ನೇಜಾರು: ಇಂದಿನಿಂದ ಸ್ವಲಾತ್ ವಾರ್ಷಿಕ
ಉಡುಪಿ, ಜ.7: ನೇಜಾರಿನ ಜಾಮಿಯಾ ಮಸೀದಿಯಲ್ಲಿ ಮೀಲಾದ್ ಪ್ರಯುಕ್ತ ಜ.8ರಂದು ರಿಫಾಯಿಯ ದಫ್ ರಾತೀಬ್, ಸ್ವಲಾತ್ ಹಾಗೂ ಅನುಸ್ಮರಣಾ ಮಜ್ಲಿಸ್ ಹಾಗೂ ಜ.9ರಂದು ಮುನೀರುಲ್ ಇಸ್ಲಾಮ್ ಮದ್ರಸ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.
ಜ.10ರಂದು ಮೀಲಾದ್ ಸಂದೇಶ ಜಾಥಾ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿಯ ಅಧ್ಯಕ್ಷ ಪಿ.ಅಬೂಬಕರ್ ನೇಜಾರು ವಹಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story





