ಮೋಟರೋಲ ಮೊಬೈಲ್ ಫೋನ್‌ಗಳ ಉತ್ಪಾದನೆ ಸ್ಥಗಿತ: ಲೆನೊವೊ ನಿರ್ಧಾರ
ಲಾಸ್ ವೇಗಸ್, ಜ. 8: ಚೀನಾದ ಲೆನೊವೊ ಕಂಪೆನಿಯು ಮೋಟರೋಲ ಬ್ರಾಂಡ್‌ನ ಮೊಬೈಲ್ ಫೋನ್‌ಗಳ ಉತ್ಪಾದನೆಯನ್ನು ಹಂತ ಹಂತವಾಗಿ ನಿಲ್ಲಿಸಲಿದೆ. ಲೆನೊವೊ 2014ರಲ್ಲಿ ಮೋಟರೋಲ ಫೋನ್ ಬ್ರಾಂಡನ್ನು ಗೂಗಲ್‌ನಿಂದ ಖರೀದಿಸಿತ್ತು.
ಮೊಬೈಲ್ ಫೋನ್ ತಯಾರಿಸಿದ ಮೊದಲ ಕಂಪೆನಿ ಎಂಬ ಹೆಗ್ಗಳಿಕೆ ಹೊಂದಿರುವ ಮೋಟರೋಲ, ಒಂದು ದಶಕದ ಹಿಂದಿನವರೆಗೂ ಮುಂಚೂಣಿಯ ಮೊಬೈಲ್ ಉತ್ಪಾದಕ ಸಂಸ್ಥೆಯಾಗಿತ್ತು. ಆದರೆ, ಹೊಸ ತಲೆಮಾರಿನ ಸ್ಮಾರ್ಟ್ ಫೋನ್ ತಯಾರಕ ಕಂಪೆನಿಗಳೊಂದಿಗೆ ಸ್ಪರ್ಧಿಸುವಲ್ಲಿ ಅದು ಹಿಂದೆ ಬಿತ್ತು. ಅಂತಿಮವಾಗಿ ಅದರ ಮೊಬೈಲ್ ಫೋನ್ ಬ್ರಾಂಡನ್ನು 2012ರಲ್ಲಿ ಗೂಗಲ್ ಖರೀದಿಸಿತು. ಗೂಗಲ್ ಎರಡು ವರ್ಷಗಳ ಬಳಿಕ ಅದನ್ನು ಲೆನೊವೊಗೆ ಮಾರಾಟ ಮಾಡಿತು.
ಮುಂದಿನ ದಿನಗಳಲ್ಲಿ ಲೆನೊವೊ ತಯಾರಿಸುವ ಮೊಬೈಲ್ ಫೋನ್‌ಗಳಲ್ಲಿ ಲೆನೊವೊದ ನೀಲಿ ಲಾಂಛನ ಮತ್ತು ಮೋಟರೋಲದ ‘ಎಂ’ ಲಾಂಛನ ಇರುತ್ತದೆ. ಮೋಟರೋಲದ ಹೆಸರು ಸಂಪೂರ್ಣವಾಗಿ ಮಾಯವಾಗುವುದಿಲ್ಲ. ಲೆನೊವೊ ಹೆಸರಿನಡಿ ಅದು ಕಾಣಿಸಿಕೊಳ್ಳಲಿದೆ.
Next Story