ಫಿಫಾ ರ್ಯಾಂಕಿಂಗ್: ಭಾರತಕ್ಕೆ ಭಡ್ತಿ
ಹೊಸದಿಲ್ಲಿ, ಜ.7: ಭಾರತೀಯ ಫುಟ್ಬಾಲ್ ತಂಡ ಗುರುವಾರ ಬಿಡುಗಡೆಯಾಗಿರುವ ಫಿಫಾ ರ್ಯಾಂಕಿಂಗ್‌ನಲ್ಲಿ ಮೂರು ಸ್ಥಾನ ಭಡ್ತಿ ಪಡೆದು 163ನೆ ಸ್ಥಾನಕ್ಕೇರಿದೆ.
ಭಾರತ ಜ.3 ರಂದು ತಿರುವನಂತಪುರದಲ್ಲಿ ನಡೆದ ಸ್ಯಾಫ್ ಕಪ್ ಫೈನಲ್‌ನಲ್ಲಿ ಮಾಲ್ಡೀವ್ಸ್ ತಂಡವನ್ನು 3-2 ಗೋಲುಗಳ ಅಂತರದಿಂದ ಮಣಿಸಿ ಏಳನೆ ಬಾರಿ ಪ್ರಶಸ್ತಿ ಜಯಿಸಿತ್ತು. ಈ ಹಿನ್ನೆಲೆಯಲ್ಲಿ ರ್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದಿದೆ. ಕಳೆದ ತಿಂಗಳು ಏಳು ಅಂಕ ಸಹಿತ ಒಟ್ಟು 139 ಅಂಕ ಗಳಿಸಿರುವ ಭಾರತ ಏಷ್ಯಾ ದೇಶಗಳಲ್ಲಿ 31ನೆ ಸ್ಥಾನ ಪಡೆದುಕೊಂಡಿದೆ.
ಫಿಫಾ ರ್ಯಾಂಕಿಂಗ್‌ನಲ್ಲಿ ಬೆಲ್ಜಿಯಂ ನಂ.1 ಸ್ಥಾನದಲ್ಲಿದೆ. ಅರ್ಜೆಂಟೀನ, ಸ್ಪೇನ್, ಜರ್ಮನಿ, ಚಿಲಿ ಹಾಗೂ ಬ್ರೆಝಿಲ್ ಅಗ್ರ ಐದರಲ್ಲಿ ಸ್ಥಾನ ಪಡೆದಿವೆ.
Next Story





