ಇಥಿಯೋಪಿಯ: 140 ಪ್ರತಿಭಟನಕಾರರ ಹತ್ಯೆ
ನೈರೋಬಿ, ಜ. 8: ಇಥಿಯೋಪಿಯದಲ್ಲಿ ರಾಜಧಾನಿಯನ್ನು ಕೃಷಿ ಪ್ರದೇಶಗಳಿಗೆ ವಿಸ್ತರಿಸುವ ಸರಕಾರದ ನಿರ್ಧಾರವನ್ನು ಪ್ರತಿಭಟಿಸಿ ಎರಡು ತಿಂಗಳುಗಳಿಂದ ಸರಕಾರಿ ವಿರೋಧಿ ಪ್ರತಿಭಟನೆಗಳು ನಡೆಯುತ್ತಿದ್ದು, ಪೊಲೀಸ್ ಕಾರ್ಯಾಚರಣೆಯಲ್ಲಿ ಕನಿಷ್ಠ 140 ಮಂದಿ ಮೃತಪಟ್ಟಿದ್ದಾರೆ ಎಂದು ಹ್ಯೂಮನ್ ರೈಟ್ಸ್ ವಾಚ್ ಹೇಳಿದೆ.
‘‘ಭದ್ರತಾ ಪಡೆಗಳು ಕನಿಷ್ಠ 140 ಪ್ರತಿಭಟನಕಾರರನ್ನು ಕೊಂದಿವೆ ಹಾಗೂ ಅದಕ್ಕಿಂತಲೂ ಹೆಚ್ಚಿನ ಮಂದಿಯನ್ನು ಗಾಯಗೊಳಿಸಿವೆ. ಇದು 2005ರ ಚುನಾವಣೆಯ ಬಳಿಕ ಇಥಿಯೋಪಿಯದಲ್ಲಿ ಕಂಡುಬಂದಿರುವ ಅತ್ಯಂತ ದೊಡ್ಡ ಬಿಕ್ಕಟ್ಟಾಗಿದೆ’’ ಎಂದು ವಾಚ್‌ನ ಫೆಲಿಕ್ಸ್ ಹಾರ್ನ್ ಹೇಳಿದರು.
Next Story