ಜ.11-13: ಎಟ್ಟಿಕುಲಂನಲ್ಲಿ ತಾಜುಲ್ ಉಲಮಾ ಉರೂಸ್
ಮಂಗಳೂರು, ಜ.8: ಉಳ್ಳಾಲದ ಸಯ್ಯದ್ ಅರಬಿಕ್ ಕಾಲೇಜು ಹಾಗೂ ಕೇರಳ, ಕರ್ನಾಟಕದ ವಿವಿಧ ಮೊಹಲ್ಲಾಗಳಲ್ಲಿ 65 ವರ್ಷಗಳ ಕಾಲ ಖಾಝಿಯಾಗಿ, ಅಹ್ಲುಸುನ್ನತ್ ವಲ್ ಜಮಾಅತ್‌ಗಾಗಿ ದುಡಿದು ತನ್ನ ಜೀವನವನ್ನೇ ಧರ್ಮಕ್ಕಾಗಿ ಮುಡಿಪಾಗಿಟ್ಟ ತಾಜುಲ್ ಉಲಮಾ ಉಳ್ಳಾಲ ತಂಙಳ್ ಅವರ ಉರೂಸ್ ಸಮಾರಂಭವು ಜನವರಿ 11ರಿಂದ 13ರವರೆಗೆ ಕೇರಳದ ಎಟ್ಟಿಕುಲಂ ನಡೆಯಲಿದೆ ಎಂದು ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಹಾಜಿ ಯು.ಎಸ್.ಹಂಝ ತಿಳಿಸಿದ್ದಾರೆ.
ಇಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.11ರಂದು ಬೆಳಗ್ಗೆ 7 ಗಂಟೆಗೆ ಉಳ್ಳಾಲದಲ್ಲಿ ಸಯ್ಯದ್ ಮದನಿ ತಂಙಳ್‌ರವರ ದರ್ಗಾ ಝಿಯಾರತ್‌ನೊಂದಿಗೆ ಎಟ್ಟಿಕುಲಂ ಉರೂಸ್‌ಗೆ ಚಾಲನೆ ದೊರೆಯಲಿದೆ. ದರ್ಗಾ ಝಿಯಾರತ್‌ನ ನೇತೃತ್ವವನ್ನು ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ವಹಿಸಲಿದ್ದಾರೆ ಎಂದರು.
ಎಟ್ಟಿಕುಲಂನಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಉರೂಸ್ ಸಮಾರಂಭದಲ್ಲಿ ಸಯ್ಯದ್ ಇಬ್ರಾಹೀಂ ಖಲೀಲ್ ತಂಙಳ್ ಕಡಲುಂಡಿ, ಸಯ್ಯದ್ ಅಲಿ ಬಾಫಖಿ ತಂಙಳ್ ಕೊಯ್ಲಾಂಡಿ, ಸಯ್ಯದ್ ಫಝಲ್ ಕೋಯಮ್ಮ ತಂಙಳ್, ಅತಾವುಲ್ಲಾ ತಂಙಳ್ ಉದ್ಯಾವರ, ಸಯ್ಯದ್ ಇಂಬಿಚ್ಚಿಕ್ಕೋಯ ತಂಙಳ್ ಬಾಯಾರ್, ಜಲಾಲುದ್ದೀನ್ ತಂಙಳ್ ಉಜಿರೆ, ಜೆರುಕುಂಜೆ ತಂಙಳ್, ಜಮಾಲುಲೈಲಿ ತಂಙಳ್ ಕಾಜೂರು, ಖಮರುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್, ಇ.ಸುಲೈಮಾನ್ ಉಸ್ತಾದ್, ಬೇಕಲ್ ಉಸ್ತಾದ್, ಅಲಿಕುಂಞಿ ಉಸ್ತಾದ್, ಪೊನ್ಮಲ ಉಸ್ತಾದ್, ಪೇರೋಡ್ ಉಸ್ತಾದ್, ಅಹ್ಮದ್ ಬಾವ ಉಸ್ತಾದ್, ತಾಯಕ್ಕೋಡ್ ಉಸ್ತಾದ್, ಶಾಫಿ ಸಅದಿ, ಹುಸೇನ್ ಸಅದಿ ಕೆ.ಸಿ.ರೋಡ್, ಝೈನಿ ಉಸ್ತಾದ್, ಕರ್ನಾಟಕ ರಾಜ್ಯ ಯೋಜನಾ ಮಂಡಳಿಯ ಅಧ್ಯಕ್ಷ ಸಿ.ಎಂ.ಇಬ್ರಾಹೀಂ, ಸಚಿವ ಯು.ಟಿ.ಖಾದರ್, ಶಾಸಕ ಮೊಯ್ದಿನ್ ಬಾವ, ಯೆನೆಪೋಯ ಅಬ್ದುಲ್ಲಾ ಕುಂಞಿ, ಕಣಚೂರ್ ಮೋನು ಹಾಜಿ, ಮುಮ್ತಾಝ್ ಅಲಿ, ಅಬ್ಬಾಸ್ ಮುಸ್ಲಿಯಾರ್ ಅಲ್ ಮದೀನಾ ಮಂಜನಾಡಿ, ಮಾಣಿ ದಾರುಲ್ ಇರ್ಶಾದ್‌ನ ಅಬ್ದುಲ್ ಹಮೀದ್ ಮುಸ್ಲಿಯಾರ್, ಹೈದರ್ ಪರ್ತಿಪ್ಪಾಡಿ, ಉದ್ಯಮಿ ಮುಹಮ್ಮದ್ ಹಾರಿಸ್, ಗುಲಾಂ ಮುಹಮ್ಮದ್, ಶಾಕಿರ್ ಹಾಜಿ, ಇಬ್ರಾಹೀಂ ಕೋಡಿಜಾಲ್, ಹಮೀದ್ ಕಂದಕ್, ಎಚ್.ಎಚ್.ಉಂಞಿ ಹಾಜಿ, ಎಸ್.ಮುಹಮ್ಮದ್ ಹಾಜಿ ಸಾಗರ, ಬಾವ ಹಾಜಿ ಮಂಗಳೂರು, ಎಸ್.ಕೆ.ಖಾದರ್ ಹಾಜಿ ಮುಡಿಪು ಸಹಿತ ದೇಶ, ವಿದೇಶದಿಂದ ಉಲಮಾ, ಉಮರಾಗಳು, ರಾಜಕೀಯ ನೇತಾರರು, ಕೆ.ಸಿ.ಎಫ್. ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.
ಅಂದು ಬೆಳಗ್ಗೆ 8ಗಂಟೆಗೆ ದ.ಕ. ಜಿಲ್ಲಾ ಸಂಯುಕ್ತ ಜಮಾಅತ್ ವತಿಯಿಂದ ಉಳ್ಳಾಲದಿಂದ ಹೊರೆ ಕಾಣಿಕೆಯ ಮೂಲಕ ಸಂದಲ್ ಮೆರವಣಿಗೆ ಹೊರಡಲಿದೆ ಎಂದು ಯು.ಎಸ್.ಹಂಝ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉರೂಸ್ ಸ್ವಾಗತ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಉದ್ಯಮಿ ಮುಮ್ತಾಝ್ ಅಲಿ, ಎಸ್.ಕೆ.ಖಾದರ್ ಹಾಜಿ ಮುಡಿಪು, ಹೈದರ್ ಪರ್ತಿಪ್ಪಾಡಿ ಉಪಸ್ಥಿತರಿದ್ದರು.







