ಹೆರಾತ್ ದೂತಾವಾಸ ಬಳಿ ಸ್ಫೋಟಕ ವಾಹನ ಪತ್ತೆ
ಕಾಬೂಲ್, ಜ.8: ಸ್ಫೋಟಕಗಳನ್ನು ಸಾಗಿಸುತ್ತಿದ್ದ ವಾಹನವೊಂದು ಅಫ್ಘಾನಿಸ್ತಾನದ ಹೆರಾತ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಕಚೇರಿಯ ಸಮೀಪ ಶುಕ್ರವಾರ ಪತ್ತೆಯಾಗಿದೆ ಎಂದು ಅಫ್ಘಾನಿಸ್ತಾನಕ್ಕೆ ಭಾರತದ ರಾಯಭಾರಿ ಅಮರ್ ಸಿನ್ಹಾ ಹೇಳಿದ್ದಾರೆ.
ಭಾರತೀಯ ದೂತಾವಾಸವನ್ನು ಗುರಿಯಾಗಿಸಿ ಸ್ಫೋಟಕ ತುಂಬಿದ ವಾಹನವನ್ನು ಕಳುಹಿಸಲಾಗಿತ್ತೆ ಎನ್ನುವುದು ಖಾತ್ರಿಯಾಗಿಲ್ಲ ಎಂದು ಅವರು ನುಡಿದರು. ಸ್ಫೋಟಕ ಸಾಗಾಟದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.
ಘಟನೆಯ ಬಳಿಕ ದೂತಾವಾಸದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಕೆಲವೇ ದಿನಗಳ ಹಿಂದೆ ಭಯೋತ್ಪಾದಕರು ಮಜಾರೆ ಶರೀಫ್‌ನಲ್ಲಿರುವ ಭಾರತೀಯ ದೂತಾವಾಸದ ಮೇಲೆ ದಾಳಿ ನಡೆಸಿರುವುದನ್ನು ಸ್ಮರಿಸಬಹುದಾಗಿದೆ.
Next Story