ಚೀನಾ: ಈ ವರ್ಷ 20 ಉಡಾವಣೆಗಳು
ಬೀಜಿಂಗ್, ಜ. 8: ಚೀನಾ 2016ರಲ್ಲಿ 20ಕ್ಕೂ ಅಧಿಕ ಬಾಹ್ಯಾಕಾಶ ಉಡಾವಣೆಗಳನ್ನು ಕೈಗೆತ್ತಿಕೊಳ್ಳಲಿದೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ. ಇದು ಒಂದು ವರ್ಷದಲ್ಲಿ ಚೀನಾ ನಡೆಸಿಕೊಡಲಿರುವ ಅತ್ಯಂತ ಹೆಚ್ಚು ಬಾಹ್ಯಾಕಾಶ ಯೋಜನೆಗಳಾಗಿವೆ.
ತಿಯಾಂಗಾಂಗ್ 2 ಬಾಹ್ಯಾಕಾಶ ಪ್ರಯೋಗಾಲಯ ಮತ್ತು ಶೆಂಝೂ 11 ಮಾನವ ಸಹಿತ ಬಾಹ್ಯಾಕಾಶ ನೌಕೆಗಳನ್ನು ಹಾರಿಬಿಡುವ ಯೋಜನೆಗಳನ್ನು ತಾನು ಹೊಂದಿರುವುದಾಗಿ ಚೀನಾ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಹೇಳಿದೆ. ಅದೇ ವೇಳೆ, ಅತ್ಯಂತ ಭಾರದ ‘ಲಾಂಗ್ ಮಾರ್ಚ್ 5’ ಮತ್ತು ‘ಲಾಂಗ್ ಮಾರ್ಚ್ 7’ ರಾಕೆಟ್‌ಗಳ ಪರೀಕ್ಷಾ ಹಾರಾಟಗಳನ್ನು ನಡೆಸಲೂ ಅದು ನಿರ್ಧರಿಸಿದೆ.
ಇದೇ ಅವಧಿಯಲ್ಲಿ ಎರಡು ದೇಶೀ ಕಂಪೆನಿಗಳಿಗಾಗಿ ಎರಡು ಉಪಗ್ರಹಗಳನ್ನು ಅದು ಹಾರಿಸಲಿದೆ.
Next Story