ಎಸ್‌ಪಿ ಸಲ್ವಿಂದರ್ ಸಿಂಗ್‌ನನ್ನು ಸುಳ್ಳು ಪತ್ತೆ ಪರೀಕ್ಷೆಗೊಳಪಡಿಸಲು ಎನ್‌ಐಎ ಚಿಂತನೆ

ಹೊಸದಿಲ್ಲಿ, ಜ.8: ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಉಗ್ರರ ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುದಾಸ್‌ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಲ್ವಿಂದರ‍್ ಸಿಂಗ್‌ನನ್ನು ಸುಳ್ಳು ಪತ್ತೆ ಪರೀಕ್ಷೆಗೊಳಪಡಿಸಲು ಚಿಂತನೆ ನಡೆಸಿದೆ.
ಸಲ್ವೀಂದರ್ ಸಿಂಗ್ ವಿಚಾರಣೆಯ ವೇಳೆ ಪದೇ ಪದೇ ಹೇಳಿಕೆ ಬದಲಿಸುತ್ತಿರುವ ಹಿನ್ನೆಲೆಯಲ್ಲಿ ಇವರನ್ನು ಉಗ್ರರು ಅಪಹರಣ ಮಾಡಿರುವ ಪ್ರಕರಣದ ಬಗ್ಗೆಯೂ ಎನ್‌ಐಎಗೆ ಅನುಮಾನ ಮೂಡಿದೆ.
ಪಠಾಣ್‌ಕೋಟ್‌ಗೆ ಉಗ್ರರು ದಾಳಿ ಮಾಡುವ ಮೊದಲು ಸಲ್ವಿಂದರ‍್ ಸಿಂಗ್‌ನನ್ನು ಭಾರತ-ಪಾಕ್ ಗಡಿಯಿಂದ ಉಗ್ರರು ಅಪಹರಿಸಿದ್ದರು. ಅವರ ಮೊಬೈಲ್‌ನ್ನು ಕಿತ್ತುಕೊಂಡ ಉಗ್ರರು , ಸಲ್ವಿಂದರ್ ಸಿಂಗ್ ಜೊತೆ ಪ್ರಯಾಣಿಸುತ್ತಿದ್ದ ಇನ್ನಿಬ್ಬರಿಗೆ ಚೆನ್ನಾಗಿ ಥಳಿಸಿದ್ದರು. ಬಳಿಕ ಇವರನ್ನು ವಾಹನದಿಂದ ಕೆಳಗಿಳಿಸಿದ ಉಗ್ರರು ಸಲ್ವಿಂದರ್ ಸಿಂಗ್ ವಾಹನದ ಮೂಲಕವೆ ಪಠಾಣ್‌ಕೋಟ್ ತಲುಪಿದ್ದರು ಎಂದು ಹೇಳಲಾಗಿತ್ತು.
ಪಠಾಣ್‌ಕೋಟ್‌ಗೆ ಉಗ್ರರ ದಾಳಿ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಎನ್‌ಐಎ ಕಲೆ ಹಾಕಿದೆ. ಉಗ್ರರು ದಾಳಿ ಮೊದಲು ಪಾಕ್‌ನ ಸಹಚರರೊಂದಿಗೆ, ತಮ್ಮ ಸಂಬಂಧಿಕರಿಗೆ ಮಾಡಿರುವ ಕರೆಯ ಬಗ್ಗೆ ಎನ್‌ಐಎ ಮಾಹಿತಿ ಕಲೆ ಹಾಕಿದೆ.





