ಐರೋಪ್ಯ ಒಕ್ಕೂಟದಿಂದ ಹೊರಬರಲು ಹೆಚ್ಚಿನ ಬ್ರಿಟಿಷರ ಬಯಕೆ: ಸಮೀಕ್ಷೆಯಲ್ಲಿ ಬಹಿರಂಗ
ಲಂಡನ್, ಜ. 8: ಹೆಚ್ಚಿನ ಬ್ರಿಟಿಷ್ ಪ್ರಜೆಗಳು ಐರೋಪ್ಯ ಒಕ್ಕೂಟದಿಂದ ಹೊರಬರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಯುರೋಪ್‌ನಿಂದ ಹೊರಗುಳಿದ ಭಾವನೆ ಹೊಂದಿರುವ ಬ್ರಿಟಿಷರ ಸಂಖ್ಯೆ ಕಳೆದ 12 ತಿಂಗಳ ಅವಧಿಯಲ್ಲಿ ಹೆಚ್ಚುತ್ತಿದೆ ಎಂದು ಲಂಡನ್‌ನ ಸಮೀಕ್ಷಾ ಕಂಪೆನಿ ಒಆರ್‌ಬಿ ಇಂಟರ್‌ನ್ಯಾಶನಲ್ ಹೇಳಿದೆ.
15 ಸದಸ್ಯರ ಐರೋಪ್ಯ ಒಕ್ಕೂಟ ದಿಂದ ಬ್ರಿಟನ್ ಹೊರಬರಬೇಕೆನ್ನುವ ವಿಷಯದಲ್ಲಿ ಬಹುಮತ ಹೊಂದಿರುವ ಏಕೈಕ ಐರೋಪ್ಯ ಒಕ್ಕೂಟದ ದೇಶ ಬ್ರಿಟನ್ ಆಗಿದೆ ಹಾಗೂ ಆ ದೇಶದಲ್ಲಿ ಯುರೋಗೆ ಬದಲಾಗಿ ತಮ್ಮದೇ ದೇಶದ ಕರೆನ್ಸಿಯನ್ನು ಇಷ್ಟಪಡುವವರ ಸಂಖ್ಯೆಯೂ ಹೆಚ್ಚುತ್ತಿದೆ ಎಂಬುದನ್ನು ನೂತನ ಸಂಶೋಧನೆ ಕಂಡುಕೊಂಡಿದೆ ಎಂದು ಕ್ಸಿನುವಾ ವರದಿ ಮಾಡಿದೆ.
ಸಮೀಕ್ಷೆ ನಡೆಸಲಾದ ಇತರ ಐರೋಪ್ಯ ಒಕ್ಕೂಟದ ದೇಶಗಳೆಂದರೆ ಫ್ರಾನ್ಸ್, ಇಟಲಿ, ಗ್ರೀಸ್, ನೆದರ್‌ಲ್ಯಾಂಡ್ಸ್, ಅಯರ್‌ಲ್ಯಾಂಡ್, ಡೆನ್ಮಾರ್ಕ್, ಫಿನ್‌ಲ್ಯಾಂಡ್, ರೊಮೇನಿಯ, ಬಲ್ಗೇರಿಯ, ಬೆಲ್ಜಿಯಂ, ಸ್ಪೇನ್, ಸ್ವೀಡನ್ ಮತ್ತು ಐಸ್‌ಲ್ಯಾಂಡ್. ಸಮೀಕ್ಷೆಯ ವೇಳೆ, 14,500ಕ್ಕೂ ಅಧಿಕ ವಯಸ್ಕರನ್ನು ಸಂದರ್ಶಿಸಲಾಯಿತು.