ತಾಯಿ ಮದ್ಯ ಸೇವಿಸಿದರೆ ಮಗುವಿಗೆ 428 ಕಾಯಿಲೆ
ಟೊರಾಂಟೊ, ಜ. 6: ಗರ್ಭಧಾರಣೆ ಅವಧಿಯಲ್ಲಿ ಮದ್ಯ ಸೇವಿಸಿದರೆ ಹೊಟ್ಟೆಯಲ್ಲಿರುವ ಮಗು 428 ವಿವಿಧ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಯಿರುತ್ತದೆ ಎಂದು ನೂತನ ಅಧ್ಯಯನವೊಂದು ಎಚ್ಚರಿಸಿದೆ.
ಎಷ್ಟು ಮತ್ತು ಯಾವಾಗ ಮದ್ಯ ಸೇವಿಸಲಾಗಿದೆ ಎಂಬ ಆಧಾರದಲ್ಲಿ ರೋಗಗಳ ತೀವ್ರತೆ ಮತ್ತು ಲಕ್ಷಣಗಳು ಮಾರ್ಪಡುತ್ತವೆ ಎಂದು ಸಂಶೋಧನೆ ಹೇಳಿದೆ. ಕೇಂದ್ರೀಯ ನರವ್ಯೆಹ (ಮೆದುಳು), ದೃಷ್ಟಿ, ಶ್ರವಣ, ಹೃದಯ, ರಕ್ತಪರಿಚಲನೆ, ಜೀರ್ಣಾಂಗವ್ಯೆಹ ಮತ್ತು ಸ್ನಾಯು ಮತ್ತು ಉಸಿರಾಟ ವ್ಯವಸ್ಥೆಗಳು ಸೇರಿದಂತೆ ದೇಹದ ಬಹುತೇಕ ಎಲ್ಲ ವ್ಯವಸ್ಥೆಯ ಮೇಲೆ ರೋಗ ದಾಳಿ ನಡೆಸುವ ಸಾಧ್ಯತೆಯಿದೆ ಎಂದಿದೆ.
Next Story