆಗೆ ಸಿದ್ಧ. ಆದರೆ ಜೆಡಿಯು ಜೊತೆ ಸಾಧ್ಯವಿಲ್ಲ ಎಂದಿರುವುದು ಆಶ್ಚರ್ಯಕರವಾಗಿದೆ. ಜೆಡಿಎಸ್ ನಾಯಕರಾದ ಬಸವರಾಜ್ ಹೊರಟ್ಟಿ, ಚೆಲುವರಾಯ ಸ್ವಾಮಿ ಎಂ.ಸಿ. ನಾಣಯ್ಯ ಮತ್ತು ಝಮೀರ್ ಅಹ್ಮದ್ ಮುಂತಾದವರಿಗೆ ದೇವೆಗೌಡರ ಸಹವಾಸ ಸಾಕಾಗಿ ಹೋಗಿದೆ. ದೇವೇಗೌಡರ ಪುತ್ರ ಕುಮಾರಸ್ವಾಮಿಯವರು ಭಾರತೀಯ ಜನತಾ ಪಕ್ಷದ ಮಾನಸಪುತ್ರ ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿರುವುದನ್ನು ಇಕ್ಬಾಲ್ ಅನ್ಸಾರಿಯಂತಹ ನಾಯಕರೇ ಬಹಿರಂಗಪಡಿಸಿದ್ದಾರೆ. ಆದುದರಿಂದ ಜೆಡಿಎಸ್‌ನಲ್ಲಿರುವ ದೊಡ್ಡ ಸಂಖ್ಯೆಯ ಬಿಜೆಪಿ ಅಭಿಮಾನಿಗಳು ಜನತಾ ಪರಿವಾರದ ವಿಲೀನ ಬಹಿರಂಗವಾಗಿ ವಿರೋಧಿಸದಿದ್ದರೂ ಅದಕ್ಕೆ ತೊಡರುಗಾಲು ಹಾಕುತ್ತಲೇ ಇದ್ದಾರೆ.
 ಇತ್ತೀಚೆಗೆ ಮುಗಿದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಲಾಯಂ ಸಿಂಗ್ ಯಾದವ್ ಮತ್ತು ದೇವೇಗೌಡರ ನಿಜಬಣ್ಣ ಬಯಲಾಗಿದೆ. ಇಡೀ ದೇಶದ ಪ್ರಗತಿಪರ ವಿಚಾರವಂತರು ಮಹಾಮೈತ್ರಿ ಕೂಟದ ಗೆಲುವಿಗಾಗಿ ಹಾತೊರೆಯುತ್ತಿದ್ದರೆ, ಜನತಾ ಪರಿವಾರದ ಭಾಗವಾದ ಈ ನಾಯಕರು ಜೆ.ಡಿ.(ಯು) ಪಕ್ಷದ ಸೋಲಿಗಾಗಿ ಶಕ್ತಿಮೀರಿ ಪ್ರಯತ್ನಿಸಿದ್ದರು. ಮುಲಾಯಂ ಸಿಂಗ್ ಯಾದವ್‌ರ ಸಮಾಜವಾದಿ ಪಕ್ಷದ ಸ್ಪರ್ಧೆ ಬಹುತೇಕ ಜೆ.ಡಿ.ಯು ವಿರುದ್ಧವಾಗಿತ್ತು. ಜೆ.ಡಿ.ಎಸ್. ಪಕ್ಷದ ಬಿಹಾರ ಘಟಕದ ಅಧ್ಯಕ್ಷ ಬ್ರಹ್ಮಾನಂದ ಮಂಡಲ್‌ರವರು ಬಿಹಾರ ಚುನಾವಣೆಯಲ್ಲಿ ಬಿಜೆಪಿ ಮತ್ತು ಲೋಕಜನಶಕ್ತಿ ಪರವಾಗಿ ಕೆಲಸ ಮಾಡಿದ್ದರು. ಅಂದರೆ ನಿತೀಶ್ ಕುಮಾರ್ ರಾಷ್ಟ್ರಮಟ್ಟದ ಪ್ರಬಲ ನಾಯಕನಾಗಿ ಬೆಳೆಯುವುದು ಇವರಿಗೆ ಇಷ್ಟವಿರಲಿಲ್ಲ. ಪರಿಸ್ಥಿತಿ ಹೀಗಿರುವಾಗ ಜೆ.ಡಿ.ಎಸ್. ಪಕ್ಷದಲ್ಲಿರುವ ವಿಚಾರವಂತರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನಿತೀಶ್ ಕುಮಾರ್ ನೇತೃತ್ವದಲ್ಲಿ ಪ್ರಬಲ ಜನತಾ ಶಕ್ತಿ ರೂಪಿಸಬೇಕಾಗಿದೆ. ಬಹಳಷ್ಟು ವರ್ಷದ ಕಾಲ ದೇವೆಗೌಡರ ನೆರಳಲ್ಲಿದ್ದ ಕೇರಳದ ಜನಪ್ರಿಯ ನಾಯಕ ಎಂ.ಪಿ. ವೀರೇಂದ್ರ ಕುಮಾರ್ ದಾರಿಯಲ್ಲಿ ಹೊರಟ್ಟಿ, ನಾಣಯ್ಯರಂತಹ ನಾಯಕರು ಹೆಜ್ಜೆ ಇಡಬೇಕು. ಕೇರಳದಲ್ಲಿ ಜೆ.ಡಿ.ಎಸ್. ನಾಯಕರು ಕಾರ್ಯಕರ್ತರು ಈಗಾಗಲೇ ಜೆಡಿಯು ನತ್ತ ಹೆಜ್ಜೆ ಇಟ್ಟಿದ್ದಾರೆ. ಕೇರಳದ ಪ್ರಭಾವಿ ಜೆಡಿಎಸ್ ಮುಖಂಡರಾದ ಪ್ರೇಮನಾಥನ್ ಮತ್ತು ಕೃಷ್ಣನ್ ಕುಟ್ಟಿ ತನ್ನ ಬೆಂಬಲಿಗರೊಂದಿಗೆ ಜೆ.ಡಿ.ಯು ಸೇರಿದ್ದಾರೆ. ಒಂದು ವೇಳೆ ಎಂ.ಪಿ. ವೀರೇಂದ್ರಕುಮಾರ್ ಜೆ.ಡಿ.ಎಸ್. ನಲ್ಲಿರುತ್ತಿದ್ದರೆ ದೇವೇಗೌಡರ ನಿವೃತ್ತಿಯ ನಂತರ ಪಕ್ಷದ ಚುಕ್ಕಾಣಿ ಅವರ ಕೈಸೇರುತ್ತಿತ್ತು. ತನ್ನ ಕುಟುಂಬದ ಹಿಡಿತ ಕಡಿಮೆಯಾಗಬಹುದು ಎಂಬ ದುರಾಲೋಚನೆಯಿಂದ ದೇವೆಗೌಡರು ವೀರೇಂದ್ರ ಕುಮಾರ್‌ರನ್ನು ದೂರಮಾಡಿದರು ಎನ್ನುವ ಸತ್ಯವನ್ನು ಎಲ್ಲರೂ ತಿಳಿದುಕೊಳ್ಳಬೇಕು. ದೇವೇಗೌಡರ ಪಕ್ಷ ಇಂದು ಚೈನ್ ಥರಾ ಮುಂದುವರಿಯುತ್ತಿರುವುದು ನಾವು ನೋಡಬಹುದು. ದೇವೇಗೌಡ, ಕುಮಾರ ಸ್ವಾಮಿ, ರೇವಣ್ಣ, ಅನಿತಾ ಕುಮಾರಸ್ವಾಮಿ, ನಿಖಿಲ್ ಗೌಡ, ಪ್ರಜ್ವಲ್ ರೇವಣ್ಣ ಅದು ಹೀಗೆ ಮುಂದುವರಿಯುತ್ತದೆ. ಜನತಾದಳ ಪರಿವಾರ ನಾಯಕರಾದ ಲಾಲೂ, ಮುಲಾಯಂ, ಚೌಟಾಲ ಮುಂತಾದವರು ಕೂಡಾ ದೇವೇಗೌಡರನ್ನು ಮೀರಿಸುವ ರೀತಿಯಲ್ಲಿ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಸ್ವಜನ ಪಕ್ಷಪಾತ, ಕುಟುಂಬ ರಾಜಕಾರಣ, ಭ್ರಷ್ಟಾಚಾರದ ಸುಳಿಗೆ ಸಿಲುಕದ ನಿರ್ಮಲ ವ್ಯಕ್ತಿತ್ವದ ವ್ಯಕ್ತಿಯಾಗಿ ಗೋಚರಿಸುತ್ತಿರುವುದು ನಿತೀಶ್ ಕುಮಾರ್ ಮಾತ್ರ. ಜನತಾ ಪರಿವಾರದ ಹಿತಾಸಕ್ತಿ ಬಯಸುವ ಎಲ್ಲಾ ನಾಯಕರು, ಕಾರ್ಯಕರ್ತ ಸಹೋದರರು ಇದನ್ನು ಗಮನಿಸಬೇಕು. ಕರ್ನಾಟಕ ಜನತಾ ದಳದಲ್ಲಿ ಸಿದ್ದರಾಮಯ್ಯ, ಪಿ.ಜಿ.ಆರ್. ಸಿಂಧ್ಯಾ ರಂತಹ ನಾಯಕರು ಬೇರುಮಟ್ಟದಲ್ಲಿ ಬೆಳೆಯುವುದನ್ನು ದೇವೆಗೌಡರು ಯಾವ ರೀತಿಯಲ್ಲಿ ತಡೆದರು ಎನ್ನುವುದು ಗೊತ್ತಿದೆ. ಹಾಗಿರುವಾಗ ದೇವೆಗೌಡರ ನೇತೃತ್ವದಲ್ಲಿ ಪರಿವಾರ ಒಟ್ಟಾದರೆ ಕಾರ್ಯಕರ್ತರ ಗತಿಯೇನು? ಹೊರಟಿ, ನಾಣಯ್ಯರಂತಹ ನಾಯಕರನ್ನೇ ಸ್ವೀಕರಿಸಲು ತಯಾರಿಲ್ಲದ ದೇವೇಗೌಡರು ನಾಡಗೌಡ, ಬಿ.ಆರ್. ಪಾಟೀಲರಂತಹ ನಾಯಕರನ್ನು ಒಪ್ಪಲು ತಯಾರಿರುವರೇ?

ಕಳೆದ ಡಿಸೆಂಬರ್‌ನಲ್ಲಿ ಜೆ.ಡಿ.ಯು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ‘ಚಕ್ರ’ ಚಿಹ್ನೆ ಮರಳಿ ಪಡೆಯಲು ಚುನಾವಣಾ ಆಯೋಗವನ್ನು ಸಂಪರ್ಕಿಸಲು ತೀರ್ಮಾನಿಸಲಾಯಿತು. ಅದರ ಅನಿವಾರ್ಯತೆಯನ್ನು ಜೆ.ಡಿ.(ಯು) ನಾಯಕರು ಜೆ.ಡಿ.ಎಸ್.ಗೆ ಮನವರಿಕೆ ಮಾಡಿದರು. ಝಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಶಿವಸೇನೆಯ ಚಿಹ್ನೆ ‘ಬಾಣ’ವನ್ನು ಹೋಲುವುದರಿಂದ ನಮಗೆ ಅದರ ಅನಿವಾರ್ಯತೆ ಇದೆ. ಈಗ ಜೆಡಿಎಸ್ ತಗಾದೆ ತೆಗೆದಿದೆ. ‘ಚಕ್ರ’ ತನಗೆ ಬೇಕೆಂದು ಚುನಾವಣಾ ಆಯೋಗವನ್ನು ಸಂಪರ್ಕಿಸಲು ಅದು ತೀರ್ಮಾನಿಸಿದೆ. ಚಕ್ರ ಚಿಹ್ನೆ ಜೆ.ಡಿ.ಯು. ಗೆ ಸಿಗಬಾರದು ಎನ್ನುವ ದುರಾಸೆಯನ್ನು ಬಿಟ್ಟರೆ ಅವರಿಗೆ ಯಾವುದೇ ಸದುದ್ದೇಶವಿಲ್ಲ. ಇವು ಕೇವಲ ಕೆಲವು ವಿಚಾರಗಳು ಮಾತ್ರ. ಜೆ.ಡಿ.ಯು, ಜೆ.ಡಿ.ಎಸ್. ವಿಲೀನಕ್ಕೆ ಅಡ್ಡಿಯಾಗಬಹುದಾದ ಬಹಳಷ್ಟು ವಿಚಾರಗಳಿವೆ. ಏನೇ ಇರಲಿ ರಾಷ್ಟ್ರಮಟ್ಟದಲ್ಲಿ ಜೆ.ಡಿ.ಯು ಬಲಿಷ್ಠ ಶಕ್ತಿಯಾಗಿ ಬೆಳೆಯುವುದರಲ್ಲಿ ಯಾವುದೇ ಸಂದೇಹ ಬೇಡ.

share
ವಿಶಾಂತ್ ಡಿ’ಸೋಜ, ಮಂಗಳೂರು
ವಿಶಾಂತ್ ಡಿ’ಸೋಜ, ಮಂಗಳೂರು
Next Story
X