ದಿಲ್ಲಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ; ದಂಡ ವಸೂಲಿ 1 ಕೋಟಿ ರೂ. ದಾಟುವ ನಿರೀಕ್ಷೆ

ಹೊಸದಿಲ್ಲಿ, ಜ.7: ಹೊಸವರ್ಷದ ಮೊದಲ ದಿನ ರಾಜಧಾನಿ ದಿಲ್ಲಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಂಡಿದ್ದ ಸಮ-ಬೆಸ ಸಂಖ್ಯೆ ಆಧಾರದಲ್ಲಿ ವಾಹನಗಳ ಸಂಚಾರ ನಿಯಮ ಯಶಸ್ವಿಯಾಗುವ ಹಾದಿಯಲ್ಲಿದೆ. ಈ ನಿಯಮ ಉಲ್ಲಂಘಿಸಿದವರಿಂದ ಸಂಗ್ರಹಿಸಲಾಗುತ್ತಿರುವ ದಂಡ 1 ಕೋಟಿ ರೂ. ದಾಟುವ ನಿರೀಕ್ಷೆ ಇದೆ.
ಕಳೆದ ಐದು ದಿನಗಳಲ್ಲಿ 1.938 ವಾಹನ ಚಾಲಕರು ಈ ನಿಯವನ್ನು ಉಲ್ಲಂಘಿಸಿದ್ದಾರೆ. ಅವರಿಂದ ತಲಾ 2 ಸಾವಿರ ರೂ.ಗಳಂತೆ ಈ ವರೆಗೆ 38 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.
ಮಂಗಳವಾರ ಪೊಲೀಸರು 114 ಚಾಲಕರಿಗೆ ದಂಡ ವಿಧಿಸಿದ್ದಾರೆ. 2.6 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಸಾರಿಗೆ ಇಲಾಖೆ 71 ಚಾಲಕರಿಗೆ ಮತ್ತು ಕಂದಾಯ ಇಲಾಖೆ 557 ಚಾಲಕರಿಗೆ ದಂಡ ವಿಧಿಸಿದೆ ಎಂದು ವಿಶೇಷ ಪೊಲೀಸ್ ಆಯುಕ್ತ(ಟ್ರಾಫಿಕ್) ಮುಕ್ತೇಶ್ ಚಂದೆರ್ ತಿಳಿಸಿದ್ದಾರೆ.
Next Story





