ಇನ್ಕ್ರೆಡಿಬಲ್ ಇಂಡಿಯಾ" ಗೆ ಅಮಿತಾಭ್ ರಾಯಭಾರಿ

ಹೊಸದಿಲ್ಲಿ, ಜ.7: ಭಾರತ ಸರಕಾರದ ಪ್ರವಾಸೋದ್ಯಮ ಇಲಾಖೆಯ "ಇನ್ಕ್ರೆಡಿಬಲ್ ಇಂಡಿಯಾ" ಪ್ರಚಾರ ಅಭಿಯಾನಕ್ಕೆ ಖ್ಯಾತ ನಟ ಆಮೀರ್ ಖಾನ್ ರನ್ನು ಕೈ ಬಿಟ್ಟ ಮೇಲೆ ಇದೀಗ ಆ ಸ್ಥಾನಕ್ಕೆ ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಆಯ್ಕೆಯಾಗಿದ್ದಾರೆ ಎಂದು ಸರಕಾರೀ ಮೂಲಗಳು ತಿಳಿಸಿವೆ.
ಪ್ರವಾಸೋದ್ಯಮ ಇಲಾಖೆಯ ಮೂಲಗಳ ಪ್ರಕಾರ ಅಮಿತಾಭ್ ಅವರನ್ನು ಮುಂದಿನ ಪ್ರಚಾರ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಆಮೀರ್ ಖಾನ್ ಈಗಾಗಲೇ ಸರಕಾರದ ಯಾವುದೇ ನಿರ್ಧಾರವನ್ನು ತಾನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ.
ದೇಶಕ್ಕಾಗಿ ಹಾಗು ಸಾಮಾಜಿಕ ವಿಷಯಗಳಿಗಾಗಿ ತಾನು ಯಾವುದೇ ಸೇವೆ ಸಲ್ಲಿಸಲು ಸಿದ್ಧ ಎಂದು ಅಮಿತಾಭ್ ಕೂಡ ಇತ್ತೀಚಿಗೆ ಹೇಳಿರುವುದು ಗಮನಾರ್ಹ. ಬಚ್ಚನ್ ಈಗಾಗಲೇ ಗುಜರಾತ್ ಸರಕಾರದ ಪ್ರವಾಸೋದ್ಯಮ ರಾಯಭಾರಿಯಾಗಿದ್ದಾರೆ.
Next Story





