ಕಾರ್ಕಳದಲ್ಲಿ ಸಹಬಾಳ್ವೆಯ ಸಾಗರದ ಸ್ವಾಗತ ಸಮಿತಿಯ ಸಭೆ

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೇಂದ್ರ ಸಮಿತಿಯು ರಾಷ್ಟ್ರದಲ್ಲಿನ ಜಾತ್ಯಾತೀತ -ಧರ್ಮಾತೀತ ಸಹಬಾಳ್ವೆಯ
ಪರಂಪರೆಯನ್ನು ಉಳಿಸಿಬೆಳೆಸುವ ನಿಟ್ಟಿನಲ್ಲಿ ಮತ್ತು ಕರಾವಳಿಯಲ್ಲಿ ಹೆಚ್ಚುತ್ತಿರುವ ಮತೀಯ - ಕೋಮುವಾದಕ್ಕೆ ಹಬಾಳ್ವೆಯ
ಸಂಸ್ಕೃತಿಯೇ ಉತ್ತರ ಎನ್ನುವುದನ್ನು ಸಾರಿ ಹೇಳಲು ಜನವರಿ,೩೦ ರ ಗಾಂಧಿ ಹತ್ಯೆಯ ದಿನ ಮಂಗಳೂರಿನ ಪುರಭವನದಲ್ಲಿ
ಹಮ್ಮಿಕೊಂಡಿರುವ ಸಹಬಾಳ್ವೆಯ ಸಾಗರ ಕಾರ್ಯಕ್ರಮದಲ್ಲಿ ಕರಾವಳಿಯ ಜನರನ್ನು ತೊಡಗಿಸಿಕೊಳ್ಳುವ ಸಲುವಾಗಿ ತಾಲೂಕು ಮಟ್ಟದಲ್ಲಿ ಸ್ವಾಗತ ಸಮಿತಿಯನ್ನು ರಚಿಸಿಕೊಳ್ಳಲು ಈಗಾಗಲೇ ತೀರ್ಮಾನಿಸಿದೆ.
ಅದರ ಮೊದಲ ಭಾಗವಾಗಿ ನಾಳೆ (ಜನವರಿ,9-2016 ಶನಿವಾರ) ಕಾರ್ಕಳದಲ್ಲಿ ಸಹಬಾಳ್ವೆಯ ಸಾಗರದ ಸ್ವಾಗತ ಸಮಿತಿಯ ಸಭೆಯು ಬೆಳಿಗ್ಗೆ ೧೦.೩೦ ಕ್ಕೆ ಕಾರ್ಕಳದ ಅನಂತಶಯನ ರಸ್ತೆಯಲ್ಲಿರುವ ಪ್ರಕಾಶ್ ಹೋಟೆಲ್ ಪಕ್ಕದ ಸುಧೀಂದ್ರ ಕಾಂಪ್ಲೆಕ್ಸಿನ ಒಂದನೇಮ
ಮಹಡಿಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಸ್ವಾಗತ ಸಮಿತಿಯ
ಉಪಾಧ್ಯಕ್ಷ ಶುಭದ ರಾವ್, ಗೌರವ ಸದಸ್ಯರುಗಳಾದ ಪಿ.ವಿ. ಮೋಹನ್,
ರಾಘವೇಂದ್ರ ಕುಕ್ಕಾಜೆ, ಚಂದ್ರಶೇಖರ್ ಹೆಬ್ರಿ, ಅಶ್ಫಾಕ್ ಆಲಿ ಕಾರ್ಕಳ, ರೆ.ಫಾ.ವಿಲಿಯಂ ಮಾರ್ಟೀಸ್ , ಕ.ಕೋ.ಸೌ.ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್, ಕಾರ್ಯದರ್ಶಿ ಡಿ.ಎಸ್.ಬೆಂಗ್ರೆ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.







