Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 22ರ ಹರೆಯದ ವಿದ್ಯಾರ್ಥಿ ಕಿಡ್ನಿ ಮಾರಾಟ...

22ರ ಹರೆಯದ ವಿದ್ಯಾರ್ಥಿ ಕಿಡ್ನಿ ಮಾರಾಟ ಮಾಫಿಯಾದ ಕಿಂಗ್ ಪಿನ್‌ !

ವಾರ್ತಾಭಾರತಿವಾರ್ತಾಭಾರತಿ7 Jan 2016 2:46 PM IST
share
22ರ ಹರೆಯದ ವಿದ್ಯಾರ್ಥಿ ಕಿಡ್ನಿ ಮಾರಾಟ ಮಾಫಿಯಾದ ಕಿಂಗ್ ಪಿನ್‌ !


ಹೈದರಾಬಾದ್‌, ಜ.7: ಹೋಟೆಲ್‌ ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿ ಹೈದರಾಬಾದ್‌ನ ಕಸ್ಪರಾಜು ಸುರೇಶ್‌ ಎಂಬಾತನನ್ನು  ಬಂಧಿಸುವ ಮೂಲಕ ನಲಗುಂದ ಪೊಲೀಸರು ಶ್ರೀಲಂಕಾದ ಕೊಲಂಬೊವನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯಾಚರಿಸುತ್ತಿರುವ ಅಂತಾರಾಷ್ಟ್ರೀಯ ಕಿಡ್ನಿ ಮಾರಾಟ ಜಾಲವನ್ನು ಭೇದಿಸಿದ್ದಾರೆ.
22ರ ಹರೆಯದ ಸುರೇಶ ಮೊದಲು ತನ್ನ ಒಂದು ಕಿಡ್ನಿ ಮಾರಿದ್ದನು.  ಬಳಿಕ ಹದಿನೈದು ಮಂದಿಯನ್ನು ಈ ದಂದೆಗೆ ತಳ್ಳಿದ್ದ. ಕಿಡ್ನಿ ಮಾರಾಟ ಮಾಫಿಯಾದ ಏಜೆಂಟ್‌ ಆಗಿ ಬೆಳೆದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇವನ ಮಾತಿಗೆ ಮರುಳಾಗಿ ಕಿಡ್ನಿ ಮಾರಾಟಗೈದ ಮೂವರು ಯುವ ಕಿಡ್ನಿ ದಾನಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್‌ ಹಫೀಝ್ ಅಲಿಯಾಸ್‌ ಕಾಸೀಮ್‌, ಮಹೇಶ್‌ ಮತ್ತು ನರೇಶ್‌ ಎಂಬವರೇ ಸುರೇಶ್ನ ಮಾತಿಗೆ ಮಾರುಳಾಗಿ  ಕಿಡ್ನಿ ಮಾರಾಟ ಮಾಡಿ ನಲಗುಂದ ಪೊಲೀಸರು ಕೈಗೆ ಸಿಕ್ಕಿ ಬಿದ್ದವರು.
ಸುರೇಶ್‌ 2014ರ ನವೆಂಬರ‍್ನಲ್ಲಿ ವೆಬ್‌ಸೈಟ್‌ನಲ್ಲಿ  ದೊರೆತ ಮಾಹಿತಿಯಂತೆ ಕಿಡ್ನಿ ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದನು.ಈ ಉದ್ದೇಸಕ್ಕಾಗಿ ಏಜೆಂಟ್‌ ಒಬ್ಬನನ್ನು ಸಂಪರ್ಕಿಸಿದ್ದನು ಬಳಿಕ ಅವನಿಗೆ ಕೊಲಂಬೊಕ್ಕೆ ತೆರಳಲು ಏಜೆಂಟ್ ಒಬ್ಬನು ಪಾಸ್‌ಪೋರ್ಟ್‌, ವೀಸಾ ವ್ಯವಸ್ಥೆ ಮಾಡಿಕೊಟ್ಟಿದ್ದನು. ಕೊಲಂಬೊ ತೆರಳಿದ ಸುರೇಶ್ 5ಲಕ್ಷ ರೂ.ಗೆ ತನ್ನ ಒಂದು ಕಿಡ್ನಿಯನ್ನು ಮಾರಾಟ ಮಾಡಿದ್ದನು. ಕೊಲಂಬೊದಲ್ಲಿ ನಾಲ್ಕು ತಿಂಗಳ ವಿಶ್ರಾಂತಿ ಬಳಿಕ ಆತ ಭಾರತಕ್ಕೆ ವಾಪಸಾಗಿದ್ದನು.
ಕೂಲಿಕಾರ್ಮಿಕನ ಮಗನಾದ ಸುರೇಶ ಭಾರತಕ್ಕೆ ಬಂದೊಡನೆ ಕಾರು ಮತ್ತು ಬೈಕ್‌ ಖರೀದಿಸಿದ್ದನು. ಕಿಡ್ನಿ ಮಾರಾಟದ ಏಜೆಂಟ್‌ ಆಗಿ ಬದಲಾದ ಸುರೇಶ್‌ ಬಳಿಕ 20ಮಂದಿಯನ್ನು ತನ್ನ ಬಲೆಗೆ ಬೀಳಿಸಿದ್ದನು. ಅವರನ್ನು ಪರೀಕ್ಷೆಗಾಗಿ ಗುಜರಾತ್‌ ಮತ್ತು ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿದ್ದನು. ಏಜೆಂಟ್‌ಗಳಾಧ ಭೂಪಾಲದ ಅಂಬರೀಶ್‌, ಅಹ್ಮದಾಬಾದ್‌ನ ಪ್ರತಾಪ್‌ನ ಸಹಕಾರ ಪಡೆದಿದ್ದನು. ಸಾಮಾಜಿಕ ಮಾಧ್ಯಮ ಮತ್ತು ವಾಟ್ಸ್‌ಆಪ್‌  ಮೂಲಕ ಸುರೇಶ್‌ ತನ್ನ ವ್ಯವಹಾರವನ್ನು ಕುದುರಿಸುತ್ತಿದನು ಎಂದು  ಪೊಲೀಸರು ತಿಳಿಸಿದ್ದಾರೆ.
ಸುರೇಶ್‌ನ ಮಾತಿಗೆ ಮರುಳಾಗಿ ಕಿಡ್ನಿ ಮಾರಿದ ಅಬ್ದುಲ್ ಹಫೀಝ್‌ನ ಜೀವನಶೈಲಿ ಒಮ್ಮೆಲೆ ಬದಲಾಗಿತ್ತು.  ಕೆಲಸ ಕಳೆದುಕೊಂಡಿದ್ದರೂ,   ಕಾರು ಖರೀದಿಸಿದ್ದ. ಬದಲಾದ ಶೈಲಿಯನ್ನು ನೋಡಿ ಮನೆಮಂದಿ ಈತನನ್ನು ಪ್ರಶ್ನಿಸಿದಾಗ ತಾನು ಒಂದು ಕಿಡ್ನಿಯನ್ನು ಸುರೇಶನಿಗೆ  ಮಾರಾಟ ಮಾಡಿರುವುದನ್ನು ಒಪ್ಪಿಕೊಂಡನು. ಇದರಿಂದ ಬೆಚ್ಚಿಬಿದ್ದ ಹಫೀಝ್‌ನ  ಮನೆ ಮಂದಿ ಪೊಲೀಸರಿಗೆ ದೂರು ನೀಡಿದರು.
ಸುರೇಶ್‌ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಇಡಿ ಪ್ರಕರಣ ಬೆಳಕಿಗೆ ಬಂತು. ಕಳೆದ ಒಂದು ವರ್ಷದಲ್ಲಿ 15 ಮಂದಿ ತನ್ನ ಮೂಲಕ ಮಾರಾಟ ಮಾಡಿರುವುದನ್ನು ಪೊಲೀಸರಿಗೆ ಮಾಹಿತಿ ನೀಡಿದ. ನಲಗುಂದ,  ಹೈದರಾಬಾದ್‌  ಮತ್ತು ಬೆಂಗಳೂರಿನ ತಲಾ 4 ಮಂದಿ, ತಮಿಳುನಾಡು , ಮುಂಬೈ ಮತ್ತು ದಿಲ್ಲಿಯ ತಲಾ ಒಬ್ಬ ದಾನಿ ಈಗಾಗಲೇ ಕಿಡ್ನಿ ಮಾರಾಟ ಮಾಡಿದ್ದಾರೆ.ಇವರೆಲ್ಲರೂ ಕೊಲಂಬೊದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆರಂದು  ವಿಚಾರಣೆಯ ವೇಳೆ ಸುರೇಶ ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಿಡ್ನಿ ಕಸಿ ಮಾಡಿಸಿಕೊಳ್ಳುವವರು ಒಂದು ಕಿಡ್ನಿಯೊಂದಕ್ಕೆ  ಆಸ್ಪತ್ರೆಗೆ 27 ಲಕ್ಷ ರೂ. ಪಾವತಿಸಬೇಕಾಗಿದೆ. ಈ ಪೈಕಿ ಅರ್ಧದಷ್ಟು ಹಣವನ್ನು ಆಸ್ಪತ್ರೆ ಇಟ್ಟುಕೊಂಡರೆ, ಉಳಿದ ಹಣವನ್ನು ದಾನಿಗಳಿಗೆ  ಟೆಸ್ಟ್, ವಾಸ್ತವ್ಯ, ಪ್ರಯಾಣ ಮತ್ತಿತರ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಕಿಡ್ನಿ ದಾನಿಗೆ 5 ಲಕ್ಷ ರೂ ಮತ್ತು ಏಜೆಂಟ್‌ಗೆ 50 ಸಾವಿರ ರೂ.ಕಿಸೆಗೆ ಬೀಳುತ್ತದೆ.ಎಂದು  ನಲಗೊಂಡ ಎಸ್‌ಪಿ  ವಿಕ್ರಂ ಜೀತ್‌ ದುಗ್ಗಲ್‌ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X