ಇಂದಿನಿಂದ ಮೀಲಾದ್ ಕಾರ್ಯಕ್ರಮ
ಮಂಗಳೂರು, ಜ.7: ಕಾವಳಕಟ್ಟೆ ಬಿಸ್ಮಿಲ್ಲಾ ಜುಮಾ ಮಸೀದಿಯ ಆಶ್ರಯದಲ್ಲಿ ಮೀಲಾದ್ ಕಾರ್ಯಕ್ರಮದ ಅಂಗವಾಗಿ ಜ.8ರಿಂದ 10ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
8ರಂದು ಧಾರ್ಮಿಕ ಉಪನ್ಯಾಸ, 9ರಂದು ಬುರ್ದಾ ಮಜ್ಲಿಸ್, 10ರಂದು ನಡೆಯುವ ಸಮಾರೋಪದಲ್ಲಿ ಸೌಹಾರ್ದ ಸಮಾವೇಶ, ಮದ್‌ಹುರ್ರಸೂಲ್ ಕಾರ್ಯಕ್ರಮ ಜರಗಲಿವೆ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಅಧ್ಯಕ್ಷತೆ ವಹಿಸಲಿದ್ದಾರೆ. ಸೈಯದ್ ಆಲವಿ ತಂಙಳ್ ಭಾಗವಹಿಸ ಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





