ಟೆಸ್ಟ್‌ನಲ್ಲಿ ವಿಂಡೀಸ್ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ;

ಸಿಡ್ನಿ, ಜ.7: ಇಲ್ಲಿ ನಡೆದ ಆಸ್ಟ್ರೇಲಿಯ ಮತ್ತು ವೆಸ್ಟ್‌ಇಂಡೀಸ್ ತಂಡಗಳ ನಡುವಿನ ಮೂರನೆ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿದೆ.
ಟೆಸ್ಟ್‌ನ ಐದನೆ ಹಾಗೂ ಅಂತಿಮ ದಿನವಾಗಿರುವ ಇಂದು ಆಸ್ಟ್ರೇಲಿಯದ ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ ಏಕದಿನ ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿ ಔಟಾಗದೆ ಸ್ಫೋಟಕ 122 ರನ್ ಗಳಿಸಿದರು.
ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 38 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 176 ರನ್ ಗಳಿಸುವಷ್ಟರಲ್ಲಿ ಪಂದ್ಯವನ್ನು ಡ್ರಾಗೊಳಿಸುವ ನಿರ್ಧಾರಕ್ಕೆ ಬರಲಾಯಿತು.
ಡೇವಿಡ್ ವಾರ್ನರ್ ಮತ್ತು ಬರ್ನ್ಸ್ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್‌ಗೆ 16 ಓವರ್‌ಗಳಲ್ಲಿ 100 ದಾಖಲಿಸಿದ್ದರು. 73 ನಿಮಿಷಗಳ ಬ್ಯಾಟಿಂಗ್‌ನಲ್ಲಿ ಬರ್ನ್ಸ್ 26 ರನ್(41 ಎ,4ಬೌ) ಗಳಿಸಿದರು. ಎರಡನೆ ವಿಕೆಟ್‌ಗೆ ಮಾರ್ಷ್ ಮತ್ತು ವಾರ್ನರ್ 54 ರನ್ ಜಮೆ ಮಾಡಿದರು. ಮಾರ್ಷ್ 21 ರನ್ ಗಳಿಸಿ ನಿರ್ಗಮಿಸಿದರು. ವಾರ್ನರ್ 150 ನಿಮಿಷಗಳ ಬ್ಯಾಟಿಂಗ್‌ನಲ್ಲಿ 103 ಎಸೆತಗಳನ್ನು ಎದುರಿಸಿದರು. 11 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 122 ರನ್ ಸೇರಿಸಿದರು.ಇದು ಅವರ 16ನೆ ಟೆಸ್ಟ್ ಶತಕ. 82 ಎಸೆತಗಳಲ್ಲಿ ಶತಕ ದಾಖಲಿಸಿದ ವಾರ್ನರ್2003ರಲ್ಲಿ ಮ್ಯಾಥ್ಯೂ ಹೇಡನ್ ಝಿಂಬಾಬ್ವೆ ವಿರುದ್ಧ 84 ಎಸೆತಗಳಲ್ಲಿ ಶತಕ ದಾಖಲಿಸಿದ್ದರು. ಈ ದಾಖಲೆಯನ್ನು ಮುರಿದರು.
ಅಂತಿಮ ಟೆಸ್ಟ್‌ನ ಮೂರು ಮತ್ತು ನಾಲ್ಕನೆ ದಿನದ ಆಟ ಮಳೆಯಿಂದಾಗಿ ರದ್ದಾಗಿತ್ತು. ಎರಡನೆ ದಿನದ ಅಂತ್ಯಕ್ಕೆ 86.2 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 248 ರನ್ ಮಾಡಿದ್ದ ವೆಸ್ಟ್‌ಇಂಡಿಸ್ ತಂಡ ಅಂತಿಮ ದಿನ ಆಟ ಮುಂದುವರಿಸಿ 330 ರನ್ ಗಳಿಸುವಷ್ಟರಲ್ಲಿ ಆಲೌಟಾಯಿತು. ರಾಮ್‌ದಿನ್ 62 ರನ್ ಮತ್ತು ಬ್ರಾತ್‌ವೇಟ್ 69 ರನ್ ಗಳಿಸಿ ಔಟಾದರು.
ಸಂಕ್ಷಿಪ್ತ ಸ್ಕೋರ್ ವಿವರ
ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ 112.1 ಓವರ್‌ಗಳಲ್ಲಿ 330 (ಕ್ರೆಗ್ ಬ್ರಾತ್‌ವೇಟ್ 85,ಬ್ಲಾಕ್‌ವುಡ್ 62, ಕಾರ್ಲೊಸ್ ಬ್ರಾತ್‌ವೇಟ್ 69; ’ಕೇಫೆ 3-63, ಲಿನ್ 3-120).
ಆಸ್ಟ್ರೇಲಿಯ ಮೊದಲ ಇನಿಂಗ್ಸ್ 38 ಓವರ್‌ಗಳಲ್ಲಿ 176/2(ವಾರ್ನರ್ ಔಟಾಗದೆ 122, ಬರ್ನ್ಸ್ 26; ವಾರ್ರಿಕ್ಯಾನ್ 2-62).
ಪಂದ್ಯಶ್ರೇಷ್ಠ: ಡೇವಿಡ್ ವಾರ್ನರ್(ಆಸ್ಟ್ರೇಲಿಯ).
ಸರಣಿಶ್ರೇಷ್ಠ: ಎ.ಸಿ. ವೋಗ್ಸ್(ಆಸ್ಟ್ರೇಲಿಯ).
,,,,,,,,,,,,





