ಅಫ್ಘಾನ್ ಈಗಲೂ ಅಪಾಯಕಾರಿ ಸ್ಥಳ: ಅಮೆರಿಕ
ವಾಶಿಂಗ್ಟನ್, ಜ. 6: ಅಫ್ಘಾನಿಸ್ತಾನ ಈಗಲೂ ಅಪಾಯಕಾರಿ ಸ್ಥಳವಾಗಿಯೇ ಮುಂದುವರಿದಿದೆ ಎಂದು ಅಮೆರಿಕ ಬುಧವಾರ ಹೇಳಿದೆ. ಯುದ್ಧಗ್ರಸ್ತ ದೇಶದಲ್ಲಿ ಓರ್ವ ಅಮೆರಿಕನ್ ಸೈನಿಕ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆಯ ಬೆನ್ನಲ್ಲೇ ಅಮೆರಿಕ ಈ ಹೇಳಿಕೆ ನೀಡಿದೆ.
ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತದ ಮರ್ಜ ಸಮೀಪ ನಡೆದ ಕಾರ್ಯಾಚರಣೆಯಲ್ಲಿ ಓರ್ವ ಅಮೆರಿಕನ್ ಸೈನಿಕ ಮೃತಪಟ್ಟಿದ್ದಾರೆ ಎಂಬುದಾಗಿ ಪೆಂಟಗನ್ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೋಶ್ ಅರ್ನೆಸ್ಟ್ ಈ ಪ್ರತಿಕ್ರಿಯೆ ನೀಡಿದರು. ಇತ್ತೀಚಿನ ದಿನಗಳಲ್ಲಿ ತಾಲಿಬಾನ್ ಸಾಧಿಸಿದ ಮುನ್ನಡೆಯ ಹಿನ್ನೆಲೆಯಲ್ಲಿ, ಬಂಡುಕೋರರನ್ನು ಹಿಮ್ಮೆಟ್ಟಿಸಲು ಅಮೆರಿಕ ಮತ್ತು ಅಫ್ಘಾನ್ ಪಡೆಗಳು ಬಿರುಸಿನ ಕಾರ್ಯಾಚರಣೆ ನಡೆಸುತ್ತಿವೆ.
Next Story