ಜೋಕಟ್ಟೆ: ಶೌಚಾಲಯ ಉದ್ಘಾಟನೆ

ಮಂಗಳೂರು, ಜ.7: ಜೋಕಟ್ಟೆಯ ಅಂಜುಮಾನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ನೂತನವಾಗಿ ನಿರ್ಮಿಸಿದ ಶೌಚಾಲಯವನ್ನು ಉದ್ಯಮಿ ಹಾಜಿ ಅಬ್ದುಲ್ ರಶೀದ್ ಉದ್ಘಾಟಿಸಿದರು.
ಸಂಸ್ಥೆಯ ಅಧ್ಯಕ್ಷ ಹಾಜಿ ಬಿ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸಂಚಾಲಕ ಹಾಜಿ ಎಂ. ಮೂಸಬ್ಬ ಪ್ರಾಸ್ತಾವಿಕ ಭಾಷಣ ಮಾಡಿದರು. ಸಂಸ್ಥೆಯ ಆಡಳಿತ ಕಮಿಟಿಯ ಪದಾಧಿಕಾರಿಗಳು, ಸದಸ್ಯರು, ಶಾಲಾ ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು, ಗುತ್ತಿಗೆದಾರ ಮೂಸಬ್ಬ ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಶಾಂತಿವಿಜಯಾ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಶುಭಾ ರವೀಂದ್ರ ವಂದಿಸಿದರು. ಶಿಕ್ಷಕಿ ಯಮುನಾ ಕಾರ್ಯಕ್ರಮ ನಿರೂಪಿಸಿದರು.
Next Story





