ಎಚ್‌ಐಎಲ್: ರಾಂಚಿಯಲ್ಲಿ ಸೆಮಿಫೈನಲ್, ಫೈನಲ್ ಪಂದ್ಯ
ಹೊಸದಿಲ್ಲಿ, ಜ.7: ಹಾಲಿ ಚಾಂಪಿಯನ್ ರಾಂಚಿ ರೇಸ್ ತಂಡವು ನಾಲ್ಕನೆ ಆವೃತ್ತಿಯ ಕೋಲ್ ಇಂಡಿಯಾ ಹಾಕಿ ಇಂಡಿಯಾ ಲೀಗ್‌ನ(ಎಚ್‌ಐಎಲ್) ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದ ಆತಿಥ್ಯವನ್ನು ವಹಿಸಿಕೊಳ್ಳಲಿದೆ.
ಎಚ್‌ಐಎಲ್‌ನ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಬಿರ್ಸಾ ಮುಂಡಾ ಹಾಕಿ ಸ್ಟೇಡಿಯಂನಲ್ಲಿ ಫೆ.20 ಹಾಗೂ 21 ರಂದು ನಡೆಯಲಿದೆ.
ಹಾಕಿ ಇಂಡಿಯಾದ ಆಶ್ರಯದಲ್ಲಿ ನಡೆಯುತ್ತಿರುವ ಎಚ್‌ಐಎಲ್ ಟೂರ್ನಿಯು ಜ.18 ರಿಂದ ದೇಶದ ಆರು ವಿವಿಧ ನಗರಗಳಲ್ಲಿ ನಡೆಯಲಿದೆ. ವಿಶ್ವದ ಅತ್ಯಂತ ಶ್ರೀಮಂತ ಹಾಕಿ ಲೀಗ್‌ನಲ್ಲಿ ಆರು ಫ್ರಾಂಚೈಸಿಗಳಾದ ಜೇಪಿ ಪಂಜಾಬ್ ವಾರಿಯರ್ಸ್, ಡೆಲ್ಲಿ ವಾರಿಯರ್ಸ್, ಕಳಿಂಗ ಲ್ಯಾನ್ಸರ್, ಉತ್ತರ ಪ್ರದೇಶ ವಿಝಾರ್ಡ್ಸ್, ದಬಾಂಬ್ ಮುಂಬೈ ಹಾಗೂ ಚಾಂಪಿಯನ್ ರಾಂಚಿ ರೇಸ್ ತಂಡಗಳು ಭಾಗವಹಿಸುತ್ತವೆ. ರಾಂಚಿ ತಂಡಕ್ಕೆ ಭಾರತದ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ ಸಹ ಮಾಲಕರಾಗಿದ್ದಾರೆ.
ಟೂರ್ನಿಯ ಉದ್ಘಾಟನಾ ಪಂದ್ಯ ಕಳಿಂಗ ಲ್ಯಾನ್ಸರ್ಸ್ ಹಾಗೂ ಉತ್ತರ ಪ್ರದೇಶ ವಿಝಾರ್ಡ್ಸ್ ನಡುವೆ ಭುವನೇಶ್ವರದಲ್ಲಿ ನಡೆಯಲಿದೆ. ಚಾಂಪಿಯನ್ ರಾಂಚಿ ತಂಡ ಕಳೆದ ವರ್ಷದ ರನ್ನರ್ಸ್-ಅಪ್ ಜೇಪಿ ಪಂಜಾಬ್ ವಾರಿಯರ್ಸ್ ತಂಡವನ್ನು ಜ.19 ರಂದು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸುವುದು.





