ಮಸ್ಜಿದುಲ್ ತಖ್ವಾದಲ್ಲಿ ಬೃಹತ್ ಮೌಲಿದ್ ಮಜ್ಲಿಸ್

ಮಂಗಳೂರು: ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಪಂಪ್ ವೆಲ್ ಇದರ ಅಧೀನದಲ್ಲಿರುವ ಮಸ್ಜಿದು ತಖ್ವಾ ಇದರ ಆಶ್ರಯದಲ್ಲಿ ಜ.1ರಂದು ರಾತ್ರಿ ಬೃಹತ್ ಮೀಲಾದ್ ಮೌಲೂದ್, ಶೈಖುನಾ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಸಂಯುಕ್ತ ಖಾಝಿ ಉಡುಪಿ ಇವರ ನೇತೃತ್ವದಲ್ಲಿ ನೆರವೇರಿತು.
ಹಾಜಿ ಎಸ್.ಎಂ. ರಶೀದ್ ಮುತವಲ್ಲಿ ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ಲ ಕುಂಞಿ, ಬಿ.ಎಂ. ಮಮ್ತಾಝ್ ಅಲಿ ಕೃಷ್ಣಾಪುರ, ಪ್ರಧಾನ ಕಾರ್ಯದರ್ಶಿ, ಇಸ್ಲಾಮಿಕ್ ಕಲ್ಷರಲ್ ಸೆಂಟರ್ ಪಂಪ್ ವೆಲ್ ಸಂಸ್ಥೆಯ ಟ್ರಸ್ಟಿಗಳಾದ ಹಾಜಿ ಕುಂಞಿ ಅಹ್ಮದ್ ಎಚ್.ಎಚ್. ದೇರಳಕಟ್ಟೆ, ಹಾಜಿ ಮುಹಮ್ಮದ್ ಅರಬಿ, ಹಾಜಿ ಅಬ್ದುಲ್ ಅಝೀಝ್ ಹಸನ್, ಹಾಜಿ ಹಮೀದ್ ಖಂದಕ್, ಅಬೂಸುಫಿಯಾನ್ ಮದನಿ, ಪಿ.ಸಿ.ಎಂ. ಕುಂಞಿ, ಪಿ.ಸಿ. ಆಸೀರ್, ಮುಹಮ್ಮದ್ ಹಾರಿಸ್, ಹೈದರ್ ಪರ್ತಿಪ್ಪಾಡಿ, ಸೌಕತ್ ಅಲಿ, ನಝೀರ್, ಬಿ.ಎಂ. ಬಶೀರ್ ಅಹ್ಮದ್, ಅಬ್ಬಾಸ್ ಮುಸ್ಲಿಯಾರ್ ಅಲ್ ಮದೀನಾ ಮಂಜನಾಡಿ, ಹಾಫಿಲ್ ಅಬ್ದುಲ್ ರಹ್ಮಾನ್ ಸಖಾಫಿ ಇಮಾಂ ಮಸ್ಜಿದುಲ್ ತಖ್ವಾ, ಇಬ್ರಾಹೀಂ ಮುಸ್ಲಿಯಾರ್, ಇಸ್ಮಾಯೀಲ್ ಮುಸ್ಲಿಯಾರ್ ಇಮಾಂ ಕಂಕನಾಡಿ, ಸದಕತುಲ್ಲಾ ನದ್ವಿ ಇಮಾಂ ಈದ್ಗಾ ಮಸೀದಿ, ಅಬ್ದುಲ್ ಕಲಾಂ ಸಖಾಫಿ ಪ್ರಾಂಶುಪಾಲರು ಸೈಯದ್ ಮದನಿ ದಅವಾ ಕಾಲೇಜ್ ಉಳ್ಳಾಲ, ಶಫೀಕ್ ದೇರಳ ಕಟ್ಟೆ ಲೈನ್ ಮಸೀದಿ ಇಮಾಂ, ಹೈದರ್ ಮದನಿ ಅಝ್ ಹರಿಯಾ ಮಂಗಳೂರು, ಕಾರ್ಪರೇಟರ್ ಗಫೂರ್, ರಹ್ಮತುಲ್ಲಾ, ಸಂಸ್ತೆಯ ವ್ಯವಸ್ಥಾಪಕ ಹಾಜಿ ಜಿ.ಎಂ. ಹಸನ್ ಕುಂಞಿ ಹಾಗೂ ತಖ್ವಾ ಇಸ್ಲಾಮಿಕ್ ಸ್ಕೂಲ್ ಪಂಪ್ ವೆಲ್ ಇಲ್ಲಿನ ಉಸ್ತಾದರ್ ಗಳು ಈ ಸಂದರ್ಭ ಉಪಸ್ಥಿತರಿದ್ದರು.





