ರುಡ್‌ಸೆಟ್‌ನಲ್ಲಿ ಉಚಿತ ತರಬೇತಿಗೆ ಅರ್ಜಿ ಆಹ್ವಾನ
ಉಡುಪಿ, ಜ.7: ಬ್ರಹ್ಮಾವರದ ರುಡ್‌ಸೆಟ್ ಸಂಸ್ಥೆ, ಕೇಂದ್ರ ಸರಕಾರದ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯದ ವತಿಯಿಂದ ಅನುಮೋದಿಸಲ್ಪಟ್ಟ ಕಂಪ್ಯೂಟರ್ ಡಿಟಿಪಿ ತರಬೇತಿಯನ್ನು ಜ.25ರಿಂದ ಮಾ.9ರವರೆಗೆ ಮತ್ತು ಗೃಹೋಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ ತರಬೇತಿಯನ್ನು ಜ.28 ರಿಂದ ಫೆ.26ರವರೆಗೆ ಹಾಗೂ ಕೃತಕ ಆಭರಣಗಳ ತಯಾರಿ ತರಬೇತಿಯನ್ನು ಫೆ.18ರಿಂದ 27ರವರೆಗೆ ರುಡ್‌ಸೆಟ್‌ನಲ್ಲಿ ಆಯೋಜಿಸಿದೆ. ತರಬೇತಿಗಳು ಸಂಪೂರ್ಣ ಉಚಿತವಾಗಿದ್ದು, ಉಡುಪಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ 18ರಿಂದ 45 ವರ್ಷ ವಯೋ ಮಿತಿಯೊಳಗಿನ, ಸ್ವಉದ್ಯೋಗ ಮಾಡಲು ಆಸಕ್ತಿ ಹೊಂದಿದವರು ಅರ್ಜಿ ಸಲ್ಲಿಸಬಹುದು. ತರಬೇತಿಯಲ್ಲಿ ಸಂಬಂಧ ಪಟ್ಟ ವಿಷಯದ ಜೊತೆಗೆ ಉದ್ಯಮ ನಿರ್ವಹಣೆ ಹಾಗೂ ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ಮಾಹಿತಿ ನೀಡಲಾಗುವುದು. ಆಸಕ್ತರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ ಅನುಭವಗಳ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಸಂಸ್ಥೆಯ ದೂ.ಸಂ. ಸಂಖ್ಯೆ 0820-2563455, ಮೊಬೈಲ್: 9449862808 ಅಥವಾ ವೆಬ್‌ಸೈಟ್ www.rudsetitraining.orgನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.





