ಇಂದಿನ ಕಾರ್ಯಕ್ರಮ
ಜನಸಂಪರ್ಕ ಸಭೆ: ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾದ ಉಡುಪಿ ತಾಲೂಕು ಮಟ್ಟದ ಜನಸಂರ್ಪಕ ಸಭೆ ಉದ್ಘಾಟನೆ ಸಚಿವ ವಿನಯ ಕುಮಾರ್ ಸೊರಕೆ. ಸಮಯ: ಪೂರ್ವಾಹ್ನ 11ರಿಂದ. ಸ್ಥಳ: ಪುರಭವನ, ಅಜ್ಜರಕಾಡು ಉಡುಪಿ.
ಪೇಜಾವರ ಪರ್ಯಾಯ:
ಉಡುಪಿ ಬ್ರಾಹ್ಮಣ ವಲಯ, ಯುವ ಬ್ರಾಹ್ಮಣ ಪರಿಷತ್, ತುಶಿಮಾಮ, ಹವ್ಯಕ ಬ್ರಾಹ್ಮಣ ಸಭಾದಿಂದ ಜೋಡುಕಟ್ಟೆಯಿಂದ ಹೊರೆಕಾಣಿಕೆ ಮೆರವಣಿಗೆ. ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ ನೃತ್ಯನಿಕೇತನ ಕೊಡವೂರುರಿಂದ ಭರತನಾಟ್ಯ ಸಂಜೆ 5:30ಕ್ಕೆ. ಯಕ್ಷಗಾನ ‘ಶ್ರೀಕೃಷ್ಣ ಸಂಧಾನ’. ಸಮಯ: ರಾತ್ರಿ 7ಕ್ಕೆ. ಜಿಲ್ಲಾ ನಾಟಕೋತ್ಸವ:
ಜಿಲ್ಲಾ ನಾಟಕೋತ್ಸವದ ಸಮಾರೋಪ, ರಂಗಕರ್ಮಿಗಳಿಗೆ ಸನ್ಮಾನ ಬಳಿಕ ಬೆಂಗಳೂರಿನ ‘ಅನೇಕ’ದಿಂದ ಕನ್ನಡ ಸಂಗೀತ ನಾಟಕ ‘ಆಗಮನ’. ಸಮಯ: ಸಂಜೆ 5:45ರಿಂದ. ಸ್ಥಳ: ಎಂಜಿಎಂ ಕಾಲೇಜಿನ ಮುದ್ದಣ ಮಂಟಪ, ಉಡುಪಿ. ಉಚಿತ ದಂತ ತಪಾಸಣಾ ಶಿಬಿರ:
ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಸ್ತೂರ್ಬಾ ದಂತ ವೈದ್ಯಕೀಯ ಮಹಾವಿದ್ಯಾಲಯ ಮಣಿಪಾಲಗಳ ಜಂಟಿ ಆಶ್ರಯದಲ್ಲಿ ಉಚಿತ ದಂತ ತಪಾಸಣಾ ಶಿಬಿರ. ಸಮಯ: ಬೆಳಗ್ಗೆ 10ರಿಂದ ಸಂಜೆ 5ರವರೆಗೆ. ಸ್ಥಳ: ಜಿಲ್ಲಾ ಆಸ್ಪತ್ರೆ ಆವರಣ, ಅಜ್ಜರಕಾಡು ಉಡುಪಿ. ಯುವಜನ ಸಮ್ಮೇಳನ: ಐಸಿವೈಎಂ ವತಿಯಿಂದ ‘ನಿಮ್ಮ ಜ್ಯೋತಿ ಜನರ ಮುಂದೆ ಬೆಳಗಲಿ’ ಎಂಬ ವಿಷಯದ ಕುರಿತು ಉಡುಪಿ ಧರ್ಮಕ್ಷೇತ್ರ ಮಟ್ಟದ ಯುವಜನ ಸಮ್ಮೇಳನ ಉದ್ಘಾಟನೆ. ಸಮಯ: ಸಂಜೆ 6:30ಕ್ಕೆ. ಸ್ಥಳ: ಟ್ರಿನಿಟಿ ಕೇಂದ್ರೀಯ ಶಿಕ್ಷಣ ಸಂಸ್ಥೆ, ಪೆರಂಪಳ್ಳಿ ಉಡುಪಿ.
ಕೃಷ್ಣ ಮಠ: ಉಡುಪಿ ಶ್ರೀಕೃಷ್ಣ ಮಠ ರಥಬೀದಿಯಲ್ಲಿ ಬೆಳಗ್ಗೆ 8:30ಕ್ಕೆ ಶ್ರೀನ್ಯಾಯಸುಧಾ ಗ್ರಂಥಗಳ ಮೆರವಣಿಗೆ, 9ರಿಂದ ರಾಜಾಂಗಣದಲ್ಲಿ ಮಂಗಳ ಮಹೋತ್ಸವ, ಸಂಜೆ 4:30ರಿಂದ ರಾಜಾಂಗಣದಲ್ಲಿ ಪಾದಿರಾಜ ಕೃತಿಗಳ ಉಪನ್ಯಾಸ ಮಂಗಳ, 5:00ಕ್ಕೆ ಮಧ್ವಮಂಟಪದಲ್ಲಿ ಭಕ್ತಿ ಸಂಗೀತ, 5:30ರಿಂದ ರಾಜಾಂಗಣದಲ್ಲಿ ಮಂಗಳ ಮಹೋತ್ಸವದ ಸಮಾರೋಪ, 7:30ರಿಂದ ರಾಜಾಂಗಣದಲ್ಲಿ ಚೆನ್ನೈನ ಕಲೈಮಾಮಣಿ ರಾಜೇಶ್ ಮತ್ತು ಬಳಗದಿಂದ ಮ್ಯಾಂಡೋಲಿನ್ ವಾದನ ಕಚೇರಿ, 7:15ಕ್ಕೆ ಸುವರ್ಣ ರಥೋತ್ಸವ.





