ಉಡುಪಿ: ‘ಚಿಣ್ಣರ ಮಾಸೋತ್ಸವ-2015’ ಸಮಾರೋಪ

ಉಡುಪಿ, ಜ.7: ಪರ್ಯಾಯ ಶ್ರೀ ಕಾಣಿಯೂರು ಮಠದ ಆಶ್ರಯದಲ್ಲಿ ನಡೆದ ‘ಚಿಣ್ಣರ ಮಾಸೋತ್ಸವ- 2015’ರ ಸಮಾರೋಪ ಸಮಾರಂಭ ರಾಜಾಂಗಣದಲ್ಲಿ ನೆರವೇರಿತು.
ಡಾ.ಚಂದ್ರಶೇಖರ್, ಅಶೋಕ್ ಮಾಡ, ಶ್ರೀಮಠದ ದಿವಾನ ರಘುಪತಿ ಆಚಾರ್ಯ ಹಾಗೂ ಚಿಣ್ಣರ ಸಂತರ್ಪಣೆ ಕಾರ್ಯದರ್ಶಿ ಶ್ರೀನಿವಾಸ ರಾವ್ ಅತಿಥಿಗಳಾಗಿ ಉಪಸ್ಥಿತರಿದ್ದರು.
ಈ ಸಂದರ್ಭ ಚಿಣ್ಣರ ಸಂತರ್ಪಣೆಯ ಶಾಲೆಯ ಅಧ್ಯಾಪಕ ವರ್ಗವು ಪರ್ಯಾಯ ಶ್ರೀ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರನ್ನು ನಾಣ್ಯಗಳಿಂದ ತುಲಾಭಾರ ನಡೆಸಿತು. ಸ್ಪರ್ಧೆಯಲ್ಲಿ ಕಾರ್ಕಳ ತಾಲೂಕು ಮಾಳದ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ (ಪ್ರಥಮ), ಕುಂದಾಪುರ ಜಪ್ತಿ ಶ್ರೀರಾಮಚಂದ್ರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ (ದ್ವಿತೀಯ), ಕಾಂತಾವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾಂತಾವರ (ತೃತೀಯ) ಹಾಗೂ ಕಾರ್ಕಡ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಡ (ಸಮಾಧಾನಕರ ಬಹುಮಾನ) ಪಡೆದವು.
Next Story





