ಪ್ರಿಯಾಂಕಾ ಚೋಪ್ರಾಗೆ ಪೀಪಲ್ಸ್ ಚಾಯ್ಸ್ ಅವಾರ್ಡ್
ಲಾಸ್ ಏಂಜಲೀಸ್, ಜ.7: ಬಾಲಿವುಡ್‌ನ ನಟಿ ಹಾಗೂ ವಿಶ್ವಸುಂದರಿ ಪ್ರಿಯಾಂಕಾ ಚೋಪ್ರಾ ಅಮೆರಿಕನ್ ಧಾರಾವಾಹಿ ‘ಕ್ವಾಂಟಿಕೊ’ದಲ್ಲಿ ನೀಡಿರುವ ಉತ್ತಮ ನಟನೆಗಾಗಿ ‘ಪೀಪಲ್ಸ್ ಚಾಯ್ಸ್ ಅವಾರ್ಡ್-2016’ ಪ್ರಶಸ್ತಿಯನ್ನು ಗಳಿಸಿದ್ದಾರೆ.
ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
‘ಕ್ವಾಂಟಿಕೊ’ದಲ್ಲಿ ಚೋಪ್ರಾ ಅವರು 33 ವರ್ಷದ ನಟಿ ಅಲೆಕ್ಸ್ ಪ್ಯಾರಿಶ್ ಹೆಸರಿನ ಎಫ್‌ಬಿಐ ಏಜೆಂಟ್ ಪಾತ್ರವನ್ನು ನಿರ್ವಹಿಸಿದ್ದರು. ಇತರ ನಟಿಯರಾದ ಎಮ್ಮಾ ರಾಬರ್ಟ್ಸ್, ಜೆಮಿ ಲೀ ಕರ್ಟಿಸ್, ಲಿಯಾ ಮೈಕೆಲ್ ಹಾಗೂ ಮರ್ಸಿಕಾ ಗೇ ಹಾರ್ಡನ್‌ರನ್ನು ಹಿಂದಿಕ್ಕಿ ಚೋಪ್ರಾ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Next Story